»   » ಕರೀನಾ ಹೀರೋಯಿನ್ ಚಿತ್ರಕ್ಕೆ A ಸರ್ಟಿಫಿಕೇಟ್

ಕರೀನಾ ಹೀರೋಯಿನ್ ಚಿತ್ರಕ್ಕೆ A ಸರ್ಟಿಫಿಕೇಟ್

Posted By:
Subscribe to Filmibeat Kannada

ನಟಿ ಕರೀನಾ ಕಪೂರ್ ಮುಖ್ಯ ಭೂಮಿಕೆಯ ಮಧುರ್ ಭಂಡಾರ್ಕರ್ ನಿರ್ದೇಶನದ ಬಹುನಿರೀಕ್ಷಿತ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ 'ಎ' ಪ್ರಮಾಣ ಪತ್ರ ದೊರಕಿದೆ. ವಯಸ್ಕರ ಚಿತ್ರಕ್ಕೆ ದೊರೆಯುವ 'A' ಸರ್ಟಿಫಿಕೇಟ್ ದೊರೆತಿದ್ದಕ್ಕೆ ನಿರ್ದೇಶಕ ಮಧುರ್ ಭಂಡಾರ್ಕರ್ ಅಚ್ಚರಿ ಅಥವಾ ಅಸಮಾಧಾನ ಯಾವುದನ್ನೂ ಹೊರಹಾಕದಿರುವುದು ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದೆ.

ಆದರೆ ನಿರ್ದೇಶಕ ಮಧುರ್ ಭಂಡಾರ್ಕರ್ ಅವರಿಗೆ ತಮ್ಮ ಚಿತ್ರಕ್ಕೆ ಎ ಪ್ರಮಾಣ ಪತ್ರವೇ ದೊರೆಯಲಿದೆ ಎಂಬುದು ಮೊದಲೇ ಗೊತ್ತಿತ್ತು ಎಂಬುದು ಈಗ ಬಹಿರಂಗವಾಗಿದೆ. ಕಾರಣ, ಅವರು ತಮ್ಮ ಟ್ವಿಟ್ಟರ್ ಪೇಜಿನಲ್ಲಿ "ನಿರೀಕ್ಷಿಸಿದಂತೆ ಸೆನ್ಸಾರ್ ಮಂಡಳಿಯಿಂದ 'ಎ' ಸರ್ಟಿಫಿಕೇಟ್ ದೊರೆತಿದೆ" ಎಂದು ಟ್ವೀಟ್ ಮಾಡಿದ್ದಾರೆ. ಹೀಗಾಗಿ ಇನ್ಯಾವ ಸಾಕ್ಷಿಯ ಅಗತ್ಯವೂ ಅದಕ್ಕಿಲ್ಲ.

ಕರೀನಾ ಕಪೂರ್ ನಟನೆಯ ಹೀರೋಯಿನ್ ಚಿತ್ರದಲ್ಲಿ 'ನಟಿಯೊಬ್ಬರ ಜೀವನದಲ್ಲಿ ಮೇಕಪ್ ರೂಮ್ ಹಾಗೂ ಓಡಾಡುವ ವಾಹನದಲ್ಲಿ ಏನೆಲ್ಲ ನಡೆಯುತ್ತದೆ, ನಡೆಯಬಹುದು ಎಂಬುದನ್ನು ಸತ್ಯಕ್ಕೆ ಹತ್ತಿರವಾದ ಕಲ್ಪನೆಯೊಂದಿಗೆ ಕಥೆಯ ರೂಪದಲ್ಲಿ ನೀಡಲಾಗಿದೆ. ಈ ಚಿತ್ರದಲ್ಲಿ ಸಾಕಷ್ಟು ಬೋಲ್ಡ್ ಹಾಗೂ ಹಸಿ-ಬಿಸಿ ದೃಶ್ಯಗಳು, ಕುಡಿತ, ಮೋಜು, ಸ್ಮೋಕಿಂಗ್ ಹೀಗೆ ವಯಸ್ಕರು ಮಾತ್ರ ನೋಡಬಹುದಾದ ಸಾಕಷ್ಟು ಅಂಶಗಳಿವೆ' ಎಂಬುದನ್ನು ಚಿತ್ರತಂಡವೀಗ ಬಹಿರಂಗಪಡಿಸಿದೆ.

ಹೀಗಾಗಿ ಸಹಜವಾಗಿಯೇ ಚಿತ್ರತಂಡ ಹಾಗೂ ನಿರ್ದೇಶಕರೆಲ್ಲರಿಗೂ ಈ ಚಿತ್ರಕ್ಕೆ 'ಎ' ಪ್ರಮಾಣ ಪತ್ರವೇ ಗ್ಯಾರಂಟಿ ಎಂಬ ಅಂಶ ಮೊದಲೇ ಗೊತ್ತಿತ್ತು. ಆದ್ದರಿಂದ ಯಾರಿಗೂ ಶಾಕ್ ಆಗಿಲ್ಲ. ಅಂದಹಾಗೆ, ಈ ಚಿತ್ರದಲ್ಲಿ ನಟಿ ಕರೀನಾ, ಮಾಹಿ ಖಾನ್ ಎಂಬ ಮಹಿಳೆಯ ಪಾತ್ರವನ್ನು ತುಂಬಾ ಅಮೋಘವಾಗಿ ನಿರ್ವಹಿಸಿದ್ದಾರೆ ಎಂಬುದು ಚಿತ್ರತಂಡದ ಹೇಳಿಕೆ. ಅಂದುಕೊಂಡಂತೆ ನಡೆದರೆ ಚಿತ್ರವು ಬರುವ ಸೆಪ್ಟೆಂಬರ್ 21ಕ್ಕೆ (21 ಸೆಪ್ಟೆಂಬರ್ 2012) ಬಿಡುಗಡೆಯಾಗಲಿದೆ. (ಏಜೆನ್ಸೀಸ್)

English summary
Filmmaker Madhur Bhandarkar's much-awaited film Heroine gets an ‘A' certificate by the Censor Board. But, Bhandarkar is neither surprised nor disappointed over this as it was very much expected.
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada