For Quick Alerts
  ALLOW NOTIFICATIONS  
  For Daily Alerts

  ಅಕ್ಷಯ್ ಕುಮಾರ್ ಗೆ 'ದುಡ್ಡು ಎಣಿಸುವ ಯಂತ್ರ' ಗಿಫ್ಟ್ ಕೊಟ್ಟಿದ್ದೇಕೆ ಕಪಿಲ್ ಶರ್ಮಾ?

  |

  ವಿಶ್ವದ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರ ಸಾಲಿನಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಸಹ ಇದ್ದಾರೆ. 2020ರ ಫೋರ್ಬ್ಸ್ ಪಟ್ಟಿಯ ಪ್ರಕಾರ ಬಾಲಿವುಡ್ ನ ಸೂಪರ್ ಸ್ಟಾರ್ ಅಕ್ಷಯ್ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯಲ್ಲಿ 6 ಸ್ಥಾನದಲ್ಲಿದ್ದಾರೆ.

  ವಿಲ್ ಸ್ಮಿತ್, ಜಾಕಿ ಚಾನ್ ಸೇರಿದಂತೆ ಅನೇಕ ಪ್ರಸಿದ್ಧ ನಟರನ್ನೆಲ್ಲ ಹಿಂದಿಕ್ಕಿ ಅಕ್ಷಯ್ ಉನ್ನತ ಸ್ಥಾನಕ್ಕೆ ಏರಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿರುವ ಅಕ್ಷಯ್ ವರ್ಷಕ್ಕೆ ಅನೇಕ ಹಿಟ್ ಸಿನಿಮಾಗಳನ್ನು ನೀಡುತ್ತಿದ್ದಾರೆ. ಇದೀಗ ಅರ್ಧ ಡಜನ್ ಸಿನಿಮಾಗಳನ್ನು ಕೈಯಲ್ಲಿಟ್ಟುಕೊಂಡಿರುವ ಅಕ್ಷಯ್ ಸದ್ಯ ಲಕ್ಷ್ಮೀ ಬಾಂಬ್ ಸಿನಿಮಾದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ.

  ಅಬ್ಬಾ..! ವೆಬ್ ಸೀರಿಸ್ ನಲ್ಲಿ ನಟಿಸಲು ಕಪಿಲ್ ಶರ್ಮಾ ಇಷ್ಟೊಂದು ಸಂಭಾವನೆ ಕೇಳಿದ್ರಾ?

  ಇತ್ತೀಚಿಗೆ ಅಕ್ಷಯ್ ಕುಮಾರ್ ಕಿರುತೆರೆಯ ಪ್ರಸಿದ್ಧ ಕಾಮಾಡಿ ಶೋ ದಿ ಕಪಿಲ್ ಶರ್ಮಾ ಶೋಗೆ ಭೇಟಿ ನೀಡಿದ್ದರು. ಈ ಸಮಯದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟ ಅಕ್ಷಯ್ ಕುಮಾರ್ ಗೆ ಕಪಿಲ್ ಶರ್ಮಾ ಹಣ ಎಣಿಸುವ ಯಂತ್ರವನ್ನು ಉಡುಗೊರೆಯಾಗಿ ನೀಡಿ ಅಚ್ಚರಿ ಪಡಿಸಿದ್ದಾರೆ.

  ಕಪಿಲ್ ಶರ್ಮಾ ಗಿಫ್ಟ್ ನೀಡಿದ ಬಳಿಕ ಅಕ್ಷಯ್ ಕುಮಾರ್ ಕುಪಿಲ್ ಶರ್ಮಾ ಕಾಲೆಳೆದಿದ್ದಾರೆ. 'ಇದು ಹಣ ಎಣಿಸುವ ಯಂತ್ರ, ಇದನ್ನು ಕಪಿಲ್ ಶರ್ಮಾ ಅವರ ಮನೆಯಿಂದ ತಂದಿದ್ದಾರೆ. ಚಿತ್ರರಂಗದಲ್ಲಿ ಗಳಿಸುವ ಹಣದ ಅರ್ಧದಷ್ಟು ಹಣವನ್ನು ಅವರೇ ತಿನ್ನುತ್ತಾರೆ' ಎಂದು ಕಾಮಿಡಿ ಮಾಡಿದ್ದಾರೆ. ಅಲ್ಲದೆ ಅಕ್ಷಯ್ ಕುಮಾರ್ ಕಪಿಲ್ ಶರ್ಮಾ ಶೋನಲ್ಲಿ ಭಾಗಿಯಾಗಿದ್ದ ಫೋಟೋ ಶೇರ್ ಮಾಡಿ, ನಿಮ್ಮ ಶೋ ಇಲ್ಲದೆ ಸಿನಿಮಾ ಪ್ರಮೋಷನ್ ಪೂರ್ಣವಾಗಲ್ಲ ಎಂದು ಟ್ವೀಟ್ ಮಾಡಿದ್ದಾರೆ.

  Shashi Kumar ಮಗನಿಗೆ ಸಾಥ್ ಕೊಟ್ಟ ಉಪೇಂದ್ರ | Filmibeat Kannada

  ಅಂದ್ಹಾಗೆ ಲಕ್ಷ್ಮೀ ಬಾಂಬ್ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಚಿತ್ರದಲ್ಲಿ ಅಕ್ಷಯ್ ಕುಮಾರ್ ಗೆ ನಾಯಕಿಯಾಗಿ ಕಿಯಾರಾ ಅಡ್ವಾನಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ತಮಿಳಿನ ಕಾಂಚನಾ ಸಿನಿಮಾದ ರಿಮೇಕ್ ಆಗಿದ್ದು, ಮೂಲ ನಿರ್ದೇಶಕ ರಾಘವ್ ಲಾರೆನ್ಸ್ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ನವೆಂಬರ್ 9ರಂದು ಸಿನಿಮಾ ರಿಲೀಸ್ ಆಗುತ್ತಿದೆ.

  English summary
  Kapil Sharma gifts Akshay Kumar a cash counting machine for being the 2020's highest paid actor.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X