»   » ಐಶ್ವರ್ಯಾ ರೈ ಕಾಲೆಳೆದ ಕರೀನಾಗೆ ಭಾರಿ ತಪರಾಕಿ

ಐಶ್ವರ್ಯಾ ರೈ ಕಾಲೆಳೆದ ಕರೀನಾಗೆ ಭಾರಿ ತಪರಾಕಿ

Posted By:
Subscribe to Filmibeat Kannada

ಕರೀನಾ ಕಪೂರ್ ನಟನೆಯ ''ಹೀರೋಯಿನ್' ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ. ಕರೀನಾ ಈಗ ಹೀರೋಯಿನ್ ಚಿತ್ರದ ಪ್ರಚಾರ ಕಾರ್ಯದಲ್ಲಿ ಬಿಜಿಯಾಗಿದ್ದಾರೆ. ಮಧುರ್ ಭಂಡಾರ್ಕರ್ ಈ ಚಿತ್ರಕ್ಕೆ ಮೊದಲು ಆಯ್ಕೆಯಾಗಿದ್ದು ನಟಿ ಐಶ್ವರ್ಯಾ ರೈ. ಆದರೆ ಐಶೂ ಅದೇ ವೇಳೆ ಗರ್ಭಿಣಿಯಾಗಿದ್ದರಿಂದ ಈ ಅವಕಾಶ ಕರೀನಾ ಪಾಲಾಯ್ತು, ಅಷ್ಟೇ.

ಐಶ್ವರ್ಯಾ ಹಾಗೂ ಕರೀನಾ ನಡುವೆ ಸ್ಪರ್ಧೆಯೇನೂ ಏರ್ಪಟ್ಟಿರಲಿಲ್ಲ. ಐಶ್ವರ್ಯಾ ಗರ್ಭಿಣಿಯಾಗಿ ಈ ಅವಕಾಶ ತ್ಯಜಿಸಿದ ಮೇಲೆ ಮಧುರ್ ಭಂಡಾರ್ಕರ್ ಅವರು ಈ ಅವಕಾಶವನ್ನು ಕರೀನಾ ಮಡಿಲಿಗೆ ಹಾಕಿದ್ದಾರೆ. ಅಲ್ಲಿಗೆ ಕರೀನಾ ಆ ಚಿತ್ರಕ್ಕೆ ಎರಡನೇ ಆಯ್ಕೆಯಷ್ಟೇ ಆಗಿತ್ತು ಎಂಬುದು ಸ್ಪಷ್ಟ. ಆದರೆ ಕರೀನಾ ಅದ್ಯಾಕೋ ತಾನು ಐಶ್ವರ್ಯಾಗಿಂತ ಗ್ರೇಟ್ ಅಂದುಕೊಂಡಂತಿದೆ.

ಇತ್ತೀಚಿಗೆ ಕರೀನಾ ಕಪೂರ್ ಸಂದರ್ಶನವೊಂದರಲ್ಲಿ "ಐಶ್ವರ್ಯಾ ರೈ ವಯಸ್ಸಾದವರು. ಹಳೆಯ ಜನರೇಶನ್ನಿಗೆ ಸೇರಿದವರು" ಅಂದುಬಿಟ್ಟಿದ್ದಾರೆ. "ನಿಮ್ಮ ಬದಲು ಈ ಪಾತ್ರವನ್ನು ಐಶ್ವರ್ಯಾ ರೈ ಮಾಡಿದ್ದಿದ್ದರೆ ಹೇಗಿರುತ್ತಿತ್ತು" ಎಂಬ ಸಂದರ್ಶನಕಾರರ ಪ್ರಶ್ನೆಗೆ ಕರೀನಾ, "ನಮ್ಮಿಬ್ಬರಲ್ಲಿ ಹೋಲಿಕೆ ಸರಿಯಲ್ಲ, ನಾವಿಬ್ಬರು ಬೇರೆ ಬೇರೆ ಜನರೇಶನ್ನಿಗೆ ಸೇರಿದವರು" ಎಂದುಬಿಡುವುದೇ? ಪ್ರಶ್ನಿಸಿದ ಸಂದರ್ಶನಕಾರ ತಬ್ಬಿಬ್ಬು.

