For Quick Alerts
  ALLOW NOTIFICATIONS  
  For Daily Alerts

  ಅಮೀರ್ ಖಾನ್ ಸಹೋದರನನ್ನು ಅವಮಾನಿಸಿದ್ದ ನಿರ್ದೇಶಕ ಕರಣ್ ಜೋಹರ್

  |

  ಸುಶಾಂತ್ ಸಿಂಗ್ ಆತ್ಮಹತ್ಯೆ ನಂತರ ಬಾಲಿವುಡ್‌ ದೊಡ್ಡ ಸ್ಟಾರ್‌ಗಳ ಮೇಲೆ ನೆಟ್ಟಿಜನರು ಆಕ್ರೋಶ ಹೊರಹಾಕುತ್ತಿದ್ದಾರೆ. ಅದರಲ್ಲಿ ಪ್ರಮುಖರು ನಿರ್ದೇಶಕ, ನಟ ಕರಣ್ ಜೋಹರ್.

  Siddharaj kalyankar , ಹಿರಿಯ ಧಾರವಾಹಿ ಹಾಗು ಚಲನಚಿತ್ರ ನಟ ಇನ್ನಿಲ್ಲ | Filmibeat Kannada

  ಕೇವಲ ಸ್ಟಾರ್ ಕುಡಿಗಳಿಗೆ ಮಾತ್ರವೇ ಸಿನಿಮಾದಲ್ಲಿ ಅವಕಾಶಕೊಡುವ ಕರಣ್ ಜೋಹರ್ ವಿರುದ್ಧ ನೆಟ್ಟಿಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿರುವ ಕಾರಣ ಕರಣ್ ಜೋಹರ್ ಸಹ ಸಾಮಾಜಿಕ ಜಾಲತಾಣದಿಂದ ದೂರವೇ ಉಳಿದಿದ್ದಾರೆ.

  ಅನುಷ್ಕಾ-ವಿರಾಟ್ ಕೊಹ್ಲಿ ದಂಪತಿಗೆ ವಿಶ್ ಮಾಡಿ ಮತ್ತೆ ಟ್ರೋಲ್ ಆದ ಕರಣ್ ಜೋಹರ್

  ಕರಣ್ ಜೋಹರ್ ಅವರ ಆತ್ಮೀಯ ಗೆಳೆಯರಲ್ಲಿ ಒಬ್ಬರಾದ ಅಮೀರ್ ಖಾನ್ ಸಹೋದರ ಸಹ ಕರಣ್ ಜೋಹರ್ ವಿರುದ್ಧ ನೇರ ಆರೋಪ ಮಾಡಿದ್ದಾರೆ. ಪಾರ್ಟಿಯೊಂದರಲ್ಲಿ ಕರಣ್, ಅಮೀರ್ ಸಹೋದರನನ್ನು ಅವಮಾನಿಸಿದ್ದರಂತೆ.

  ಅಮೀರ್ ಖಾನ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ಘಟನೆ

  ಅಮೀರ್ ಖಾನ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ಘಟನೆ

  ಅಮೀರ್ ಖಾನ್ ನ 50 ನೇ ಹುಟ್ಟುಹಬ್ಬದ ಪಾರ್ಟಿಯಲ್ಲಿ ಕರಣ್ ಜೋಹರ್ ಭಾವಹಿಸಿದ್ದರು. ಅದೇ ಪಾರ್ಟಿಯಲ್ಲಿದ್ದ ಅಮೀರ್ ಖಾನ್ ಸಹೋದರ ಫೈಸಲ್ ಖಾನ್ ಅನ್ನು ಕರಣ್ ಜೋಹರ್ ಉದ್ದೇಶಪೂರ್ವಕವಾಗಿ ಅವಮಾನಿಸಿದರಂತೆ.

  ಫೈಸಲ್‌ ಖಾನ್ ಬಗ್ಗೆ ತುಚ್ಛವಾಗಿ ಮಾತನಾಡಿದ್ದ ಕರಣ್

  ಫೈಸಲ್‌ ಖಾನ್ ಬಗ್ಗೆ ತುಚ್ಛವಾಗಿ ಮಾತನಾಡಿದ್ದ ಕರಣ್

  ಫೈಸಲ್ ಖಾನ್ ಪಾರ್ಟಿಯಲ್ಲಿ ಯಾರೊಟ್ಟಿಗಾದರೂ ಮಾತನಾಡಬೇಕಾದರೆ, ಉದ್ದೇಶಪೂರ್ವಕವಾಗಿ ಮಧ್ಯ ಬಂದು ಫೈಸಲ್ ಖಾನ್ ಬಗ್ಗೆ ಕೀಳಾಗಿ, ವ್ಯಂಗ್ಯವಾಗಿ ಮಾತನಾಡುವುದು ಮಾಡಿದ್ದರಂತೆ ಕರಣ್ ಜೋಹರ್. ಸಂದರ್ಶನವೊಂದರಲ್ಲಿ ಫೈಸಲ್ ಖಾನ್ ಈ ವಿಷಯ ಬಹಿರಂಗಪಡಿಸಿದ್ದಾರೆ.

