For Quick Alerts
  ALLOW NOTIFICATIONS  
  For Daily Alerts

  ದಾಂಪತ್ಯ ಜೀವನಕ್ಕೆ ಹೆಜ್ಜೆಯಿಟ್ಟ 'ಕಾಮಿಡಿ ನೈಟ್ಸ್' ಕಪಿಲ್ ಶರ್ಮಾ

  |

  ಬಾಲಿವುಡ್ ಬ್ಯೂಟಿಫುಲ್ ಜೋಡಿಗಳಾದ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಹಾಗೂ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ಮದುವೆ ನಂತರ ಈಗ ಬಾಲಿವುಡ್ ನ ಕಿರುತೆರೆ ಕಲಾವಿದ ಕಪಿಲ್ ಶರ್ಮಾ ದಾಂಪತ್ಯ ಜೀವನಕ್ಕೆ ಹೆಜ್ಜೆಯಿಟ್ಟಿದ್ದಾರೆ.

  'ಕಾಮಿಡಿ ನೈಟ್ಸ್ ವಿತ್ ಕಪಿಲ್ ಶರ್ಮಾ' ಕಾರ್ಯಕ್ರಮದ ಮೂಲಕ ಜನರನ್ನ ನಕ್ಕು ನಗಿಸುತ್ತಿದ್ದ ಕಪಿಲ್ ಶರ್ಮಾ ತಮ್ಮ ಬಹುಕಾಲದ ಗೆಳತಿ ಗಿನ್ನಿ ಚತ್ರಾತ್ ಅವರ ಜೊತೆ ಹೊಸ ಜೀವನ ಆರಂಭಿಸಿದ್ದಾರೆ.

  ಮುರಿದು ಬಿತ್ತಾ ಕಪಿಲ್ ಶರ್ಮಾ ಮತ್ತು ಗಿನ್ನಿಯ ಪ್ರೇಮ ಸಂಬಂಧ.?

  ಡಿಸೆಂಬರ್ 12 ರಂದು ಜಲಾಂದರ್ ನಲ್ಲಿ ನಡೆದ ಮದುವೆಯಲ್ಲಿ ಪಂಜಾಬಿ ಸಂಪ್ರದಾಯದಂತೆ ಕಪಿಲ್ ಮತ್ತು ಗಿನ್ನಿ ವಿವಾಹವಾದರು. ಬಹುದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿ ಕೊನೆಗೂ ಮದುವೆ ಆಗುವ ಮೂಲಕ ನೂತನ ಜೀವನಕ್ಕೆ ಕಾಲಿಟ್ಟಿದ್ದಾರೆ.

  ಕಪಿಲ್ ಶರ್ಮಾ ಮದುವೆ ಆಗಲಿರುವ ಹುಡುಗಿ ಯಾರು ಗೊತ್ತೇ?

  ಕಪಿಲ್ ಮತ್ತು ಗಿನ್ನಿ ಮದುವೆ ಸಮಾರಂಭಕ್ಕೆ ಹಲವು ಪಂಜಾಬಿ ಸಿನಿಮಾ ತಾರೆಯರು ಸೇರಿದಂತೆ ಗಣ್ಯರು ಆಗಮಿಸಿದ್ದರು. ಕೃಷ್ಣ ಅಭಿಷೇಕ್, ಸುಮೋನಾ ಚಕ್ರವರ್ತಿ, ಹರ್ಷ್​​​ ಲಿಂಬಾಚಿಯಾ, ಭಾರತಿ ಸಿಂಗ್ ಸೇರಿದಂತೆ ಚಿತ್ರರಂಗದ ಸ್ನೇಹಿತರು ಹಾಗೂ ಕುಟುಂಬಸ್ಥರು ಮದುವೆಯಲ್ಲಿ ಪಾಲ್ಗೊಂಡು ನವಜೋಡಿಗೆ ಶುಭಹಾರೈಸಿದರು.

  ಯಾರು ಈ ಗಿನ್ನಿ?

  ಕಪಿಲ್ ಶರ್ಮಾ ಮದುವೆ ಆಗಿರುವ ಹುಡುಗಿ ಪೂರ್ಣ ಹೆಸರು ಗಿನ್ನಿ ಚತ್ರಾತ್. ಈ ಹಿಂದೆ ಕಪಿಲ್ ಜೊತೆ 'Has Baliye' ಎಂಬ ರಿಯಾಲಿಟಿ ಶೋ ನಲ್ಲಿ ಭಾಗವಹಿಸಿದ್ದರು. ಇವರು ಪ್ರಸ್ತುತದಲ್ಲಿ ಜಲಾಂಧರ್ ನಲ್ಲಿ ವಾಸವಾಗಿದ್ದಾರೆ. ಕಪಿಲ್ ಶರ್ಮಾ ಮತ್ತು ಗಿನ್ನಿ ಚತ್ರಾತ್ ಇಬ್ಬರು ಕಾಲೇಜ್ ಫ್ರೆಂಡ್ಸ್ ಆಗಿದ್ದು, ಕಳೆದ 10 ವರ್ಷಗಳಿಂದ ಇಬ್ಬರು ಪರಿಚಿತರು.

  English summary
  Kapil Sharma and Ginni Chatrath got married yesterday in a Punjabi wedding and while the family is rejoicing, we present to you all the inside pics and videos from the do.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X