For Quick Alerts
  ALLOW NOTIFICATIONS  
  For Daily Alerts

  'ಕಾಂತಾರ ಹಿಂದಿ' ಅಬ್ಬರ: ಶೆಟ್ರು ಸಿನಿಮಾ ಮುಂದೆ ರಶ್ಮಿಕಾ ಹೊಸ ಚಿತ್ರ ಖತಮ್ ಟಾಟಾ 'ಗುಡ್ ಬೈ'!

  |

  ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪ್ರವೇಶಿಸಿದ ನಟಿ ರಶ್ಮಿಕಾ ಮಂದಣ್ಣ ಚಲೋ ಚಿತ್ರದ ಮೂಲಕ ಟಾಲಿವುಡ್ ಪ್ರವೇಶಿಸಿ ನಂತರ ವಿಜಯ್ ದೇವರಕೊಂಡ ಜತೆ ಗೀತ ಗೋವಿಂದಂ ಸಿನಿಮಾದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡು ಸೆನ್ಸೇಷನಲ್ ನಟಿಯಾದರು. ಆ ಒಂದು ಚಿತ್ರದಿಂದ ರಶ್ಮಿಕಾ ಮಂದಣ್ಣ ದೊಡ್ಡ ಹೆಸರನ್ನು ಮಾಡಿದರು ಎಂದರೆ ತಪ್ಪಾಗಲಾರದು. ನಂತರದ ದಿನಗಳಲ್ಲಿ ಕಾಲಿವುಡ್‌ಗೂ ಎಂಟ್ರಿ ಕೊಟ್ಟಿದ್ದ ನಟಿ ರಶ್ಮಿಕಾ ಮಂದಣ್ಣ ಈ ವರ್ಷ ಬಾಲಿವುಡ್‌ಗೂ ಸಹ ಪ್ರವೇಶಿಸಿದ್ದಾರೆ.

  ಹೌದು, ರಶ್ಮಿಕಾ ಮಂದಣ್ಣ ಅಭಿನಯದ ಮೊದಲ ಹಿಂದಿ ಚಿತ್ರ 'ಗುಡ್ ಬೈ' ಇದೇ ತಿಂಗಳು ಬಿಡುಗಡೆಗೊಂಡಿತ್ತು. ಅಮಿತಾಭ್ ಬಚ್ಚನ್, ನೀನಾ ಗುಪ್ತಾ ಹಾಗೂ ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ಈ ಚಿತ್ರ ಅಕ್ಟೋಬರ್ 7ರ ಶುಕ್ರವಾರದಂದು ತೆರೆಕಂಡಿತ್ತು. ಚಿತ್ರಕ್ಕೂ ಮುನ್ನ ಭರ್ಜರಿ ಪ್ರಚಾರ ನಡೆಸಿದ್ದ ರಶ್ಮಿಕಾ ಮಂದಣ್ಣ ತನ್ನ ಅಧಿಕೃತ ಇನ್ಸ್ಟಾಗ್ರಾಮ್‌ನಲ್ಲಿ ಸಾಲು ಸಾಲು ಪೋಸ್ಟ್ ಹಾಕಿದ್ದರು. ಆದರೆ ಈ ಹುಮ್ಮಸ್ಸು ಚಿತ್ರ ಬಿಡುಗಡೆಯಾದ ನಂತರ ಉಳಿದಿಲ್ಲ. ಚಿತ್ರ ಬಿಡುಗಡೆಯಾದ ನಂತರ ಚಿತ್ರದ ಬಗ್ಗೆ ರಶ್ಮಿಕಾ ಯಾವುದೇ ಪೋಸ್ಟ್ ಹಾಕದೇ ಸೈಲೆಂಟ್ ಆಗಿದ್ದಾರೆ.

  ಕಾಂತಾರ ತೆಲುಗು ಬುಕಿಂಗ್‍ಗೆ ದಂಗಾದ ಟಾಲಿವುಡ್; ರಾತ್ರಿ 11 ಗಂಟೆ ನಂತರವೂ ಪ್ರದರ್ಶನ, ಭರ್ಜರಿ ಲಾಭ ಖಚಿತ! ಕಾಂತಾರ ತೆಲುಗು ಬುಕಿಂಗ್‍ಗೆ ದಂಗಾದ ಟಾಲಿವುಡ್; ರಾತ್ರಿ 11 ಗಂಟೆ ನಂತರವೂ ಪ್ರದರ್ಶನ, ಭರ್ಜರಿ ಲಾಭ ಖಚಿತ!

