»   » ಮದುವೆಯಾಗದೇ ಅವಳಿ ಮಕ್ಕಳಿಗೆ ತಂದೆಯಾದ ಕರಣ್ ಜೋಹರ್! ಅದು ಹೇಗೆ?

ಮದುವೆಯಾಗದೇ ಅವಳಿ ಮಕ್ಕಳಿಗೆ ತಂದೆಯಾದ ಕರಣ್ ಜೋಹರ್! ಅದು ಹೇಗೆ?

Posted By:
Subscribe to Filmibeat Kannada

ಬಾಲಿವುಡ್​ನ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ಕರಣ್ ಜೋಹರ್ ಬಾಡಿಗೆ ತಾಯಿಯ ಮೂಲಕ ಅವಳಿ ಮಕ್ಕಳಿಗೆ ತಂದೆಯಾಗಿದ್ದಾರೆ. ಒಂದು ಹೆಣ್ಣು ಮತ್ತು ಒಂದು ಗಂಡು ಮಗುವಿಗೆ ಅಪ್ಪನಾಗಿರುವ ಕರಣ್ ಜೋಹರ್ ತಮ್ಮ ಮಕ್ಕಳಿಗೆ 'ರೋಹಿ' ಮತ್ತು 'ಯಶ್' ಎಂದು ಹೆಸರಿಟ್ಟಿದ್ದಾರೆ.

ಈ ಬಗ್ಗೆ ಸ್ವತಃ ಕರಣ್ ಜೋಹರ್ ಟ್ವಿಟ್ಟರ್ ನಲ್ಲಿ ಸಂತಸ ಹಂಚಿಕೊಂಡಿದ್ದು, ''ನನ್ನ ಕುಟುಂಬಕ್ಕೆ ಇಬ್ಬರು ಮಕ್ಕಳು ಸೇರ್ಪಡೆಯಾಗಿರುವುದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ತುಂಬಾ ಸಂತೋಷವಾಗುತ್ತಿದೆ. ನಾನು ತಂದೆಯಾಗಿದ್ದಕ್ಕೆ ನನಗೆ ಅತೀವ ಆನಂದವಾಗುತ್ತಿದೆ. ಔಷಧೀಯ ವಿಜ್ಞಾನದ ಸಹಾಯದಿಂದ ಎರಡು ಅಮೂಲ್ಯ ರತ್ನಗಳು ನನಗೆ ಸಿಕ್ಕಂತಾಗಿದೆ'' ಎಂದಿದ್ದಾರೆ.

Karan Johar Becomes A Father Of Twins Via Surrogacy

''ನನ್ನ ಜೀವನದಲ್ಲಿ ಎರಡು ಮಕ್ಕಳ ಆಗಮನದಿಂದಾಗಿ ನನ್ನ ಕೆಲಸ, ಓಡಾಟ ಮತ್ತು ಸಾಮಾಜಿಕ ಜವಾಬ್ದಾರಿಗಳಿಗೆ ಕೊಂಚ ಹಿನ್ನಡೆಯಾಗಲಿದೆ. ನಾನು ಅದಕ್ಕೆ ಮಾನಸಿಕವಾಗಿ ಸಿದ್ದವಾಗಿದ್ದೇನೆ. ನನ್ನ ಜೀವಮಾನದ ಕನಸನ್ನು ನನಸಾಗಿಸಲು ನೆರವಾದ ಆ ಮಹಾ ತಾಯಿಗೆ ನಾನು ಚಿರ ಋಣಿಯಾಗಿರುತ್ತೇನೆ'' ಎಂದು ಕರಣ್ ಜೋಹರ್ ತಿಳಿಸಿದ್ದಾರೆ.

Karan Johar Becomes A Father Of Twins Via Surrogacy

ಕರಣ್ ಜೋಹರ್ ತಮ್ಮ ಆತ್ಮಕತೆ (ಅನ್ ಸೂಟೆಬಲ್ ಬಾಯ್)ಯಲ್ಲಿ ಮಕ್ಕಳನ್ನು ದತ್ತು ಪಡೆಯುವ ಅಥವಾ ಬಾಡಿಗೆ ತಾಯಿಯ ಮೂಲಕ ಮಗು ಪಡೆಯುವ ಇಂಗಿತ ವ್ಯಕ್ತಪಡಿಸಿದ್ದರು. ಈ ಮೊದಲು ಬಾಲಿವುಡ್ ನಟ ತುಷಾರ್ ಕಪೂರ್ ಬಾಡಿಗೆ ತಾಯಿಯ ಮೂಲಕ ಮಗುವನ್ನು ಪಡೆದಿದ್ದರು.

English summary
Karan Johar, one of the biggest filmmakers in the country, has become father to twins - a boy and a girl - through surrogacy. Introducing the children as Roohi and Yash,

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada