For Quick Alerts
  ALLOW NOTIFICATIONS  
  For Daily Alerts

  Kareena Kapoor : ತನ್ನಿಬ್ಬರು ಮಕ್ಕಳೊಂದಿಗೆ ಮಾಲ್ಡೀವ್ಸ್ ಪ್ರವಾಸ ಕೈಗೊಂಡ ನಟಿ ಕರೀನಾ ಕಪೂರ್!

  |

  ಬಾಲಿವುಡ್ ನಟಿಯರು ಸೇರಿದಂತೆ ಅದೆಷ್ಟೋ ತಾರೆಯರು, ಸೆಲೆಬ್ರೆಟಿ ಮಕ್ಕಳು ಶೂಟಿಂಗ್‌ನಿಂದ ಬಿಡುವು ಪಡೆದು ವಿದೇಶಕ್ಕೆ ಹಾರುತ್ತಾರೆ. ಇದು ಸಾಮಾನ್ಯ ಕೂಡ ಹೌದು.

  Recommended Video

  ರಸ್ತೆಯಲ್ಲೆ ನಿಂತು ಮಾತುಕತೆ ನಡೆಸಿದ ಕರೀನಾ ಕಪೂರ್, ಕಾಜಲ್ | Kareena Kapoor | Kajol | Filmibeat Kannada

  ಬಾಲಿವುಡ್ ತಾರೆಯರು ಹೆಚ್ಚಾಗಿ ಮಾಲ್ಡೀವ್ಸ್ ಪ್ರವಾಸವನ್ನು ಹೆಚ್ಚು ಇಷ್ಟ ಪಡುತ್ತಾರೆ. ಅಂತೆಯೇ ವರ್ಷಕ್ಕೆ ಒಂದೆರೆಡು ಬಾರಿಯಾದರೂ ಪ್ರವಾಸ ಕೈಗೊಳ್ಳುತ್ತಾರೆ. ಅಲ್ಲಿ ರಜೆಯನ್ನು ಕಳೆದು ಖುಷಿ ಪಡುತ್ತಾರೆ.

  ಆಟಿಕೆ ಬಂದೂಕು ತೋರಿಸಿದ ಕರೀನಾ ಪುತ್ರನ ಮೇಲೆ ಮುಗಿಬಿದ್ಧ ಆನ್‌ಲೈನ್ ಧರ್ಮಾಂಧರು ಆಟಿಕೆ ಬಂದೂಕು ತೋರಿಸಿದ ಕರೀನಾ ಪುತ್ರನ ಮೇಲೆ ಮುಗಿಬಿದ್ಧ ಆನ್‌ಲೈನ್ ಧರ್ಮಾಂಧರು

  ಅಂತೆಯೇ ಇದೀಗ ಬಾಲಿವುಡ್ ಬೇಬೊ ಕರೀನಾ ಕಪೂರ್ ಖಾನ್ ಕೂಡ ತನ್ನಿಬ್ಬರು ಮಕ್ಕಳಾದ ತೈಮೂರ್ ಅಲಿ ಖಾನ್, ಜೆಹ್ ಅಲಿ ಖಾನ್ ಮತ್ತು ಸಹೋದರಿ ಕರಿಶ್ಮಾ ಕಪೂರ್ ಜೊತೆ ಮಾಲ್ಡೀವ್ಸ್‌ಗೆ ಹಾರಿದ್ದಾರೆ.

  ಶಾಲಾ ಪರೀಕ್ಷೆಯಲ್ಲಿ ಕರೀನಾ ಕಪೂರ್ ಪುತ್ರನ ಬಗ್ಗೆ ಪ್ರಶ್ನೆ: ಇದೇನು ಪ್ರಶ್ನೆ ಕೇಳಿದ್ದಾರೆ? ಶಾಲಾ ಪರೀಕ್ಷೆಯಲ್ಲಿ ಕರೀನಾ ಕಪೂರ್ ಪುತ್ರನ ಬಗ್ಗೆ ಪ್ರಶ್ನೆ: ಇದೇನು ಪ್ರಶ್ನೆ ಕೇಳಿದ್ದಾರೆ?

  ಮಕ್ಕಳೊಂದಿಗೆ ಮಾಲ್ಡೀವ್ಸ್‌ನಲ್ಲಿ ಕರೀನಾ ಕಪೂರ್

  ಮಕ್ಕಳೊಂದಿಗೆ ಮಾಲ್ಡೀವ್ಸ್‌ನಲ್ಲಿ ಕರೀನಾ ಕಪೂರ್

  ಮಾಲ್ಡೀವ್ಸ್‌ಗೆ ತೆರಳಿರುವ ಕಪೂರ್ ಸಹೋದರಿಯರಿಗೆ ಇದು ರಜೆಯ ಸಮಯ. ಹೀಗಾಗಿ ಸೋಮವಾರ(ಮಾರ್ಚ್ 14) ರಂದು, ಕರೀನಾ ಕಪೂರ್, ಮಕ್ಕಳಾದ ತೈಮೂರ್ ಅಲಿ ಖಾನ್, ಜೆಹ್ ಅಲಿ ಖಾನ್ ಮತ್ತು ಸಹೋದರಿ ಕರಿಶ್ಮಾ ಕಪೂರ್ ತಮ್ಮ ಖಾಸಗಿ ವಿಮಾನದಲ್ಲಿ ಮಾಲ್ಡೀವ್ಸ್‌ಗೆ ಹಾರಿದ್ದಾರೆ. ಮಾಲ್ಟೀವ್ಸ್‌ಗೆ ತೆರಳುವ ಸಮಯದಲ್ಲಿ ಕರಿಶ್ಮಾ ಕಪೂರ್ ಬಿಳಿ ಸಲ್ವಾರ್ ಮತ್ತು ಕುರ್ತಾವನ್ನು ಧರಿಸಿದ್ದರೆ, ಕರೀನಾ ಜೋಗರ್ಸ್, ಬ್ಯಾಗಿ ಟೀ ಶರ್ಟ್ ಮತ್ತು ಕ್ಯಾಪ್‌ ಜೊತೆ ಫಂಕಿ ಉಡುಪನ್ನು ಹಾಕಿದ್ದರು. ಕಪೂರ್ ಸಹೋದರಿಯರನ್ನು ಈ ರೀತಿ ಕಂಡು ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.

  ಸೆಲೆಬ್ರಿಟಿ ಛಾಯಾಗ್ರಾಹಕರು ಹಂಚಿಕೊಂಡ ಕ್ಲಿಪ್‌

  ಸೆಲೆಬ್ರಿಟಿ ಛಾಯಾಗ್ರಾಹಕರು ಹಂಚಿಕೊಂಡ ಕ್ಲಿಪ್‌

  ಇನ್ನು ಈ ಸಂದರ್ಭದಲ್ಲಿ ಕರೀನಾ ಅವರ ಚಿಕ್ಕ ಚಿಕ್ಕ ಮಕ್ಕಳು ತೈಮೂರ್ ಅಲಿ ಖಾನ್ ಮತ್ತು ಜೆಹ್ ಅಲಿ ಖಾನ್ ತಮ್ಮ ಕ್ಯಾಶುಯಲ್ ಬಟ್ಟೆಗಳಲ್ಲಿ ಸ್ಮಾರ್ಟ್ ಆಗಿ ಕಾಣುತ್ತಿದ್ದರು. ಸೆಲೆಬ್ರಿಟಿ ಛಾಯಾಗ್ರಾಹಕರು ಹಂಚಿಕೊಂಡ ಕ್ಲಿಪ್‌ನಲ್ಲಿ, ಕರಿಶ್ಮಾ ಜೆಹ್‌ನ ಕೆನ್ನೆಗಳನ್ನು ಎಳೆಯುತ್ತಿರುವುದನ್ನು ಸೆರೆಹಿಡಿದಿದ್ದಾರೆ. ಸದ್ಯ ಕರೀನಾ ಮತ್ತು ಕರಿಶ್ಮಾ ಕಪೂರ್ ಇಬ್ಬರೂ ಮಾಲ್ಡೀವ್ಸ್ ನಲ್ಲಿ ಕಳೆದಿರುವ ಚಿತ್ರಣಗಳನ್ನು ಇನ್ನು ಎಲ್ಲೂ ಶೇರ್ ಮಾಡಿಕೊಂಡಿಲ್ಲಾ. ಅಭಿಮಾನಿಗಳು ಇವರಿಬ್ಬರ ಮಾಲ್ಡೀವ್ಸ್ ಅಪ್‌ಡೇಟ್‌ಗಳ ಬಗ್ಗೆ ತಿಳಿದುಕೊಳ್ಳಲು ಕಾತುರರಾಗಿದ್ದಾರೆ.

  ನಟ-ನಟಿಯರು ಹೆಚ್ಚಾಗಿ ಈ ಮಾಲ್ಡೀವ್ಸ್ ಪ್ರವಾಸ

  ನಟ-ನಟಿಯರು ಹೆಚ್ಚಾಗಿ ಈ ಮಾಲ್ಡೀವ್ಸ್ ಪ್ರವಾಸ

  ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಮಾಲ್ಡೀವ್ಸ್ ಬಾಲಿವುಡ್ ತಾರೆಯರಿಗೆ ತುಂಬ ನೆಚ್ಚಿನ ತಾಣವಾಗಿದೆ. ಮತ್ತು ಪದೇ ಪದೇ, ನಟ-ನಟಿಯರು ಹೆಚ್ಚಾಗಿ ಈ ಮಾಲ್ಡೀವ್ಸ್ ಪ್ರವಾಸ ಕೈಗೊಳ್ಳುತ್ತಾರೆ. ಹಾಗೇ ತಮ್ಮ ರಜಾ ದಿನವನ್ನು ಸಖತ್ ಎಂಜಾಯ್ ಮಾಡುತ್ತಾರೆ. ಇತ್ತೀಚೆಗೆ ಬಾಲಿವುಡ್‌ನ ಸಿದ್ಧಾರ್ಥ್ ಮಲ್ಹೋತ್ರಾ, ವರುಣ್ ಧವನ್, ಜಾನ್ಹವಿ ಕಪೂರ್‌ನಿಂದ ಹಿಡಿದು ಅನನ್ಯ ಪಾಂಡೆ, ಕಿಯಾರಾ ಅಡ್ವಾಣಿ, ಸಾರಾ ಅಲಿ ಖಾನ್ ವರೆಗೆ ಬಹುತೇಕ ಬಾಲಿವುಡ್ ತಾರೆಯರು ಮಾಲ್ಡೀವ್ಸ್ ಪ್ರವಾಸ ಎಂಜಾಯ್ ಮಾಡಿ ಬಂದಿದ್ದರು.

  ಮಾಲ್ಡೀವ್ಸ್‌ ನಲ್ಲಿ ಸೈಫ್ ಅಲಿ ಖಾನ್ ಹುಟ್ಟುಹಬ್ಬ

  ಮಾಲ್ಡೀವ್ಸ್‌ ನಲ್ಲಿ ಸೈಫ್ ಅಲಿ ಖಾನ್ ಹುಟ್ಟುಹಬ್ಬ

  ಇನ್ನು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕೂಡ ಕರೀನಾ ಮಾಲ್ಡೀವ್ಸ್‌ ಪ್ರವಾಸ ಮಾಡಿದ್ರು. ಬಳಿಕ ಮತ್ತೆ ಪತಿ ಸೈಫ್ ಅಲಿ ಖಾನ್ ಅವರ 51 ನೇ ಹುಟ್ಟುಹಬ್ಬವನ್ನು ಆಚರಿಸಲು ಕೂಡ ಕರೀನಾ ದಂಪತಿ ಮಾಲ್ಡೀವ್ಸ್‌ಗೆ ಹಾರಿದ್ದರು. ಇದೀಗ ತನ್ನ ಸಹೋದರಿ ಮತ್ತು ಮಕ್ಕಳೊಂದಿಗೆ ಮತ್ತೊಮ್ಮೆ ಕರೀನಾ ಕಪೂರ್ ಖಾನ್ ಮಾಲ್ಡೀವ್ಸ್‌ಗೆ ಹಾರಿದ್ದಾರೆ. ಮಾಲ್ಡೀವ್ಸ್‌ನಲ್ಲಿ ಕರೀನಾರ ನೆಚ್ಚಿನ ಸ್ಥಳಗಳು ಇದ್ದು, ಅಲ್ಲಿ ಐಲ್ಯಾಂಡ್‌ನಲ್ಲಿ ಹೆಚ್ಚಿನ ಸಮಯ ಕಳೆಯಲು ಅವರು ಹೆಚ್ಚು ಇಷ್ಟ ಪಡುತ್ತಾರೆ. ಈ ಹಿಂದೆ ಕೂಡ ಸಂದರ್ಶನ ಒಂದರಲ್ಲಿ ಈ ಬಗ್ಗೆ ಕರೀನಾ ಕಪೂರ್ ಮಾತನಾಡಿದ್ದರು. ಹೀಗಾಗಿ ಪದೇ ಪದೇ ಬಾಲಿವುಡ್ ಬೇಬೊ ಕರೀನಾ ಕಪೂರ್ ಇಷ್ಟ ಪಟ್ಟು ಮಾಲ್ಡೀವ್ಸ್‌ಗೆ ತೆರಳುತ್ತಾರೆ.

  English summary
  Kareena Kapoor, along with sons Taimur Ali Khan, Jeh Ali Khan and sister Karisma Kapoor was spotted flying off to the Maldives in a private plane.
  Wednesday, March 16, 2022, 13:59
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X