twitter
    For Quick Alerts
    ALLOW NOTIFICATIONS  
    For Daily Alerts

    ಕರೀನಾ 'ಹೀರೋಯಿನ್' ಬಿಡುಗಡೆಗೆ ಭಾರಿ ಸಮಸ್ಯೆ

    |

    ಕರೀನಾ ಕಪೂರ್ ನಟನೆ ಹಾಗೂ ಮಧುರ್ ಭಂಡಾರ್ಕರ್ ನಿರ್ದೇಶನದ 'ಹೀರೋಯಿನ್' ಚಿತ್ರಕ್ಕೆ ಹೊಸ ಭಾರಿ ಸಮಸ್ಯೆಯೊಂದು ಎದುರಾಗಿದೆ. ಮಾಹಿತಿ ಮತ್ತು ಪ್ರಚಾರ ಇಲಾಖೆ (I&B), ಈ ಚಿತ್ರದಲ್ಲಿರುವ ಸ್ಮೋಕಿಂಗ್ ದೃಶ್ಯಗಳು ತೆರೆಯ ಮೇಲೆ ಬಂದಾಗ ತಪ್ಪದೇ 'ಧೂಮಪಾನ ಆರೋಗ್ಯಕರ' ಮುಂತಾದ ಧೂಮಪಾನ ವಿರೋಧಿ ಸ್ಲೋಗನ್ ಗಳನ್ನು ಬಳಸುವಂತೆ ಒತ್ತಾಯ ಹೇರಿದೆ. ಆದರೆ ಚಿತ್ರತಂಡ ಇಲಾಖೆ ಮಾತಿಗೆ ವಿರುದ್ಧವಾಗಿ ದೆಹಲಿ ಹೈಕೋರ್ಟ್ ಮೊರೆ ಹೋಗಿದೆ.

    ಚಿತ್ರದ ನಿರ್ಮಾಣ ಸಂಸ್ಥೆಯಾದ ಯುಟಿವಿ ಸಾಫ್ಟ್ ವೇರ್ ಕಮ್ಯುನಿಕೇಶನ್, ಐ ಅಂಡ್ ಬಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದು ಇಲಾಖೆ ನಿರ್ದೇಶನವನ್ನು ಪ್ರಶ್ನಿಸಿದೆ. ಇಲಾಖೆ, ಚಿತ್ರತಂಡಕ್ಕೆ ಆಗಸ್ಟ್ ನಲ್ಲಿ ನೀಡಿರುವ ಎರಡು ಪತ್ರದ ಪ್ರಕಾರ, 20 ಸೆಕೆಂಡ್ ಅವಧಿಯ ಎರಡು ಧೂಮಪಾನ ವಿರೋಧಿ ಹೇಳಿಕೆಗಳನ್ನು ಚಿತ್ರದಲ್ಲಿನ ಸ್ಮೋಕಿಂಗ್ ದೃಶ್ಯಗಳು ತೆರೆಯ ಮೇಲೆ ಬಂದಾಗ ತೋರಿಸಬೇಕೆಂದು ಒತ್ತಾಯಿಸಿದೆ. ಜೊತೆಗೆ ಇದನ್ನು ಮಧ್ಯಂತರಕ್ಕೆ ಪೂರ್ವದಲ್ಲಿ ಹಾಗೂ ನಂತರ, ಹೀಗೆ ಎರಡು ಬಾರಿ ತೆರೆಯ ಮೇಲೆ ತೋರಿಸಲು ಆಗ್ರಹಿಸಿದೆ.

    ಇಲಾಖೆ ಪ್ರಕಾರ, ತೆರೆಯಲ್ಲಿ ಬರುವ ಸ್ಮೋಕಿಂಗ್ ದೃಶ್ಯದಲ್ಲಿ ಯಾವ ಕಲಾವಿದರರು ನಟಿಸಿದ್ದಾರೋ ಅವರೇ ತಮ್ಮ ಧ್ವನಿ ನೀಡಿರುವ 20 ಸೆಕೆಂಡುಗಳ ಧೂಮಪಾನ ವಿರೋಧಿ ಹೇಳಿಕೆ ತೆರೆಯಲ್ಲಿ ಕಾಣಿಸಿಕೊಳ್ಳಬೇಕು. ಇದನ್ನು ಚಿತ್ರತಂಡ ತೀವ್ರವಾಗಿ ವಿರೋಧಿಸಿದೆ. ಈ ಕುರಿತು ಅಸಮಾಧಾನಗೊಂಡಿರುವ ಮಧುರ್ ಭಂಡಾರ್ಕರ್ ಮತ್ತು ಟೀಮ್, ಇದನ್ನು ವಿರೋಧಿಸಿರುವ ಟೀಮ್, ಈಗ ದೆಹಲಿ ಹೈಕೋರ್ಟ್ ಆದೇಶಕ್ಕೆ ಕಾಯುವಂತಾಗಿದೆ.

    ಬರುವ ತಿಂಗಳು, ಅಂದರೆ ಸೆಪ್ಟೆಂಬರ್ 21, 2012 ಕ್ಕೆ ತಮ್ಮ 'ಹಿರೋಯಿನ್' ಚಿತ್ರದ ಬಿಡುಗಡೆಯನ್ನು ಘೋಷಿಸಿರುವ ಚಿತ್ರತಂಡಕ್ಕೆ ಇದೀಗ ವಾರ್ತಾ ಮತ್ತು ಪ್ರಚಾರ ಇಲಾಖೆ ಎಚ್ಚರಿಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈಗ ಕೋರ್ಟ್ಆದೇಶಕ್ಕಾಗಿ ಚಿತ್ರತಂಡ ಕಾಯುತ್ತಿದೆ. ಯಾವ ಆದೇಶ ಬರುವುದೋ ಎಂಬ ಚಿಂತೆ ಚಿತ್ರತಂಡಕ್ಕಾದರೆ, ಚಿತ್ರವನ್ನು ಆದಷ್ಟು ಬೇಗ ನೋಡುವ ಹಂಬಲ ಪ್ರೇಕ್ಷಕರದು. (ಏಜೆನ್ಸೀಸ್)

    English summary
    Kareena Kapoor Heroine had landed in trouble. The I&B has imposed a condition of displaying a "static" anti-smoking message during smoking scenes.
 
    Tuesday, August 28, 2012, 12:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X