'ಏ ದಿಲ್ ಹೈ ಮುಷ್ಕಿಲ್' ಕಲೆಕ್ಷನ್ ನೋಡಿ ನಿಟ್ಟುಸಿರು ಬಿಟ್ಟ ಕರಣ್
ಬಹು ತಾರಾಗಣವುಳ್ಳ, ಕರಣ್ ಜೋಹರ್ ನಿರ್ದೇಶನದ 'ಏ ದಿಲ್ ಹೈ ಮುಷ್ಕಿಲ್' ನಮ್ಮ ದೇಶದಲ್ಲಿ, ಬರೀ 5 ದಿನಗಳಲ್ಲಿ ಭರ್ತಿ 66.38 ಕೋಟಿ ರೂಪಾಯಿ ಕಮಾಯಿಸಿದೆ. ಟ್ರೈಯಾಂಗಲ್ ಲವ್ ಸ್ಟೋರಿ ನೋಡಿ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕರಣ್ ಜೋಹರ್ ನಿರ್ದೇಶನ ರೋಮ್ಯಾಂಟಿಕ್ ಡ್ರಾಮಾ 'ಏ ದಿಲ್ ಹೈ ಮುಷ್ಕಿಲ್' ಎಲ್ಲರ ಹೃದಯ ಗೆದ್ದಿದೆ. ಬರೀ ಭಾರತದಲ್ಲಿ ಮಾತ್ರವಲ್ಲದೇ ವಿದೇಶದಲ್ಲೂ 'ದಿಲ್', ಸಿನಿಮಾ ರಸಿಕರನ್ನು ಸೆಳೆಯುತ್ತಿದೆ.
ಕಳೆದ ಶುಕ್ರವಾರ (ಅಕ್ಟೋಬರ್ 28) ತೆರೆಕಂಡ 'ಏ ದಿಲ್ ಹೈ ಮುಷ್ಕಿಲ್' ಹಲವು ಕಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಮಾತ್ರವಲ್ಲದೇ ದೇಶ-ವಿದೇಶದಲ್ಲಿ ಕಲೆಕ್ಷನ್ ವಿಚಾರದಲ್ಲೂ ಸಾಕಷ್ಟು ಸದ್ದು ಮಾಡುತ್ತಿದೆ.['ಏ ದಿಲ್ ಮುಷ್ಕಿಲ್' ಟಿಕೆಟ್ ಬೆಲೆ ಕೇಳಿದ್ರೆ ತಲೆ ಗಿರ್ರ್ ಅನ್ನೋದು ಪಕ್ಕಾ]

ನಮ್ಮ ದೇಶದಲ್ಲಿ, ಶುಕ್ರವಾರ ಮೊದಲ ದಿನ, 13.30 ಕೋಟಿ, ಶನಿವಾರ 13.10 ಕೋಟಿ, ಭಾನುವಾರ 9.20 ಕೋಟಿ, ಸೋಮವಾರ 17.75 ಕೋಟಿ, ಮಂಗಳವಾರ 13.03 ಕೋಟಿ. ಒಟ್ಟಾರೆ 5 ದಿನಗಳಲ್ಲಿ ಬರೋಬ್ಬರಿ 66.38 ಕೋಟಿ ರೂಪಾಯಿ ಬಾಕ್ಸಾಫೀಸ್ ನಲ್ಲಿ ಕಮಾಯಿಸಿದೆ.
ಇನ್ನು ಅಮೆರಿಕ ಮತ್ತು ಕೆನಡಾದಲ್ಲಿ ಭರ್ಜರಿ 7 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿರುವ 'ಏ ದಿಲ್ ಹೈ ಮುಷ್ಕಿಲ್', ಸಲ್ಮಾನ್ ಖಾನ್ ಅವರ 'ಸುಲ್ತಾನ್' ಚಿತ್ರವನ್ನು ಬೀಟ್ ಮಾಡಿದೆ. ವಿದೇಶದಲ್ಲಿ ಈ ಮೊದಲು 'ಸುಲ್ತಾನ್' 5 ಲಕ್ಷ ಡಾಲರ್ ಕಲೆಕ್ಷನ್ ಮಾಡಿತ್ತು.

ಬಚ್ಚನ್ ಸೊಸೆ ಐಶ್ವರ್ಯ ರೈ, ರಣಬೀರ್ ಕಪೂರ್, ಅನುಷ್ಕಾ ಶರ್ಮಾ ಮತ್ತು ಪಾಕ್ ನಟ ಫವಾದ್ ಖಾನ್ ನಟಿಸಿದ್ದ 'ಏ ದಿಲ್ ಹೈ ಮುಷ್ಕಿಲ್', ಈ ಮೊದಲು ಫವಾದ್ ಖಾನ್ ಅವರಿಂದಾಗಿ ಭಾರಿ ಸಂಕಷ್ಟ ಎದುರಿಸಿತ್ತು.[5 ಕೋಟಿ ದೇಣಿಗೆ: ಪ್ರಾಯಶ್ಚಿತದೊಂದಿಗೆ 'ಏ ದಿಲ್ ಹೈ ಮುಷ್ಕಿಲ್' ಬಿಡುಗಡೆ]

ಕೊನೆಗೂ ಎಲ್ಲಾ ಸುಖಾಂತ್ಯ ಕಂಡುಕೊಂಡ 'ಮುಷ್ಕಿಲ್' ಇದೀಗ ಬಾಕ್ಸಾಫೀಸ್ ನಲ್ಲಿ ಒಳ್ಳೆ ಕಲೆಕ್ಷನ್ ಮಾಡುವ ಮೂಲಕ, ಕರಣ್ ಜೋಹರ್ ಅವರು ಸಮಾಧಾನದ ನಿಟ್ಟುಸಿರು ಬಿಡುವಂತೆ ಮಾಡಿದೆ.


Click it and Unblock the Notifications











