For Quick Alerts
  ALLOW NOTIFICATIONS  
  For Daily Alerts

  'ಪೊನ್ನಿಯಿಲ್ ಸೆಲ್ವನ್' 27 ದಿನಗಳ ಗಳಿಕೆ 13 ದಿನಕ್ಕೆ ಮೀರಿಸಿದ ಶಿವ: ಬಾಕ್ಸಾಫೀಸ್‌ನಲ್ಲಿ 'ಕಾಂತಾರ' ಹೊಸ ದಾಖಲೆ!

  |

  ಡಿವೈನ್ ಬ್ಲಾಕ್‌ಬಸ್ಟರ್ 'ಕಾಂತಾರ' ಸಿನಿಮಾ ಗೆಲುವಿನ ನಾಗಾಲೋಟ ಮುಂದುವರೆದಿದೆ. ಕನ್ನಡದಲ್ಲಿ ರಿಲೀಸ್ ಆಗಿ 2 ವಾರಗಳ ನಂತರ ಬೇರೆ ಭಾಷೆಗಳಿಗೂ ಡಬ್ ಆಗಿ ತೆರೆಗಪ್ಪಳಿಸಿತ್ತು. ಹಿಂದಿ, ತೆಲುಗು, ಮಲಯಾಳಂ ವರ್ಷನ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಸದ್ಯ 'ಪೊನ್ನಿಯಿನ್ ಸೆಲ್ವನ್' ಕಲೆಕ್ಷನ್ ಮೀರಿ ದಾಖಲೆ ಮುರಿದು ಸಿನಿಮಾ ಮುನ್ನುಗ್ಗುತ್ತಿದೆ.

  ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಕಾಂತಾರ' ಚಿತ್ರ ಕರ್ನಾಟಕದಲ್ಲಿ ಮಾತ್ರವಲ್ಲ, ಆಂಧ್ರ, ತೆಲಂಗಾಣ, ತಮಿಳುನಾಡು ಹಾಗೂ ಕೇರಳದಲ್ಲೂ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡ್ತಿದೆ. ಇನ್ನು ಹಿಂದಿ ಬೆಲ್ಟ್‌ನಲ್ಲಿ 'ಕಾಂತಾರ' ಆರ್ಭಟವನ್ನು ತಡೆಯೋಕೆ ಸಾಧ್ಯವಾಗ್ತಿಲ್ಲ. ದೀಪಾವಳಿ ಸಂಭ್ರಮದಲ್ಲಿ 'ರಾಮ್‌ಸೇತು' ಹಾಗೂ 'ಥ್ಯಾಂಕ್‌ಗಾಡ್' ರೀತಿಯ ದೊಡ್ಡ ಸಿನಿಮಾಗಳು ಬಂದರೂ ಶಿವನ ಅಬ್ಬರ ಮುಂದುವರೆದಿದೆ.

  ಪಂಜುರ್ಲಿ, ಗುಳಿಗದ ಕಥೆ ಪ್ರಪಂಚಕ್ಕೆ ಹೇಳಿದ ರಿಷಬ್ ಶೆಟ್ಟಿ ನಂಬುವ ದೈವ ಯಾವುದು?ಪಂಜುರ್ಲಿ, ಗುಳಿಗದ ಕಥೆ ಪ್ರಪಂಚಕ್ಕೆ ಹೇಳಿದ ರಿಷಬ್ ಶೆಟ್ಟಿ ನಂಬುವ ದೈವ ಯಾವುದು?

  ಸೆಪ್ಟೆಂಬರ್ 30ಕ್ಕೆ ಮಣಿರತ್ನಂ ನಿರ್ದೇಶನದ 'ಪೊನ್ನಿಯಿಲ್ ಸೆಲ್ವನ್' ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ 5 ಭಾಷೆಗಳಲ್ಲಿ ತೆರೆಗಪ್ಪಳಿಸಿತ್ತು. ಅದೇ ದಿನ 'ಕಾಂತಾರ' ಇಂಗ್ಲೀಷ್ ಸಬ್‌ಟೈಟಲ್‌ ಜೊತೆಗೆ ವಿಶ್ವದಾದ್ಯಂತ ಕನ್ನಡದಲ್ಲೇ ತೆರೆಗಪ್ಪಳಿಸಿತ್ತು.

