»   » ಬಾಕ್ಸ್ ಆಫೀಸಲ್ಲಿ ತಳಕಚ್ಚಿದ ಕರೀನಾ ಹೀರೋಯಿನ್

ಬಾಕ್ಸ್ ಆಫೀಸಲ್ಲಿ ತಳಕಚ್ಚಿದ ಕರೀನಾ ಹೀರೋಯಿನ್

Posted By:
Subscribe to Filmibeat Kannada

ಕರೀನಾ ಕಪೂರ್ ಅಭಿನಯದ ಬಹುನಿರೀಕ್ಷಿತ 'ಹೀರೋಯಿನ್' ಚಿತ್ರ ಬಾಕ್ಸಾಫೀಸಲ್ಲಿ ನೆಲಕಚ್ಚಿದೆ. ಸೆಪ್ಟೆಂಬರ್ 21ರಂದು ಬಿಡುಗಡೆಯಾದ ಈ ಚಿತ್ರ ಇದುವರೆಗೂ ಬಾಕ್ಸ್ ಆಫೀಸಲ್ಲಿ ರು.25 ಕೋಟಿ ಕಲೆಕ್ಷನ್ ಮಾಡಿದೆ. ಚಿತ್ರಕ್ಕೆ ಹಾಕಿರುವ ಬಂಡವಾಳ ರು. 32 ಕೋಟಿ. ಲೆಕ್ಕಾ ಹಾಕುತ್ತಾ ಹೋದರೆ ಎರಡನೇ ವಾರದ ಕಲೆಕ್ಷನ್ ಫುಲ್ ಡಲ್ ಆಗಿದೆ.

ಸಾಕಷ್ಟು ಭರವಸೆ ಹುಟ್ಟಿಸಿದ್ದ ಈ ಚಿತ್ರವನ್ನು ಪ್ರೇಕ್ಷಕರು ಯಾಕೆ ಸ್ವೀಕರಿಸುತ್ತಿಲ್ಲ ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಯಾಗುತ್ತಿದೆ. ಚಿತ್ರ ನೋಡಿದವರು ಫೇಸ್ ಬುಕ್ ನಲ್ಲಿ ಮಹೇಶ್ ಭಟ್ ಅವರನ್ನು ಯದ್ವಾತದ್ವ ಬೆಂಡೆತ್ತಿದ್ದಾರೆ.


ಚಿತ್ರಕಥೆಯಲ್ಲಿ ಬಿಗಿ ನಿರೂಪಣೆ ಇಲ್ಲದಿರುವುದು ಎಲ್ಲರ ಟೀಕೆಗೆ ಗುರಿಯಾಗಿರುವ ಅಂಶ. ಕಥೆ ಕೂಡಾ ಅಷ್ಟೇ ಅಲ್ಲಲ್ಲೇ ಗಿರಕಿಹೊಡೆಯುತ್ತದೆ ಎಂದಿದ್ದಾರೆ ಕೆಲವರು. ಕತೆಯಲ್ಲಿ ಗೊಂದಲವಿದ್ದು ಮಧುರ್ ಭಂಡಾರಕರ್ ಈ ರೀತಿ ಮಾಡುತ್ತಾರೆ ಎಂದು ಊಹಿಸಿರಲಿಲ್ಲ ಎಂಬುದು ಕೆಲವರ ಆರೋಪ.

ಇನ್ನೂ ಕೆಲವರು 10 ವರ್ಷಗಳಷ್ಟು ಹಳೆಯ ಸರಕು ಇದು ಎಂದಿದ್ದಾರೆ. ಪ್ರಿಯಾಂಕಾ ಚೋಪ್ರಾ ಅಭಿನಯದ 'ಫ್ಯಾಷನ್' ಚಿತ್ರವನ್ನು ಬಹುತೇಕ ಹೋಲುತ್ತದೆ. 'ಹೀರೋಯಿನ್' ಚಿತ್ರದಲ್ಲಿ ಹೊಸದೇನು ಇಲ್ಲ, 'ಪೇಜ್ 3' ಹಾಗೂ 'ಫ್ಯಾಷನ್' ಚಿತ್ರಗಳ ಪುನರಾವರ್ತನೆ ಎಂದಿದ್ದಾರೆ ಮತ್ತೂ ಕೆಲವರು.

ಚಿತ್ರದ ಬಗೆಗಿನ ಟೀಕೆಗಳ ಜೊತೆಗೆ ಕರೀನಾ ಕಪೂರ್ ಅಭಿನಯದ ಬಗ್ಗೆಯೂ ಒಂದಷ್ಟು ಅಪಸ್ವರಗಳು ಮಿಡಿದಿವೆ. ಇಷ್ಟು ದಿನ ಕರೀನಾ ಕಪೂರ್ ಒಂದಷ್ಟು ಸಭ್ಯವಾಗಿ ಅಭಿನಯಿಸುತ್ತಿದ್ದರು. 'ಹೀರೋಯಿನ್' ಚಿತ್ರದಲ್ಲಿ ಆಕೆಯ ಮೈಮಾಟ ಪ್ರದರ್ಶನ ಅತಿಯಾಗಿದೆ. ಆಕೆಯ ಬಗ್ಗೆ ಇದ್ದ ಅಷ್ಟೋ ಇಷ್ಟೋ ಪ್ರೀತಿ ಕೂಡ ಕಳೆದುಕೊಂಡಿದ್ದಾರೆ ಎಂಬ ಆರೋಪವನ್ನು ಆಕೆಯ ಅಭಿಮಾನಿಗಳು ಮಾಡಿದ್ದಾರೆ. (ಒನ್ಇಂಡಿಯಾ ಕನ್ನಡ)

English summary
Kareena Kapoor lead bollywood film Heroine miss the mark at the box office. The audience slammed the film, It was more or less done in Priyanka's Fashion. People said it's a mixture of Page 3 and Fashion, nothing new.
Please Wait while comments are loading...