For Quick Alerts
  ALLOW NOTIFICATIONS  
  For Daily Alerts

  ಕಂಟೆಂಟ್ ಕಿಂಗ್.. ಪ್ರೇಕ್ಷಕರು ಕಿಂಗ್ ಮೇಕರ್ಸ್: 'ರಾಮ್‌ಸೇತು' - 'ಥ್ಯಾಂಕ್‌ಗಾಡ್' ಸ್ಕ್ರೀನ್ಸ್ ಕಿತ್ತುಕೊಂಡ 'ಕಾಂತಾರ'!

  |

  ಹಿಂದಿ ಬೆಲ್ಟ್‌ನಲ್ಲಿ 'ಕಾಂತಾರ' ಕಾರುಬಾರು ಮುಂದುವರೆದಿದೆ. 50 ಕೋಟಿ ಕ್ಲಬ್‌ನಲ್ಲಿ ಸಿನಿಮಾ ಮುನ್ನುಗ್ಗುತ್ತಿದ್ದು ಬಾಲಿವುಡ್‌ನ ಇತರೆ ಸಿನಿಮಾಗಳಿಗೆ ಸೆಡ್ಡು ಹೊಡೆದಿದೆ. ದೀಪಾವಳಿ ಸಂಭ್ರಮದಲ್ಲಿ ತೆರೆಗೆ ಬಂದ 'ರಾಮ್‌ಸೇತು' ಹಾಗೂ 'ಥ್ಯಾಂಕ್‌ಗಾಡ್' ಸಿನಿಮಾಗಳು ಕೂಡ ಕನ್ನಡ ಸಿನಿಮಾ ಮಂಕಾಗಿವೆ. ಇದು ಬಿಟೌನ್ ಮಂದಿ ನಿದ್ದೆ ಕೆಡಿಸಿದೆ.

  ಅಕ್ಟೋಬರ್ 14ಕ್ಕೆ ಹಿಂದಿಗೆ ಡಬ್ ಆಗಿ 'ಕಾಂತಾರ' ಸಿನಿಮಾ ರಿಲೀಸ್ ಆಗಿತ್ತು, ಮೊದಲ ದಿನದಿಂದಲೂ ಸಿನಿಮಾ ಪ್ರೇಕ್ಷಕರನ್ನು ರಂಜಿಸುತ್ತಾ, ಬೆರಗಾಗುವಂತೆ ಮಾಡುತ್ತಾ ಬರುತ್ತಿದೆ. ಕರಾವಳಿಯ ಆಚರಣೆಗಳು, ಸಂಸ್ಕೃತಿಯನ್ನು ಕಂಡು ಧನ್ಯರಾಗುತ್ತಿದ್ದಾರೆ. ಸಿನಿಮಾ ನೋಡದ ಪ್ರತಿಯೊಬ್ಬರು ಬಹುಪರಾಕ್ ಹೇಳುತ್ತಿದ್ದಾರೆ. ದೊಡ್ಡ ದೊಡ್ಡ ಸೂಪರ್ ಸ್ಟಾರ್‌ಗಳೇ ಸಿನಿಮಾ ನೋಡಿ ರಿಷಬ್ ಶೆಟ್ಟಿ ಮತ್ತವರ ತಂಡಕ್ಕೆ ಹ್ಯಾಟ್ಸಾಫ್ ಹೇಳುತ್ತಿದ್ದಾರೆ. ಒಂದು ಯೂನಿವರ್ಷಲ್ ಸಬ್ಜೆಕ್ಟ್ ಭಾಷೆಯ ಗಡಿಮೀರಿ ಹೇಗೆಲ್ಲಾ ಸದ್ದು ಮಾಡಬಹುದು ಎನ್ನುವುದು 'ಕಾಂತಾರ' ಚಿತ್ರದಿಂದ ಮತ್ತೆ ಸಾಬೀತಾಗಿದೆ.

