»   » ಅತ್ತೆಯೆದುರೇ ಬಿಕಿನಿ ತೊಟ್ಟು ಧಿಮಾಕು 'ಪ್ರದರ್ಶಿಸಿದ' ಸೊಸೆ

ಅತ್ತೆಯೆದುರೇ ಬಿಕಿನಿ ತೊಟ್ಟು ಧಿಮಾಕು 'ಪ್ರದರ್ಶಿಸಿದ' ಸೊಸೆ

Posted By:
Subscribe to Filmibeat Kannada

ಭಾರತದಲ್ಲಿ ಯಾವ ನಾರಿಗೆ ಈ ಧೈರ್ಯ-ಧಿಮಾಕು ಇದೆ ಹೇಳಿ!? ಅತ್ತೆಯೆದುರೇ ಬಿಕಿನಿ ಧರಿಸಿ ಧಿಮಾಕು 'ಪ್ರದರ್ಶಿಸುವ' ಆಧುನಿಕ ಸೊಸೆಯನ್ನು ಎಲ್ಲಾದರೂ ಕಂಡಿದ್ದೀರಿ? ಯಾರಪ್ಪಾ ಆ ಅದೃಷ್ಟವಂತೆ? ಆ ಪುಣ್ಯಾತಿಗಿತ್ತಿ ಎಂದು ಮಹಿಳಾಮಣಿಗಳೂ ಈಗಾಗಲೇ ತಲೆ ತುರಿಸಿಕೊಂಡಿರಲೂ ಸಾಕು.

ಆ ಅದೃಷ್ಟವಂತ ಸೊಸೆ ಬೇರೆ ಯಾರೂ ಅಲ್ಲ. ಕರೀನಾ ಕಪೂರ್ ಎಂಬ ಬಾಲಿವುಡ್ ಚೆಲುವೆ. ಬಾಲಿವುಡ್ ನಟಿ ಅಂದಾಕ್ಷಣ ಹೀಗೆಲ್ಲಾ ವಯಸ್ಸಾದ ಅತ್ತೆಯೆದುರು ಬಿಕಿನಿ ತೊಡಬಹುದೇ? ಇಷ್ಟಕ್ಕೂ ಯಾವ ಧೈರ್ಯದ ಮೇಲೆ ಸಪೂರ ಕರೀನಾ ಹೀಗೆ ಬಿಕಿನಿ ತೊಟ್ಟಳು ಎಂದು ಕಣ್ಬಿಟ್ಟು ನೋಡಿದರೆ ಧುತ್ತನೆ ಬಿಕಿನಿ ತೊಟ್ಟ ಅಂದಕಾಲತ್ತಿಲ್ ಅತ್ತೆ ಮನಸ್ಸಿಗೆ ಬರುತ್ತಾಳೆ. ಆಕೆ ಬೇರೆ ಯಾರೂ ಅಲ್ಲ. ಶರ್ಮಿಳಾ ಟಾಗೂರ್ ಎಂಬ ಬಾಲಿವುಡ್ ಮಾಜಿ ನಟಿ.

ಸಂಸತ್ತಿನಲ್ಲೂ ರಾರಾಜಿಸಿದ್ದ ಬಿಕಿನಿ ಶರ್ಮಿಳಾ!

ಅಸಲಿಗೆ ಬಾಲಿವುಡ್ ರಂಗದಲ್ಲಿ ಮೊದಲು ಬಿಕಿನಿ ತೊಟ್ಟ ಎಂಬ ಹೆಗ್ಗಳಿಕೆ ಈ ಅತ್ತೆಯದ್ದಾಗಿರುವುದರಿಂದ ಯಾವುದೇ ಭಯ/ಆತಂಕವಿಲ್ಲದೆ ಆಧುನಿಕ ಸೊಸೆ ಕರೀನಾ ಕಪೂರ್ ಎಂಬ ಸಪೂರ್ ದೇಹದ ಬೆಡಗಿ ಬಿಕಿನಿ ಧರಿಸಿದ್ದಾಳೆ ಎಂಬ ವರ್ತಮಾನ ಬರುತ್ತಿದೆ. ಅತ್ತೆ ಶರ್ಮಿಳಾ ಬಿಕಿನಿ ತೊಟ್ಟು ಪತ್ರಿಕೆಯ ಮುಖಪುಟದಲ್ಲಿ ರಾರಾಜಿಸಿದಾಗ ಆ ವಿಷಯ ಸಂಸತ್ತಿನಲ್ಲೂ ಪ್ರತಿಧ್ವನಿಸಿತ್ತು!

