For Quick Alerts
  ALLOW NOTIFICATIONS  
  For Daily Alerts

  ಕರೀನಾ, ದೀಪಿಕಾ, ಪ್ರಿಯಾಂಕಾ ಜೀನ್ಸ್ ಪ್ಯಾಂಟ್ ಬೇಕೆ?

  By Rajendra
  |

  ಬಾಲಿವುಡ್ ತಾರೆಗಳಾದ ಕರೀನಾ ಕಪೂರ್, ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ...ಮುಂತಾದ ತಾರೆಗಳ ಜೀನ್ಸ್ ಪ್ಯಾಂಟ್ ಗಳು ಬೇಕೆ? ಈ ಜೀನ್ಸ್ ಪ್ಯಾಂಟ್ ಗಳೆಲ್ಲಾ ಈಗ ಬಿಕರಿಗೆ ಲಭ್ಯ. ಅದರೆ ಬಹಿರಂಗ ಹರಾಜಿನಲ್ಲಿ ಮಾತ್ರ ಎಂಬುದು ವಿಶೇಷ.

  ಮೆಗಾ ಸ್ಟಾರ್ ಅಮಿತಾಬ್ ಬಚ್ಚನ್ ಅವರ ಒಂದು ಜೊತೆ ಜೀನ್ಸ್ ಪ್ಯಾಂಟ್ ಕೂಡ ಬಹಿರಂಗ ಹರಾಜಿಗೆ ಇಡಲಾಗಿದೆ. ಬಡಮಕ್ಕಳಿಗೆ ವಿಶ್ವದರ್ಜೆ ಶಿಕ್ಷಣ ನೀಡುವ ಉದ್ದೇಶದಿಂದ ಸರ್ಕಾರೇತರ ಸಂಸ್ಥೆಯೊಂದು (ಎನ್ ಜಿಓ) ನಿಧಿಸಂಗ್ರಹಿಸಲು ಈ ಕಾರ್ಯಕ್ರಮ ಆಯೋಜಿಸಿದೆ.

  ಈ ಕಾರ್ಯಕ್ರಮಕ್ಕೆ ಕೈಜೋಡಿಸಿರುವ ಅಮಿತಾಬ್ ಅವರು ತಮ್ಮ ಒಂದು ಜೊತೆ ಜೀನ್ಸ್ ಪ್ಯಾಂಟನ್ನು ಹಸ್ತಾಕ್ಷರ ಸಮೇತ ದಾನವಾಗಿ ನೀಡಿದ್ದಾರೆ. ಪರಿಕ್ರಮ ಎಂಬ ಸಂಸ್ಥೆ 'ಜೀನರೇಷನ್' ಎಂಬ ಕಾರ್ಯಕ್ರಮದ ಮೂಲಕ ನಿಧಿ ಸಂಗ್ರಹಕ್ಕೆ ಮುಂಬೈನಲ್ಲಿ ಚಾಲನೆ ನೀಡಿದೆ.

  ಸೌಲಭ್ಯ ವಂಚಿತ ಕೊಳಗೇರಿ ಮಕ್ಕಳ ಅತ್ಯುತ್ತಮ ಶಿಕ್ಷಣಕ್ಕಾಗಿ 'ಜೀನರೇಷನ್' ಕಾರ್ಯಕ್ರಮದ ಮೂಲಕ ನಿಧಿ ಸಂಗ್ರಹಿಸಲಾಗುತ್ತಿದೆ. ಈ ಕಾರ್ಯಕ್ರಮಕ್ಕಾಗಿ ಹಲವಾರು ಬಾಲಿವುಡ್ ತಾರೆಗಳು ತಮ್ಮ ಹಸ್ತಾಕ್ಷರವಿರುವ ಜೀನ್ಸ್ ಪ್ಯಾಂಟ್ ಗಳನ್ನು ನೀಡಿದ್ದಾರೆ.

  ಈ ಹರಾಜಿನಲ್ಲಿ ಸಂಗ್ರಹವಾದ ಹಣದಿಂದ ಈ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಖರ್ಚು ಮಾಡಲಾಗುತ್ತದೆ. ಅಮಿತಾಬ್ ಜೀನ್ಸ್ ಗೆ ಆರಂಭಿಕ ಹರಾಜು ರು.24,000 ನಿಗದಿಪಡಿಸಲಾಗಿದೆ. ಇದಕ್ಕಿಂತಲೂ ಹೆಚ್ಚಿನ ಹಣ ಸಂಗ್ರಹವಾಗುವ ಸಾಧ್ಯತೆಗಳಿವೆ ಎಂದು ನಿರೀಕ್ಷಿಸಲಾಗಿದೆ.

  ಕೇವಲ ಅಮಿತಾಬ್ ಅವರ ಜೀನ್ಸ್ ಅಷ್ಟೇ ಅಲ್ಲದೆ ತಾರೆಗಳಾದ ಕರೀನಾ ಕಪೂರ್, ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ, ಸೈಫ್ ಅಲಿ ಖಾನ್, ಅನುಷ್ಕಾ ಶರ್ಮಾ, ಶಾಹಿದ್ ಕಪೂರ್, ಸೋನಮ್ ಕಪೂರ್, ಅನಿಲ್ ಕಪೂರ್ ಹಾಗೂ ಕಂಗನಾ ರನೌತ್ ಅವರ ಜೀನ್ಸ್ ಪ್ಯಾಂಟ್ ಗಳನ್ನು ಹರಾಜಿಗೆ ಇಡಲಾಗಿದೆ.

  2003ರಲ್ಲಿ ಆರಂಭವಾದ 'ಪರಿಕ್ರಮ' ಸಂಸ್ಥೆ ಬಡಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶ್ರಮಿಸುತ್ತಿದೆ. ಆದರೆ ಇದೇ ಮೊದಲ ಬಾರಿಗೆ ತಮ್ಮ ಸಂಸ್ಥೆ ಜಾಗತಿಕ ಮಟ್ಟದಲ್ಲಿ ನಿಧಿ ಸಂಗ್ರಹಕ್ಕೆ ಮುಂದಾಗಿದೆ. ಇದಕ್ಕಾಗಿ ಬಾಲಿವುಡ್ ತಾರೆಗಳು ಮುಂದೆ ಬಂದಿರುವುದು ನಮ್ಮ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದೆ ಎಂದಿದ್ದಾರೆ ಪರಿಕ್ರಮ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಕ್ಲ ಭೋಸ್. (ಏಜೆನ್ಸೀಸ್)

  English summary
  Amitabh Bachchan's pair of jeans is all set to go under the hammer to raise funds for a non-profit organization that provides under-privileged children access to world class education. The auction will also feature jeans worn by Kareena Kapoor, Deepika Padukone, Priyanka Chopra, Saif Ali Khan, Anushka Sharma, Shahid Kapoor, Sonam Kapoor, Anil Kapoor and Kangana Ranaut.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X