  ಇನ್ನು ರಶ್ಮಿಕಾ ಮಂದಣ್ಣ ಅಭಿನಯದ ಗುಡ್ ಬೈ ಬಿಡುಗಡೆಯಾದ ಮುಂದಿನ ವಾರವೇ ಅಂದರೆ ಅಕ್ಟೋಬರ್ 14ರ ಶುಕ್ರವಾರದಂದು ರಿಷಬ್ ಶೆಟ್ಟಿ ನಿರ್ದೇಶನ, ನಟನೆಯ ಕಾಂತಾರ ಹಿಂದಿ ವರ್ಷನ್ ಬಿಡುಗಡೆಗೊಂಡಿತು. ಮೊದಲೇ ಬಾಕ್ಸ್ ಆಫೀಸ್‌ ಗಳಿಕೆಯಲ್ಲಿ ಆಮೆಗತಿಯಲ್ಲಿನ ಸಾಗುತ್ತಿದ್ದ ಗುಡ್ ಬೈ ಚಿತ್ರ ಕಾಂತಾರ ಹಿಂದಿ ಬಿಡುಗಡೆ ನಂತರ ಮತ್ತಷ್ಟು ಹಿನ್ನಡೆ ಅನುಭವಿಸಿದ್ದು ಸುಳ್ಳಲ್ಲ. ಅಷ್ಟೇ ಅಲ್ಲದೇ ಹಿಂದಿಯ ಹಲವಾರು ಚಿತ್ರಗಳು ಕಾಂತಾರ ಚಿತ್ರದಿಂದ ಪೆಟ್ಟು ತಿಂದಿದ್ದು, ಕಾಂತಾರ ಮಾತ್ರ ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆ ಬೆಳೆ ಬೆಳೆಯುತ್ತಿದೆ. ಮೊದಲ ನಾಲ್ಕು ದಿನ ಒಳ್ಳೆಯ ಕಲೆಕ್ಷನ್ ಮಾಡಿರುವ ಕಾಂತರ ಚಿತ್ರದ ಐದನೇ ದಿನದ ಬುಕಿಂಗ್ ಕೂಡ ಚೆನ್ನಾಗಿದೆ. ಇನ್ನು ಕಾಂತಾರ ಹಿಂದಿ ಚಿತ್ರ ನಾಳೆ ( ಅಕ್ಟೋಬರ್ 19, ಆರನೇ ದಿನ ) ಕೂಡ ತನ್ನ ಪ್ರದರ್ಶನಗಳನ್ನು ಬಹುತೇಕ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಹಾಗಿದ್ದರೆ ಅಕ್ಟೋಬರ್ 19ರ ಬುಧವಾರದಂದು ಬಾಲಿವುಡ್‌ನ ಪ್ರಮುಖ ಸಿನಿಮಾ ಕೇಂದ್ರ ಮುಂಬೈ ನಗರದಲ್ಲಿ ಯಾವ ಚಿತ್ರಗಳು ಎಷ್ಟು ಪ್ರದರ್ಶನಗಳನ್ನು ಹೊಂದಿವೆ ಎಂಬುದರ ಮಾಹಿತಿ ಈ ಕೆಳಕಂಡಂತಿದೆ.

  ಅಕ್ಟೋಬರ್ 19ರಂದು ಮುಂಬೈನಲ್ಲಿ ಚಿತ್ರಗಳು ಪಡೆದಿರುವ ಶೋಗಳ ಸಂಖ್ಯೆ

  ಅಕ್ಟೋಬರ್ 19ರಂದು ಮುಂಬೈನಲ್ಲಿ ಚಿತ್ರಗಳು ಪಡೆದಿರುವ ಶೋಗಳ ಸಂಖ್ಯೆ

  ಸದ್ಯ ಬಾಲಿವುಡ್ ಅಂಗಳದಲ್ಲಿ ಪ್ರದರ್ಶನಗೊಳ್ಳುತ್ತಿರುವ ಪ್ರಮುಖ ಚಿತ್ರಗಳು ಅಕ್ಟೋಬರ್ 19ರಂದು ಮುಂಬೈ ನಗರದಲ್ಲಿ ಪಡೆದುಕೊಂಡಿರುವ ಪ್ರದರ್ಶನಗಳ ಸಂಖ್ಯೆ:

  ಕಾಂತಾರ ( ಹಿಂದಿ ): 332 ಪ್ರದರ್ಶಗಳು

  ಗುಡ್‌ಬೈ: 38 ಪ್ರದರ್ಶನಗಳು

  ವಿಕ್ರಮ್ ವೇದಾ: 164 ಪ್ರದರ್ಶನಗಳು

  ಡಾಕ್ಟರ್ ಜಿ: 329 ಪ್ರದರ್ಶನಗಳು

  ಕೋಡ್ ನೇಮ್ ತಿರಂಗ - 71 ಪ್ರದರ್ಶನಗಳು

  ಪೊನ್ನಿಯಿನ್ ಸೆಲ್ವನ್ ( ಹಿಂದಿ ) - 89 ಪ್ರದರ್ಶನಗಳು

  ( ವಿ.ಸೂ: ಬುಕ್‌ ಮೈ ಶೋನಲ್ಲಿ ಬುಕಿಂಗ್ ಇರುವ ಪ್ರದರ್ಶನಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗಿದೆ )

  ಕಲೆಕ್ಷನ್‌ನಲ್ಲೂ ಕಾಂತಾರ ಮುಂದೆ ಗುಡ್ ಬೈ ಟುಸ್

  ಕಲೆಕ್ಷನ್‌ನಲ್ಲೂ ಕಾಂತಾರ ಮುಂದೆ ಗುಡ್ ಬೈ ಟುಸ್

  ಇನ್ನು ಕಾಂತಾರ ಹಿಂದಿ ಮೊದಲ ನಾಲ್ಕು ದಿನಗಳ ಪೈಕಿ 9.27 ಕೋಟಿ ರೂಪಾಯಿ ಗಳಿಕೆ ಮಾಡಿದ್ದರೆ, ಗುಡ್ ಬೈ 11 ದಿನಗಳಲ್ಲಿ ಕೇವಲ 8.74 ಕೋಟಿ ಗಳಿಕೆ ಮಾಡಿದೆ. ಈ ಮೂಲಕ ಕಲೆಕ್ಷನ್ ವಿಚಾರದಲ್ಲೂ ರಶ್ಮಿಕಾ ಮಂದಣ್ಣ ಅಭಿನಯದ ಚೊಚ್ಚಲ ಹಿಂದಿ ಸಿನಿಮಾ ಮಕಾಡೆ ಮಲಗಿದೆ.

  ರೇಟಿಂಗ್‌ನಲ್ಲೂ ಹಿಂದೆ, ಗುರುವಾರ ಅಂತ್ಯವಾಗಬಹುದು ಓಟ

  ರೇಟಿಂಗ್‌ನಲ್ಲೂ ಹಿಂದೆ, ಗುರುವಾರ ಅಂತ್ಯವಾಗಬಹುದು ಓಟ

  ಇನ್ನು ರಶ್ಮಿಕಾ ಮಂದಣ್ಣ ನಟನೆಯ ಗುಡ್ ಬೈ ಚಿತ್ರ ಬುಕ್ ಮೈ ಶೋ ಅಪ್ಲಿಕೇಶನ್‌ನಲ್ಲಿ 6500 ಮತಗಳೊಂದಿಗೆ 73% ರೇಟಿಂಗ್ ಪಡೆದುಕೊಂಡಿದ್ದು ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿದೆ. ಇನ್ನು ಈ ಶುಕ್ರವಾರ ಮತ್ತಷ್ಟು ಚಿತ್ರಗಳು ಬಿಡುಗಡೆಯಾಗಲಿದ್ದು, ಈಗಾಗಲೇ ಖಾಲಿ ಹೊಡೆಯುತ್ತಿರುವ ಗುಡ್ ಬೈ ಸಂಪೂರ್ಣವಾಗಿ ತನ್ನ ಓಟವನ್ನು ನಿಲ್ಲಿಸಲಿದೆ.

  English summary
  Kantara Hindi 6th day Mumbai city screen count; Rashmika's goodbye washed out . Read on
  Tuesday, October 18, 2022, 17:34
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X