  'ಪೊನ್ನಿಯಿಲ್ ಸೆಲ್ವನ್'ಗೆ ಶಿವನ ಟಕ್ಕರ್

  'ಪೊನ್ನಿಯಿಲ್ ಸೆಲ್ವನ್'ಗೆ ಶಿವನ ಟಕ್ಕರ್

  'ಪೊನ್ನಿಯಿಲ್ ಸೆಲ್ವನ್' 27 ದಿನಗಳ ಗಳಿಕೆಯನ್ನು 13 ದಿನದಲ್ಲಿ 'ಕಾಂತಾರ' ಸಿನಿಮಾ ಮೀರಿಸಿದೆ. ಹೌದು ಭಾರತದಲ್ಲಿ ರಿಷಬ್ ಶೆಟ್ಟಿ ಚಿತ್ರದ 13 ದಿನಗಳ ಹಿಂದಿ ವರ್ಷನ್ ಕಲೆಕ್ಷನ್ 29 ಕೋಟಿ ರೂ. ದಾಟಿದೆ. ಆ ಮೂಲಕ ಬಾಕ್ಸಾಫೀಸ್‌ನಲ್ಲಿ 'ಪೊನ್ನಿಯಿಲ್ ಸೆಲ್ವನ್' ಹಿಂದಿ ವರ್ಷನ್ ಕಲೆಕ್ಷನ್ ಹಿಂದಿಕ್ಕಿ 'ಕಾಂತಾರ' ಸಿನಿಮಾ ಮುನ್ನುಗ್ಗುತ್ತಿದೆ. ಸೆಪ್ಟೆಂಬರ್ 30ಕ್ಕೆ ಹಿಂದಿಯಲ್ಲೂ ಡಬ್ ಆಗಿ ಮಣಿರತ್ನಂ ಸಿನಿಮಾ ರಿಲೀಸ್ ಆಗಿತ್ತು. ಆದರೆ 'ಕಾಂತಾರ' ಹಿಂದಿ ವರ್ಷನ್ ಅಕ್ಟೋಬರ್ 14ಕ್ಕೆ ತೆರೆಗಪ್ಪಳಿಸಿತ್ತು.

  30 ಕೋಟಿ ಬಾಚಿದ ತೆಲುಗು ವರ್ಷನ್

  30 ಕೋಟಿ ಬಾಚಿದ ತೆಲುಗು ವರ್ಷನ್

  ಅಕ್ಟೋಬರ್ 15ಕ್ಕೆ 'ಕಾಂತಾರ' ತೆಲುಗು ವರ್ಷನ್ ತೆರೆಗಪ್ಪಳಿಸಿತ್ತು. 12 ದಿನಕ್ಕೆ ಚಿತ್ರ 30 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದು, 18 ಕೋಟಿ ನೆಟ್ ಕಲೆಕ್ಷನ್ ಮಾಡಿದೆ. ದೀಪಾವಳಿ ಸಂಭ್ರಮದಲ್ಲಿ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಇದೀಗ 'ಕಾಂತಾರ' ಟೂರ್ ಶುರುವಾಗುತ್ತಿದೆ. ಶನಿವಾರ ಚಿತ್ರರಂಗ ತಿರುಪತಿ, ವಿಜಯವಾಡ, ವೈಜಾಕ್‌ಗೆ ತೆರಳಿ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಲು ಮುಂದಾಗಿದೆ.

  ತಮಿಳು, ಮಲಯಾಳಂ ವರ್ಷನ್‌ ಹಿಟ್

  ತಮಿಳು, ಮಲಯಾಳಂ ವರ್ಷನ್‌ ಹಿಟ್

  'ಕಾಂತಾರ' ಮಲಯಾಳಂ ವರ್ಷನ್ ಅಕ್ಟೋಬರ್ 20ಕ್ಕೆ ರಿಲೀಸ್ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇನ್ನು ಅದಕ್ಕಿಂತ ಮೊದಲೇ ರಿಲೀಸ್ ಆಗಿದ್ದ ತಮಿಳು ವರ್ಷನ್‌ ಕೂಡ ತಮಿಳುನಾಡು ಥಿಯೇಟರ್‌ಗಳಲ್ಲಿ ಸದ್ದು ಮಾಡ್ತಿದೆ. ಕೆಲವೆಡೆ ಥಿಯೇಟರ್‌ಗಳು ಹೌಸ್‌ಫುಲ್ ಆಗುತ್ತಿರುವುದು ವಿಶೇಷ.

  200 ಕೋಟಿ ಕ್ಲಬ್‌ನತ್ತ 'ಕಾಂತಾರ'

  200 ಕೋಟಿ ಕ್ಲಬ್‌ನತ್ತ 'ಕಾಂತಾರ'

  ವಿಶ್ವದಾದ್ಯಂತ 'ಕಾಂತಾರ' ಸಿನಿಮಾ ಕಲೆಕ್ಷನ್ ಜೋರಾಗಿದೆ. ಈಗಾಗಲೇ ಸಿನಿಮಾ ಒಟ್ಟು 188 ಕೋಟಿ ರೂ. ಅಧಿಕ ಕಲೆಕ್ಷನ್ ಮಾಡಿರುವ ಅಂದಾಜಿದೆ. ಶೀಘ್ರದಲ್ಲೇ ಸಿನಿಮಾ 200 ಕೋಟಿ ಗಡಿ ದಾಟುವ ಸುಳಿವು ಸಿಗುತ್ತಿದೆ. ಮೀಡಿಯಂ ಬಜೆಟ್ ಸಿನಿಮಾವೊಂದು ಈ ಪಾಟಿ ಸದ್ದು ಮಾಡುವುದು ತಮಾಷೆಯ ಮಾತಲ್ಲ. ಎಲ್ಲಾ ವರ್ಗದ ಪ್ರೇಕ್ಷಕರನ್ನು ಸೆಳೆಯುವಲ್ಲಿ ರಿಷಬ್ ಶೆಟ್ಟಿ ನಿರ್ದೇಶನದ ಸಿನಿಮಾ ಸಕ್ಸಸ್ ಕಂಡಿದೆ.

  English summary
  Kantara Hindi has crossed Ponniyin Selvan Hindi Lifetime Nett in India. Kantara hindi version Has Done 30 crore Collection in 13 Days. Know More.
  Thursday, October 27, 2022, 18:02
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X