  ಸುಶಾಂತ್ ಆತ್ಮಹತ್ಯೆ ಪರಿಣಾಮ ಪ್ರಭಾಸ್‌ಗೆ ಆಯ್ತು ದೊಡ್ಡ ನಷ್ಟ!

  ಬಾಲಿವುಡ್‌ನಲ್ಲಿ ನಿಲ್ಲಲಾಗಲಿಲ್ಲ ಫೈಸಲ್ ಖಾನ್‌ಗೆ

  ಬಾಲಿವುಡ್‌ನಲ್ಲಿ ನಿಲ್ಲಲಾಗಲಿಲ್ಲ ಫೈಸಲ್ ಖಾನ್‌ಗೆ

  ಅಮೀರ್ ಖಾನ್ ಸಹೋದರ ಆಗಿದ್ದರೂ ಸಹ ಫೈಸಲ್ ಖಾನ್ ನಟನಾಗಿ ಬಾಲಿವುಡ್‌ನಲ್ಲಿ ನಿಲ್ಲಲಾಗಲಿಲ್ಲ. ಕೆಲವೇ ಸಿನಿಮಾಗಳಲ್ಲಿ ನಟಿಸಿ ಫೈಸಲ್ ಮರೆ ಆಗಿಬಿಟ್ಟರು. ಅಮೀರ್ ಖಾನ್ ಜೊತೆಗೆ ಸಹನಾಯಕನಾಗಿ ನಟಿಸಿದ್ದ ಮೇಲಾ ಸಿನಿಮಾ ಸಹ ಇನ್ನಿಲ್ಲದಂತೆ ಸೋತಿತ್ತು.

  'ಸಾಕಷ್ಟು ಅವಮಾನಗಳನ್ನು ಬಾಲಿವುಡ್‌ನಲ್ಲಿ ಎದುರಿಸಿದ್ದೇನೆ'

  'ಸಾಕಷ್ಟು ಅವಮಾನಗಳನ್ನು ಬಾಲಿವುಡ್‌ನಲ್ಲಿ ಎದುರಿಸಿದ್ದೇನೆ'

  ಸಂದರ್ಶನದಲ್ಲಿ ತಮ್ಮ ಬಾಲಿವುಡ್ ಜರ್ನಿ ಬಗ್ಗೆಯೂ ಮಾತನಾಡಿರುವ ಫೈಸಲ್ ಖಾನ್, 'ನಾನು ಅವಕಾಶಕ್ಕಾಗಿ ಸಾಕಷ್ಟು ನಿರ್ದೇಶಕ, ನಿರ್ಮಾಪಕರ ಕಚೇರಿಗಳಲ್ಲಿ ಕಾದಿದ್ದೇನೆ. ಹಲವಾರು ನಿರಾಕರಣೆಗಳನ್ನು, ಅವಮಾನಗಳನ್ನು ಎದುರಿಸಿದ್ದೇನೆ. ಏನೇ ಆಗಲಿ, ಜನರೇ ಅಂತಿಮ ತೀರ್ಪುಗಾರರು, ಜನರಿಗೆ ಇಷ್ಟವಿಲ್ಲವೆಂದ ಮೇಲೆ ಯಾರೇ ಆಗಿದ್ದರೂ ಅವರ ಕಾಲ ಮುಗಿದಂತೆ ಎಂದಿದ್ದಾರೆ ಫೈಸಲ್ ಖಾನ್.

  ಬಾಲಿವುಡ್‌ನಲ್ಲಿ ಹೊರಗಿನವರಿಗೆ ಅವಕಾಶ ಸಿಕ್ಕಿದೆ

  ಬಾಲಿವುಡ್‌ನಲ್ಲಿ ಹೊರಗಿನವರಿಗೆ ಅವಕಾಶ ಸಿಕ್ಕಿದೆ

  ಬಾಲಿವುಡ್‌ನಲ್ಲಿ ಹೊರಗಿನವರಿಗೆ ಅವಕಾಶ ಸಿಗುವುದಿಲ್ಲ ಎಂಬ ಮಾತನ್ನು ಒಪ್ಪದ ಫೈಸಲ್ ಖಾನ್, ಶಾರುಖ್‌ ಖಾನ್, ಜೂಹಿ ಚಾವ್ಲಾ, ಸುಶಾಂತ್ ಸಿಂಗ್, ಆಯುಶ್ಮಾನ್ ಖುರಾನಾ, ರಾಜ್‌ಕುಮಾರ್ ರಾವ್ ಇನ್ನೂ ಹಲವು ನಟರನ್ನು ಉದಾಹರಣೆಯಾಗಿ ಕೊಟ್ಟಿದ್ದಾರೆ.

  English summary
  Aamir Khan's brother Faisal Khan alleged that director Karan Johar insults me in Amir Khan's birthday party.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X