For Quick Alerts
  ALLOW NOTIFICATIONS  
  For Daily Alerts

  ಕರಣ್ ಜೋಹರ್ ಅವರನ್ನು ಟ್ರೋಲ್ ಮಾಡುತ್ತಿದ್ದೀರಾ? ಹುಷಾರ್!

  |

  ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಅತಿ ಹೆಚ್ಚು ಟೀಕೆ ಮತ್ತು ಆಕ್ರೋಶಕ್ಕೆ ಒಳಗಾದವರು ನಿರ್ಮಾಪಕ ಕರಣ್ ಜೋಹರ್. ಸುಶಾಂತ್ ಅವರನ್ನು ಅನೇಕ ಕಾರ್ಯಕ್ರಮಗಳಲ್ಲಿ ಅಣಕಿಸಿದ್ದ ಕರಣ್, ಸ್ಟಾರ್ ಮಕ್ಕಳ ಜತೆ ಮಾತ್ರವೇ ಸಿನಿಮಾ ಮಾಡುವುದಾಗಿ ಹೇಳಿದ ಸಂಗತಿಗಳು ಬಹಿರಂಗವಾಗಿದ್ದು ಮತ್ತಷ್ಟು ಕೋಪಕ್ಕೆ ತುತ್ತಾಗಿದ್ದರು.

  ಸುಶಾಂತ್ ಸಿಂಗ್ ರಜಪೂತ್ ಸಾವು ಹಾಗು ಬಾಲಿವುಡ್‌ನ ಸ್ವಜನಪಕ್ಷಪಾತದ ವಿರುದ್ಧದ ಆಕ್ರೋಶದ ಕೇಂದ್ರ ಬಿಂದುವಾಗಿರುವ ಕರಣ್, ನಿರಂತರ ಟ್ರೋಲ್‌ಗೆ ಒಳಗಾಗುತ್ತಲೇ ಇದ್ದಾರೆ. ಕರಣ್, ಆದಿತ್ಯ ಚೋಪ್ರಾ, ಸಂಜಯ್ ಲೀಲಾ ಭನ್ಸಾಲಿ ಮುಂತಾದವರು ತಮ್ಮ ಸಿನಿಮಾಗಳಿಂದ ಸುಶಾಂತ್‌ರನ್ನು ನಿಷೇಧಿಸಿದ್ದರು. ಅವರಿಗೆ ಅವಕಾಶ ನೀಡುವಂತೆ ಮಾಡಿ ಅವರನ್ನು ಮತ್ತಷ್ಟು ಹತಾಶರನ್ನಾಗಿ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ. ಮುಂದೆ ಓದಿ..

  ಬರ್ತಡೇ ಪಾರ್ಟಿಯಲ್ಲಿ ಭಾಗಿಯಾಗಿ ಮತ್ತೆ ಟ್ರೋಲಿಗರಿಗೆ ಆಹಾರವಾದ ಕರಣ್ ಜೋಹರ್ಬರ್ತಡೇ ಪಾರ್ಟಿಯಲ್ಲಿ ಭಾಗಿಯಾಗಿ ಮತ್ತೆ ಟ್ರೋಲಿಗರಿಗೆ ಆಹಾರವಾದ ಕರಣ್ ಜೋಹರ್

  ಕರಣ್ ವಿರುದ್ಧ ಆಕ್ರೋಶ

  ಕರಣ್ ವಿರುದ್ಧ ಆಕ್ರೋಶ

  ಸುಶಾಂತ್ ಅವರನ್ನು ಕಾರ್ಯಕ್ರಮಗಳಲ್ಲಿ ಅಣಕಿಸಿದ್ದು ಮತ್ತು ಸ್ಟಾರ್‌ಗಳ ಮಕ್ಕಳನ್ನು ಬೆಳೆಸಿದ ಸ್ವಜನಪಕ್ಷಪಾತದ ಆರೋಪಗಳಿಗೆ ತುತ್ತಾಗಿರುವ ಕರಣ್ ಅವರನ್ನು ದ್ವೇಷಿಸುವ ಸಾವಿರಾರು ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

  ಕರಣ್ ಕುಟುಂಬಕ್ಕೂ ಬೆದರಿಕೆ

  ಕರಣ್ ಕುಟುಂಬಕ್ಕೂ ಬೆದರಿಕೆ

  ಕರಣ್ ಅವರನ್ನು ಮಾತ್ರವೇ ಟ್ರೋಲ್ ಮಾಡುತ್ತಿರುವ, ಟೀಕಿಸುತ್ತಿರುವ ಘಟನೆಗಳು ನಡೆಯುತ್ತಿಲ್ಲ. ಅವರ ತಾಯಿ, ದತ್ತು ಮಕ್ಕಳು ಹಾಗೂ ಕುಟುಂಬದ ಇತರೆ ಸದಸ್ಯರನ್ನೂ ಎಳೆದು ತಂದು ಅವರ ವಿರುದ್ಧ ಅವಾಚ್ಯ ಪದಗಳನ್ನು ಬಳಸಲಾಗುತ್ತಿದೆ. ಈ ಮೂಲಕ ಕರಣ್‌ಗೆ ಮಾನಸಿಕ ಕಿರಕುಳ ನೀಡಲಾಗುತ್ತಿದೆ ಎನ್ನಲಾಗಿದೆ.

