»   » ಹೀರೋಯಿನ್ ಕರೀನಾ ಕಪೂರ್‌ಗೆ ಗಂಟಲು ಬೇನೆ

ಹೀರೋಯಿನ್ ಕರೀನಾ ಕಪೂರ್‌ಗೆ ಗಂಟಲು ಬೇನೆ

Posted By:
Subscribe to Filmibeat Kannada
ಬಾಲಿವುಡ್‌ನ ಬಳ್ಳಿಯ ಮಿಂಚು ಕರೀನಾ ಕಪೂರ್‌ಗೆ ತೀವ್ರ ಗಂಟಲು ಬೇನೆ ಕಾಣಿಸಿಕೊಂಡಿದೆ. ಪುರುಸೊತ್ತಿಲ್ಲದಂತೆ 'ಹೀರೋಯಿನ್' ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದೇ ಈ ಬೇನೆಗೆ ಕಾರಣ ಎನ್ನುತ್ತವೆ ಮೂಲಗಳು. ಮಧುರ್ ಭಂಡಾಕರ್‌ ಅವರ ಈ ಚಿತ್ರದಲ್ಲಿ ಸಿಕ್ಕಾಪಟ್ಟೆ ಎಕ್ಸ್‌ಪೋಸ್ ಇದೆಯಂತೆ.

ಈ ರೀತಿಯ ಸನ್ನಿವೇಶಗಳಲ್ಲಿ ಅತಿಯಾಗಿ ತೊಡಗಿಕೊಂಡ ಕಾರಣ ಕರೀನಾಗೆ ಗಂಟಲು ಬೇನೆ ಬಂದಿದೆ. ಬೆಳಗ್ಗೆಯಿಂದ ಸಂಜೆಯ ತನಕ ನಿರ್ದೇಶಕರು ಒಂದೇ ಸಮನೆ ಕರೀನಾರನ್ನು ಬೆಂಡೆತ್ತಿದ್ದಾರೆ. ಕರೀನಾ ಸಹ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇದೆಲ್ಲದರ ಪರಿಣಾಮ ಗಂಟಲು ನೋವು.

ಸ್ವಲ್ಪ ಕಷಾಯ ಗಿಷಾಯ ಕುಡಿದು ರಗ್ಗುಹೊದ್ದುಕೊಂಡು ಬೆಚ್ಚಗೆ ಮಲಗಿದರೆ ಗಂಟಲು ಮಾರಿ ಓಡಿಹೋಗುತ್ತದೆ ಅನ್ನಿ. ಈಗ ಅದೇ ಕೆಲಸದಲ್ಲಿ ಕರೀನಾ ಇದ್ದಾರೆ. ಅಂದಹಾಗೆ ಚಿತ್ರದಲ್ಲಿ ಮಹಿ ಖನ್ನಾ ಪಾತ್ರದಲ್ಲಿ ಕರೀನಾ ಕಾಣಿಸಲಿದ್ದಾರೆ. ಕರೀನಾರ ವೃತ್ತಿಜೀವನದಲ್ಲಿ 'ಹೀರೋಯಿನ್' ಚಿತ್ರ ಒಂದು ಮೈಲಿಗಲ್ಲಾಗಿ ನಿಲ್ಲಲಿದೆ ಎಂದು ಬಾಲಿವುಡ್ ಭಾವಿಸಿದೆ. (ಏಜೆನ್ಸೀಸ್)

English summary
Kareena Kapoor is leaving no stone unturned to give her best to Madhur Bhandarkar's most ambitious project Heroine. Kareena's back-breaking hardwork for Heroine is taking a toll on her health. A source informed a leading daily that Kareena is down with a sore throat.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada