For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ಟಾಪ್ ನಾಯಕಿಯರನ್ನೇ ಹಿಂದಿಕ್ಕಿದ ಗಾಯಕಿ ಕನ್ನಿಕಾ ಕಪೂರ್!

  |

  ಬಾಲಿವುಡ್ ಟಾಪ್ ನಾಯಕಿಯರಾದ ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರ, ಅನುಷ್ಕಾ ಶರ್ಮಾ ಇನ್ನೂ ಹಲವು ಸ್ಟಾರ್ ನಟಿಯರನ್ನೇ ಹಿಂದಿಕ್ಕಿದ್ದಾರೆ ಗಾಯಕಿ ಕನ್ನಿಕಾ ಕಪೂರ್.

  ಹೌದು, ಈ ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಎಲ್ಲಾ ಟಾಪ್ ನಟಿಯರನ್ನು ಹಿಂದಿಕ್ಕಿಬಿಟ್ಟಿದ್ದಾರೆ ಬೇಬಿ ಡಾಲ್ ಕನ್ನಿಕಾ ಕಪೂರ್.

  ಲಾಕ್‌ಡೌನ್ ಸಮಯದಲ್ಲಿ ಅಂತರ್ಜಾಲದಲ್ಲಿ ಅತಿ ಹೆಚ್ಚು ಹುಡುಕಾಟಕ್ಕೆ ಒಳಗಾದವರಲ್ಲಿ ದೀಪಿಕಾ ಪಡುಕೋಣೆ, ಅನುಷ್ಕಾ ಶರ್ಮಾ, ಪ್ರಿಯಾಂಕಾ ಚೋಪ್ರಾ ಅವರನ್ನೂ ಹಿಂದಿಕ್ಕಿದ್ದಾರೆ ಕನ್ನಿಕಾ ಕಪೂರ್.

  ಕನ್ನಿಕಾ ಕಪೂರ್‌ ಗೆ ಇದ್ದಕ್ಕಿದ್ದಂತೆ ಇಷ್ಟು ಬೇಡಿಕೆ ಬರಲು ಕಾರಣ ಕೊರೊನಾ ವೈರಸ್. ಕನ್ನಿಕಾ ಕಪೂರ್ ಅವರು ಕೊರೊನಾ ವೈರಸ್‌ ಗೆ ತುತ್ತಾಗಿದ್ದರು. ಇದೀಗ ಗುಣಮುಖ ಹೊಂದಿ ಮನೆಯಲ್ಲಿದ್ದಾರೆ.

  ಪಾರ್ಟಿ ಮಾಡಿದ್ದ ಕನ್ನಿಕಾ ಕಪೂರ್

  ಪಾರ್ಟಿ ಮಾಡಿದ್ದ ಕನ್ನಿಕಾ ಕಪೂರ್

  ಕನ್ನಿಕಾ ಕಪೂರ್ ವಿದೇಶದಿಂದ ಭಾರತಕ್ಕೆ ಬಂದಿದ್ದರೂ, ಸರ್ಕಾರಕ್ಕೆ ಸೂಕ್ತ ಮಾಹಿತಿ ನೀಡದೆ ಪಾರ್ಟಿಯಲ್ಲಿ ಭಾಗವಹಿಸಿ ಇತರರಿಗೂ ಸಮಸ್ಯೆ ತಂದಿಟ್ಟಿದ್ದರು. ಇವರು ಭಾಗವಹಿಸಿದ್ದ ಪಾರ್ಟಿಯಲ್ಲಿ ಮಾಜಿ ಸಿಎಂ ವಸುಂಧರಾ ರಾಜೆ ಮತ್ತು ಸಂಸದ ದುಷ್ಯಂತ್ ಸಿಂಗ್ ಸಹ ಭಾಗವಹಿಸಿದ್ದರು. ಇದು ಭಾರಿ ಚರ್ಚೆಗೆ ಕಾರಣವಾಗಿತ್ತು.