ಅವರಿಬ್ಬರ ಬಗೆಗಿನ ಮಾಹಿತಿ ಇಲ್ಲಿದೆ:-
*ಐಶ್ವರ್ಯಾ ಬಚ್ಚನ್: ಹುಟ್ಟಿದ್ದು ನವೆಂಬರ್ 01, 1973. ವಿಶ್ವಸುಂದರಿಯಾಗಿ 1994 ರಲ್ಲಿ ಆಯ್ಕೆಯಾದ ಅವರು, 1997 ರಲ್ಲಿ ತಮಿಳು 'ಇರುವರ್' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದವರು. 1998 ರಲ್ಲಿ ಜೀನ್ಸ್ ಚಿತ್ರದ ಮೂಲಕ ಖ್ಯಾತಿ ಪಡೆದ ಅವರು 1999ರಲ್ಲಿ ಸಂಜಯ್ ಲೀಲಾ ಬನ್ಸಾಲಿಯವರ 'ಹಮ್ ದಿಲ್ ದೇ ಚುಕೇ ಸನಮ್' ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದವರು.

*ಕರೀನಾ ಕಪೂರ್: ಹುಟ್ಟಿದ್ದು ಸೆಪ್ಟೆಂಬರ್ 21, 1980. 'ರೆಫ್ಯೂಜಿ' ಚಿತ್ರದ ಮೂಲಕ 2000 ದಲ್ಲಿ ಬಾಲಿವುಡ್ ಪ್ರವೇಶ.

1997 ರಲ್ಲಿ ಐಶ್ವರ್ಯಾ ರೈ ಚಿತ್ರರಂಗ ಪ್ರವೇಶಿಸಿದರೆ 2000 ದಲ್ಲಿ ಕರೀನಾ ಬಂದಿದ್ದಾರೆ. ಕೇವಲ ಮೂರು ವರ್ಷಗಳ ಅಂತರ ಮಾತ್ರ ಅವರಿಬ್ಬರಲ್ಲಿದೆ. ಇನ್ನು ಹುಟ್ಟಿದ ದಿನಾಂಕ ತೆಗೆದುಕೊಂಡರೂ ಕೇವಲ 7 ವರ್ಷಗಳಷ್ಟೇ ವ್ಯತ್ಯಾಸ. ಇಷ್ಟಕ್ಕೇ, ತನಗಿಂತ ಐಶ್ವರ್ಯಾಗೆ ಭಾರಿ ವಯಸ್ಸಾಯ್ತು, ಹಳೆಯ ಜನರೇಶನ್ ಎಂದಿರುವ ಕರೀನಾ ಬಗ್ಗೆ ಬಾಲಿವುಡ್ ಮಂದಿ ಕೋಪ ವ್ಯಕ್ತಪಡಿಸಿದ್ದಾರೆ.

'ಮೂರು ಅಥವಾ ಏಳು ವರ್ಷಗಳೇ ಜನರೇಶನ್ ಗ್ಯಾಪ್ ಗೆ ಕರೀನಾ ಪ್ರಕಾರ ಮಾನದಂಡವಾದರೆ, ಕರೀನಾಗಿಂತ ಹತ್ತು ವರ್ಷ ಹೆಚ್ಚು ದೊಡ್ಡವರಾಗಿರುವ ಅವರ ಪ್ರಿಯತಮ ಸೈಫ್ ಅಲಿ ಖಾನ್ ಯಾವ ಜನರೇಶನ್ನಿಗೆ ಸೇರಿದವರು? ಈ ಪ್ರಶ್ನೆಯನ್ನು ಬಾಲಿವುಡ್ ಪಂಡಿತರು ಕರೀನಾಗೆ ಕೇಳುತ್ತಿದ್ದಾರೆ. ಹತ್ತು ವರ್ಷ ಹಳೆಯ ಬಾಯ್ ಫ್ರೆಂಡ್ ಜೊತೆ ಸುತ್ತುವ ಕರೀನಾ, ಐಶ್ವರ್ಯಾ ರೈಗೆ ಹೇಳಿದ ಮಾತು ಕೇಳಿ ಬಾಲಿವುಡ್ ಮುಸಿಮುಸಿ ನಗುತ್ತಿದೆ. (ಏಜೆನ್ಸೀಸ್)

English summary
Kareena took a dig at Aishwarya and said Ash belongs to a different generation. So, basically Kareena wanted to say that Aishwarya is old and belongs to an older generation.
 

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X