  ವರಾಹಂ ರೂಪಂ ಹಾಡಿನ ಮೇಲೆ ಕೇಸ್ ಹಾಕಿದ್ದು ಹಣಕ್ಕಾಗಿನಾ? ನಮ್ಮ ಬೇಡಿಕೆ ಇಷ್ಟೇ ಎಂದ ತೈಕ್ಕುಡಂ ಬ್ರಿಡ್ಜ್ವರಾಹಂ ರೂಪಂ ಹಾಡಿನ ಮೇಲೆ ಕೇಸ್ ಹಾಕಿದ್ದು ಹಣಕ್ಕಾಗಿನಾ? ನಮ್ಮ ಬೇಡಿಕೆ ಇಷ್ಟೇ ಎಂದ ತೈಕ್ಕುಡಂ ಬ್ರಿಡ್ಜ್

  ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ 'ಕಾಂತಾರ' ಸಿನಿಮಾ ಬಾಲಿವುಡ್ ಸೂಪರ್ ಸ್ಟಾರ್‌ಗಳ ಬಹುಕೋಟಿ ವೆಚ್ಚದ ಸಿನಿಮಾಗಳಿಗೆ ಸವಾಲಾಗಿದೆ. ಅಕ್ಷಯ್ ಕುಮಾರ್ ನಟನೆಯ 'ರಾಮ್‌ಸೇತು' ಅಜಯ್ ದೇವಗನ್ ಲೀಡ್ ರೋಲ್‌ನಲ್ಲಿ ಮಿಂಚಿರುವ 'ಥ್ಯಾಂಕ್‌ಗಾಡ್' ಸಿನಿಮಾಗಳು ಬಾಲಿವುಡ್ ಪ್ರೇಕ್ಷಕರನ್ನು ರಂಜಿಸುವಲ್ಲಿ ವಿಫಲವಾಗಿದೆ.

  ಸ್ಕ್ರೀನ್ಸ್ ಕಿತ್ತುಕೊಂಡ 'ಕಾಂತಾರ'

  ಸ್ಕ್ರೀನ್ಸ್ ಕಿತ್ತುಕೊಂಡ 'ಕಾಂತಾರ'

  ಅಕ್ಟೋಬರ್ 25ರಂದು ಅಕ್ಷಯ್‌ ಕುಮಾರ್ ನಟನೆಯ 'ರಾಮ್‌ಸೇತು' ಸಿನಿಮಾ ತೆರೆಗೆ ಬಂದಿತ್ತು. 'ರಾಮ್‌ಸೇತು' ಪ್ರಾಕೃತಿಕವೋ ಅಥವಾ ಮನುಷ್ಯ ನಿರ್ಮಿತವೋ ಎನ್ನುವ ವಿಚಾರದ ಸುತ್ತಾ ಈ ಸಿನಿಮಾ ನಿರ್ಮಾಣವಾಗಿದೆ. ಅಜಯ್ ದೇವಗನ್ ನಟನೆಯ 'ಥ್ಯಾಂಕ್‌ಗಾಡ್' ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ ಎನಿಸಿಕೊಂಡಿತ್ತು. ಎರಡು ಚಿತ್ರಗಳಿಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ಆದರೆ ಬಾಕ್ಸಾಫೀಸ್‌ನಲ್ಲಿ ಎರಡೂ ಸಿನಿಮಾಗಳು ಸದ್ದು ಮಾಡುವಲ್ಲಿ ವಿಫಲವಾಗಿದೆ. ಪರಿಣಾಮ ನಿಧಾನವಾಗಿ ಈ 2 ಸಿನಿಮಾಗಳ ಸ್ಕ್ರೀನ್‌ಗಳನ್ನು 'ಕಾಂತಾರ' ಆವರಿಸಿಕೊಳ್ಳುತ್ತಿದೆ.

  ₹43 ಕೋಟಿ ಬಾಚಿದ ಹಿಂದಿ ವರ್ಷನ್

  ₹43 ಕೋಟಿ ಬಾಚಿದ ಹಿಂದಿ ವರ್ಷನ್

  16 ದಿನಕ್ಕೆ 'ಕಾಂತಾರ' ಹಿಂದಿ ವರ್ಷನ್ 43 ಕೋಟಿ ಕಲೆಕ್ಷನ್ ಮಾಡಿ ಮುನ್ನುತ್ತಿದೆ. ದಿನದಿಂದ ದಿನಕ್ಕೆ ಕಲೆಕ್ಷನ್ ಹೆಚ್ಚಾಗುತ್ತಿದೆ. ಮೌತ್‌ ಪಬ್ಲಿಸಿಟಿಯಿಂದ ಪ್ರೇಕ್ಷಕರು ದೊಡ್ಡಮಟ್ಟದಲ್ಲಿ ಕನ್ನಡ ಸಿನಿಮಾ ನೋಡಲು ಮುಂದಾಗಿದ್ದಾರೆ. ನಿನ್ನೆ (ಅಕ್ಟೋಬರ್ 30) 4.40 ಕೋಟಿ ರೂ. ಗಳಿಕೆ ಕಂಡಿದೆ. ಈ ಬಗ್ಗೆ ಬಾಲಿವುಡ್ ಟ್ರೇಡ್ ಎಕ್ಸ್‌ಪರ್ಟ್ ತರಣ್ ಆದರ್ಶ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಕಂಟೆಂಟ್ ಕಿಂಗ್, ಪ್ರೇಕ್ಷಕರು ಕಿಂಗ್ ಮೇಕರ್ಸ್ ಅನ್ನುವುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಬರೆದುಕೊಂಡಿದ್ದಾರೆ.

  30 ದಿನ ಕಳೆದರೂ ಹೌಸ್‌ಫುಲ್

  30 ದಿನ ಕಳೆದರೂ ಹೌಸ್‌ಫುಲ್

  ರಾಜ್ಯದಲ್ಲೂ 'ಕಾಂತಾರ' ದರ್ಬಾರ್ ಮುಂದುವರೆದಿದೆ. ಸಿನಿಮಾ ರಿಲೀಸ್ ಆಗಿ ತಿಂಗಳು ಕಳೆದರೂ ಕ್ರೇಜ್ ಮಾತ್ರ ಕಮ್ಮಿ ಆಗಿಲ್ಲ. ಇವತ್ತೂ ಕೂಡ ಸಿನಿಮಾ ಶೋಗಳು ಫಾಸ್ಟ್‌ ಫಿಲ್ಲಿಂಗ್/ ಹೌಸ್‌ಫುಲ್ ಆಗುತ್ತಿದೆ. ಪುನೀತ್ ರಾಜ್‌ಕುಮಾರ್ ಕನಸಿನ 'ಗಂಧದಗುಡಿ' ಸಿನಿಮಾ ಬಂದರೂ 'ಕಾಂತಾರ' ದರ್ಬಾರ್ ಕಮ್ಮಿ ಆಗಿಲ್ಲ. ರಾಜ್ಯದಲ್ಲೀಗ ಇವೆರಡೇ ಸಿನಿಮಾಗಳು ಸದ್ದು ಮಾಡ್ತಿವೆ.

  ₹300 ಕೋಟಿ ಕ್ಲಬ್‌ನತ್ತ ದಾಪುಗಾಲು

  ₹300 ಕೋಟಿ ಕ್ಲಬ್‌ನತ್ತ ದಾಪುಗಾಲು

  ಈಗಾಗಲೇ ವಿಶ್ವದಾದ್ಯಂತ 'ಕಾಂತಾರ' 289 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ ಎನ್ನುವ ಅಂದಾಜಿದೆ. ವಿದೇಶಗಳಲ್ಲೂ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈವರೆಗೆ ಕನ್ನಡ ಸಿನಿಮಾಗಳು ರಿಲೀಸ್ ಆಗದ ದೇಶಗಳಲ್ಲಿ 'ಕಾಂತಾರ' ತೆರೆಗಪ್ಪಳಿಸುತ್ತಿದೆ. ಅಲ್ಲೂ ಕೂಡ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿರುವುದು ವಿಶೇಷ. ಶೀಘ್ರದಲ್ಲೇ ಸಿನಿಮಾ 300 ಕೋಟಿ ಕ್ಲಬ್ ಸೇರುವ ಸುಳಿವು ಸಿಗುತ್ತಿದೆ.

  ಕೆಲವೇ ದಿನಗಳಲ್ಲಿ 'ಕಾಂತಾರ' 300 ಕೋಟಿ ಕ್ಲಬ್‌ಗೆ ಎಂಟ್ರಿ: ಹೊಸ ದಾಖಲೆ ಬರೆಯೋದು ಗ್ಯಾರಂಟಿ!ಕೆಲವೇ ದಿನಗಳಲ್ಲಿ 'ಕಾಂತಾರ' 300 ಕೋಟಿ ಕ್ಲಬ್‌ಗೆ ಎಂಟ್ರಿ: ಹೊಸ ದಾಖಲೆ ಬರೆಯೋದು ಗ್ಯಾರಂಟಿ!

  English summary
  Kantara is giving a tough fight to Bollywood Big Release RamSetu and ThankGod. Kantara replaces Thank God and Ram Setu in several Screens. Know More.
  Monday, October 31, 2022, 20:18
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X