ಸೈಫ್ ಪಟೌಡಿಯನ್ನು ಮದ್ವೆಯಾದ ಬಳಿಕವೂ ಬಿಕಿನಿ ಚೆಲುವೆ

ಹೌದು ಸೈಫ್ ಅಲಿಖಾನ್ ಎಂಬ ಪಟೌಡಿಯನ್ನು ಮದ್ವೆಯಾದ ಬಳಿಕವೂ ಕರೀನಾ ಕಪೂರ್ ಎಂಬ ಮಾದಕ ಚೆಲುವೆ ಬಿಕಿನಿ ಹಾಕಿಕೊಳ್ಳುತ್ತಾಳೆ ಅಂದರೆ ಆಕೆ ನಿಜಕ್ಕೂ ಸಂಪೂರ್ಣ ಸ್ವಾತಂತ್ರ್ಯ ಅನುಭವಿಸುತ್ತಿರಲೇ ಬೇಕು ಅಲ್ವೇ?

ಕಾಲಕ್ಕೆ ತಕ್ಕಂತೆ 'ಕಾಣಿಸಿಕೊಳ್ಳಬೇಕು'

ನನ್ನ ಮುದ್ದಿನ ಅತ್ತೆ ಶರ್ಮಿಳಾ ಅವರು ನನ್ನನ್ನು ಮಗಳಂತೆ ನೋಡಿಕೊಳ್ಳುತ್ತಿದ್ದಾರೆ. 'ನಾವು 19ನೇ ಶತಮಾನದಲ್ಲಿಲ್ಲ. ಆಧುನಿಕ ಜಗತ್ತಿನಲ್ಲಿ ಕಾಲಕ್ಕೆ ತಕ್ಕಂತೆ 'ಕಾಣಿಸಿಕೊಳ್ಳಬೇಕು', ಹಾಗಾಗಿ ನೀನು ಬಿಕಿನಿ ಹಾಕಿಕೊಳ್ಳಮ್ಮ. ನನ್ನದೇನೂ ಅಭ್ಯಂತರವಿಲ್ಲ' ಎಂದು ಹೇಳಿದ ಮೇಲೆ ನಾನೇಕೆ ಬಿಕಿನಿ ತೊಡುವ ಅದೃಷ್ಟವನ್ನು ಮಿಸ್ ಮಾಡಿಕೊಳ್ಳಲಿ. ಹಾಗಾಗಿ ನನ್ನ ಅಭಿಮಾನಿಗಳಿಗಾಗಿ ಇದೋ ನನ್ನ ಬಿಕಿನಿ ಭಂಗಿ ಎಂದು ಕರೀನಾ ತಮ್ಮ ಮೈಮಾಟವನ್ನು ಪ್ರದರ್ಶಿಸಿದ್ದಾರೆ.

ಮದುವೆಗೂ ಮುಂಚೆಯೇ, ಭಾವಿ ಗಂಡನ ಜತೆ ಬಿಕಿನಿ

ಮೊದಲೇ ಝೀರೋ ಸೈಜ್ ಕರೀನಾ ಬಿಕಿನಿ ತೊಟ್ಟರೆ ಪಡ್ಡೆ ಹೈಕುಳಗಳಿಗೆ ಮೃಷ್ಟಾನ್ನವೇ ಉಂಡಷ್ಟು ಖುಷಿ ಖುಷಿಯಾದೀತು. ಈ ಹಿಂದೆ ಮದುವೆಗೂ ಮುಂಚೆಯೇ, ಭಾವಿ ಗಂಡ ಸೈಫ್ ಅಲಿಖಾನ್ ಜತೆ ನಟಿಸಿದ್ದ ಚಿತ್ರದಲ್ಲಿ ಕರೀನಾ ಬಿಕಿನಿ ತೊಟ್ಟಿದ್ದಳು ಎಂಬುದು ಗಮನಾರ್ಹ.

ನೂಲಿನಂತೆ ಸೀರೆ ಅತ್ತೆಯಂತೆ ಸೊಸೆ!:

ರಜಾಮೋಜಿಗೆಂದು ಸ್ವಕುಂಟುಂಬ ಪರಿವಾರ ಸಮೇತ ಕರೀನಾ ಮೊನ್ನೆ ಮಾಲ್ಡೀವ್ಸ್ ಗೆ ಹೋಗಿದ್ದರು. ಆಗ ಅತ್ತೆಯೆದುರು ಮತ್ತೊಮ್ಮೆ ಬಿಕಿನಿ ತೊಟ್ಟು 'ಅತ್ತೆ ಬಿಕಿನೀಲ್ಲಿ ನಾನು ಹೇಗೆ ಕಾಣಿಸ್ತೀನಿ' ಎಂದು ಕಣ್ ಮಿಟುಕಿಸಿ ಕೇಳಿದಳಂತೆ! ಅತ್ತೆ ತಥಾಸ್ತು ಅಂದಿದ್ದಾರೆ. ನೂಲಿನಂತೆ ಸೀರೆ ಅತ್ತೆಯಂತೆ ಸೊಸೆ.

 
English summary
Bollywood Actress Kareena Kapoor flaunts her body in bikini in front of her mother-in-law Sharmila at Maldives. "When I am with the family, I am treated like a daughter. Sharmilaji treats me like a daughter. We are not in the 1900s. We don't live like traditional saas bahus. We just went to the Maldives for a holiday where I wore a bikini in front of my mother-in-law. It's normal," Kareena Kapoor Khan has told a daily.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada