For Quick Alerts
  ALLOW NOTIFICATIONS  
  For Daily Alerts

  ಮಾಧ್ಯಮಗಳಿಗೆ ಪತ್ರಿಕಾಧರ್ಮ ಬೋಧಿಸಿದ ಕರಣ್ ಜೋಹರ್!

  |

  ಕರಣ್ ಜೋಹರ್ ಬಾಲಿವುಡ್‌ ನಲ್ಲಿ ಪ್ಲೇ ಬಾಯ್‌ ಇಮೇಜ್ ಉಳ್ಳವರಲ್ಲಿ ಒಬ್ಬರು. ತಮ್ಮ ಐಶಾರಾಮಿತ್ವ, ಪಾರ್ಟಿ, ಬಿಡು ಬೀಸು ಮಾತುಗಳಿಂದ ಸುದ್ದಿಯಲ್ಲಿರುವ ಕರಣ್, ಇದ್ದಕ್ಕಿದ್ದಂತೆ ಮಾಧ್ಯಮಗಳಿಗೆ ಬುದ್ಧಿವಾದ ಹೇಳುವ ಕಾರ್ಯಕ್ಕಿಳಿದಿದ್ದಾರೆ.

  ತಮ್ಮ ಕಾಫಿ ವಿಥ್ ಕರಣ್ ಶೋ ಮೂಲಕ ಬಾಲಿವುಡ್‌ನಲ್ಲಿ ಗಾಸಿಪ್ ಹರಡಿಸುತ್ತಲೇ ಇರುವ ಆ ಮೂಲಕ ವಿವಾದಗಳ ಸೃಷ್ಟಿಸುತ್ತಲಿರುವ ಕರಣ್ ತಮ್ಮ ಬುಡಕ್ಕೆ ಗಾಸಿಪ್ ಬಂದಾಗ ಸಿಟ್ಟಿಗೆದ್ದಿದ್ದಾರೆ.

  ಕರಣ್ ಅವರ ಒಡೆತನದ ಧರ್ಮಾ ಪ್ರೊಡಕ್ಷನ್‌ ನ ಹೊಸ ಸಿನಿಮಾ 'ತಕ್ಥ್‌' ಬಗ್ಗೆ ಇತ್ತೀಚೆಗೆ ಕೆಲವು ಸುದ್ಇದಗಳು ಹರಿದಾಡುತ್ತಿದ್ದು, ಇವು ಕರಣ್ ಜೋಹರ್ ಅನ್ನು ಕೆರಳಿಸಿವೆ. ತಮ್ಮ ಸಿನಿಮಾ ವಿರುದ್ಧ ವರದಿ ಪ್ರಕಟಿಸಿದವರ ವಿರುದ್ಧ ಕರಣ್ ಗರಂ ಆಗಿ ಟ್ವೀಟ್ ಮಾಡಿದ್ದಾರೆ.

  ಮಾರ್ಚ್ 20 ರಂದು ಚಿತ್ರೀಕರಣ ಪ್ರಾರಂಭವಾಗಬೇಕಿತ್ತು

  ಮಾರ್ಚ್ 20 ರಂದು ಚಿತ್ರೀಕರಣ ಪ್ರಾರಂಭವಾಗಬೇಕಿತ್ತು

  ತಕ್ಥ್‌ ಸಿನಿಮಾ ಇದೇ ಮಾರ್ಚ್ 20 ಶೂಟಿಂಗ್ ಆರಂಭವಾಗಬೇಕಿತ್ತು, ಆದರೆ ಕೊರೊನಾ ಭೀತಿಯಿಂದ ಲಾಕ್‌ಡೌನ್ ಆದ ಕಾರಣ ಚಿತ್ರೀಕರಣ ಮುಂದೂಡಲ್ಪಟ್ಟಿದೆ. ಈ ಸಿನಿಮಾ ಬಗ್ಗೆ ಕೆಲವು ಗಾಸಿಪ್‌ ಗಳು ಹರಿದಾಡುತ್ತಿದ್ದು, ಇದರಿಂದ ಕರಣ್ ಜೋಹರ್ ಸಿಟ್ಟಾಗಿ, ತಕ್ಥ್ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳೆಲ್ಲವೂ ಸುಳ್ಳು ಎಂದಿದ್ದಾರೆ.

  ಕೆಲವು ವರದಿಗಳು ಪ್ರಕಟವಾಗಿದ್ದವು

  ಕೆಲವು ವರದಿಗಳು ಪ್ರಕಟವಾಗಿದ್ದವು

  'ತಕ್ಥ್' ಸಿನಿಮಾದ ಸಹ ನಿರ್ಮಾಣ ಪಾಲುದಾರರಾಗಿದ್ದ ಫಾಕ್ಸ್ ಮೀಡಿಯಾ ಸಿನಿಮಾದಿಂದ ಹಿಂದೆ ಸರಿದಿದೆ. ಹಾಗಾಗಿ ಕರಣ್ ಜೋಹರ್ ಅವರು ಮತ್ತೊಂದು ಪ್ರಮುಖ ಸಂಸ್ಥೆಯಾದ ಟಿ-ಸೀರೀಸ್ ಬಾಗಿಲು ತಟ್ಟಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಕೆಲವು ಮಾಧ್ಯಮಗಳಲ್ಲಿ ಹೀಗೆಂದು ವರದಿ ಮಾಡಿವೆ.

  ತಕ್ಥ್ ಬಗಗೆ ಹರಿದಾಡುತ್ತಿರವ ಸುದ್ದಿಗಳು

  ತಕ್ಥ್ ಬಗಗೆ ಹರಿದಾಡುತ್ತಿರವ ಸುದ್ದಿಗಳು

  ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಕರಣ್ ಜೋಹರ್, 'ತಕ್ಥ್' ಸಿನಿಮಾ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳು ಸತ್ಯವಲ್ಲ, ಇಂಥಹಾ ಸಂದರ್ಭದಲ್ಲಿ ಪತ್ರಿಕೆಗಳು ದೇಶದಲ್ಲಿ ಉಂಟಾಗಿರುವ ಪರಿಸ್ಥಿತಿಯ ಬಗ್ಗೆ ವರದಿ ಮಾಡುವ ಮೂಲಕ ಜವಾಬ್ದಾರಿ ಮೆರೆಯಬೇಕು ಎಂದು ಹೇಳಿದ್ದಾರೆ.

  ಮುಘಲ ರಾಜರ ಬಗ್ಗೆ ಸಿನಿಮಾ

  ಮುಘಲ ರಾಜರ ಬಗ್ಗೆ ಸಿನಿಮಾ

  ತಕ್ಥ್ ಸಿನಿಮಾವು ಮುಘಲ್ ರಾಜ ಔರಂಗಾಜೇಬ್ ಮತ್ತು ಅವನ ಸಹೋದರ ದಾರಾ ಶಿಖೋಹ್ ಸಂಬಂಧ ಕುರಿತಾಗಿದ್ದು, ಈ ಈ ಪಾತ್ರಗಳಲ್ಲಿ ವಿಕ್ಕಿ ಕೌಶಲ್ ಮತ್ತು ರಣವೀರ್ ಸಿಂಗ್ ನಿಭಾಯಿಸುತ್ತಿದ್ದಾರೆ. ಕೊರೊನಾ ಲಾಕ್ ಡೌನ್ ಬಳಿಕ ಸಿನಿಮಾ ಚಿತ್ರೀಕರಣ ಸೆಟ್ಟೇರಲಿದೆ.

  English summary
  Director, Producer Karan Johar upset on media for publishing rumors about his film Takht. He said media should report sensibly.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X