  ಸತತ ಟ್ರೋಲ್‌ಗಳಿಂದ ಮಾನಸಿಕವಾಗಿ ಕುಗ್ಗಿ ಅಳುತ್ತಿದ್ದಾರೆ ಕರಣ್ ಜೋಹರ್ಸತತ ಟ್ರೋಲ್‌ಗಳಿಂದ ಮಾನಸಿಕವಾಗಿ ಕುಗ್ಗಿ ಅಳುತ್ತಿದ್ದಾರೆ ಕರಣ್ ಜೋಹರ್

  ಸೈಬರ್ ಕ್ರೈಂ ಪ್ರಕರಣ

  ಸೈಬರ್ ಕ್ರೈಂ ಪ್ರಕರಣ

  ಇದರಿಂದ ಕರಣ್ ತಮ್ಮ ಕಾನೂನು ತಜ್ಞರನ್ನು ಸಂಪರ್ಕಿಸಿದ್ದು, ತಮಗೆ ಮತ್ತು ತಮ್ಮ ಕುಟುಂಬಕ್ಕೆ ಬೆದರಿಕೆ ಹಾಕಿರುವ, ದ್ವೇಷಕಾರಕ ಸಂದೇಶಗಳನ್ನು ರವಾನಿಸಿರುವ ಸಾಮಾಜಿಕ ಜಾಲತಾಣ ಬಳಕೆದಾರರನ್ನು ಗುರುತಿಸಿ ಅವರ ವಿರುದ್ಧ ಸೈಬರ್ ಅಪರಾಧದಡಿ ಕಾನೂನು ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾರೆ.

  ಜೈಲು ಶಿಕ್ಷೆ ಮತ್ತು ದಂಡ ಸಾಧ್ಯತೆ

  ಜೈಲು ಶಿಕ್ಷೆ ಮತ್ತು ದಂಡ ಸಾಧ್ಯತೆ

  ಐಪಿಸಿ ಸೆಕ್ಷನ್ 507 ಮತ್ತು ಐಟಿ ಸೆಕ್ಷನ್ 67ರ ಅಡಿ ಈ ಜನರ ವಿರುದ್ಧ ಕ್ರಮ ತೆಗೆದುಕೊಳ್ಳಲು ಕರಣ್ ಉದ್ದೇಶಿಸಿದ್ದಾರೆ. ನಿಂದನಾತ್ಮಕ, ಹಿಂಸೆಯನ್ನು ಪ್ರಚೋದಿಸುವ ಮತ್ತು ದ್ವೇಷದ ಸಂದೇಶಗಳನ್ನು ರವಾನಿಸುವವರು ಇದರಿಂದ ಶಿಕ್ಷೆ ಹಾಗೂ ಭಾರಿ ದಂಡ ಎದುರಿಸಬೇಕಾಗುತ್ತದೆ. ಸುಶಾಂತ್ ಸಾವಿನ ನಂತರ ಆಕ್ರೋಶಕ್ಕೆ ತುತ್ತಾಗಿರುವ ಕರಣ್, ಒಂದು ತಿಂಗಳಿನಿಂದ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಪೋಸ್ಟ್ ಮಾಡಿಲ್ಲ.

  ಅನುಷ್ಕಾ ಶೆಟ್ಟಿ ಡೇಟಿಂಗ್ ರೂಮರ್: ಕರಣ್ ಜೋಹರ್ ವಿರುದ್ಧ ಕಿಡಿಕಾರಿದ್ದ ಪ್ರಭಾಸ್ಅನುಷ್ಕಾ ಶೆಟ್ಟಿ ಡೇಟಿಂಗ್ ರೂಮರ್: ಕರಣ್ ಜೋಹರ್ ವಿರುದ್ಧ ಕಿಡಿಕಾರಿದ್ದ ಪ್ರಭಾಸ್

  English summary
  Bollywood filmmaker Karan Johar contacted his lawyers to take legal action against social media users who sent him threatening and abusive messages.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X