  ಕೊರೊನಾ ಗೆ ತುತ್ತಾದ ಮೊದಲ ಭಾರತೀಯ ಸೆಲೆಬ್ರಿಟಿ

  ಕೊರೊನಾ ಗೆ ತುತ್ತಾದ ಮೊದಲ ಭಾರತೀಯ ಸೆಲೆಬ್ರಿಟಿ

  ಸತತ ಆರು ಬಾರಿ ಕೊರೊನಾ ಪರೀಕ್ಷೆ ಮಾಡಿದಾಗಲೂ ಕನ್ನಿಕಾ ಕಪೂರ್ ಅವರಿಗೆ ಪಾಸಿಟಿವ್ ಬಂದಿತ್ತು, ಕನ್ನಿಕಾ ಕಪೂರ್ ಗುಣಮುಖರಾಗಲು ಕೆಲವು ವಾರಗಳೇ ಹಿಡಿದಿದ್ದವು. ಕೊರೊನಾ ಗೆ ತುತ್ತಾದ ಭಾರತದ ಮೊದಲ ಸೆಲೆಬ್ರಟಿ ಸಹ ಅವರೇ ಆಗಿದ್ದರು. ಹಾಗಾಗಿ ಅವರ ಬಗ್ಗೆ ಹೆಚ್ಚಿನ ಹುಡುಕಾಟ ಅಂತರ್ಜಾಲದಲ್ಲಿ ನಡೆದಿದೆ.

  ಆಸ್ಪತ್ರೆಯಲ್ಲಿ ಅಹಂಕಾರ ಪ್ರದರ್ಶಿಸಿದ್ದ ಕನ್ನಿಕಾ

  ಆಸ್ಪತ್ರೆಯಲ್ಲಿ ಅಹಂಕಾರ ಪ್ರದರ್ಶಿಸಿದ್ದ ಕನ್ನಿಕಾ

  ಆಸ್ಪತ್ರೆಯಲ್ಲಿದ್ದಾಗ ಕನ್ನಿಕಾ ಕಪೂರ್ ತನ್ನ 'ಸೆಲೆಬ್ರಿಟಿ ಅಂಹಕಾರ' ಪ್ರದರ್ಶಿಸಿ ಸಹ ಸುದ್ದಿಯಾಗಿದ್ದರು. ಕೊನೆಗೆ ಆಸ್ಪತ್ರೆಯವರು, 'ನೀವು ಇಲ್ಲಿ ಸೆಲೆಬ್ರಿಟಿಯಲ್ಲ, ಸಾಮಾನ್ಯ ವ್ಯಕ್ತಿ' ಎಂದು ಬುದ್ಧಿವಾದ ಹೇಳಬೇಕಾಯಿತು. ಇದು ಸಹ ಆಕೆಯ ಬಗ್ಗೆ ಕುತೂಹಲ ಹೆಚ್ಚಲು ಕಾರಣವಾಯಿತು.

  ಪ್ರಖ್ಯಾತ ಹಾಡು ಹಾಡಿರುವ ಕನ್ನಿಕಾ

  ಪ್ರಖ್ಯಾತ ಹಾಡು ಹಾಡಿರುವ ಕನ್ನಿಕಾ

  ಕನ್ನಿಕಾ ಕಪೂರ್ 'ಬೇಬಿ ಡಾಲ್', 'ಚಿಟ್ಟಿಯಾ ಕಲ್ಲಂಯ್ಯಾವೆ' ಸೇರಿ ಇನ್ನೂ ಹಲವು ಹಾಡುಗಳನ್ನು ಹಾಡಿದ್ದಾರೆ. ಕೊರೊನಾ ದಿಂದ ಪೂರ್ಣ ಗುಣಮುಖರಾಗಿರುವ ಅವರು ಪ್ರಸ್ತುತ ಲಾಕ್‌ಡೌನ್ ಪಾಲಿಸುತ್ತಾ ಮನೆಯಲ್ಲಿದ್ದಾರೆ.

  English summary
  Singer Kannika Kapoor is the most searched lady celebrity in India in the lock down time. She left behind Deepika, Priyanka, Anushka.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X