For Quick Alerts
  ALLOW NOTIFICATIONS  
  For Daily Alerts

  ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ದಂಪತಿಗೆ ಮದುವೆ ವಾರ್ಷಿಕೋತ್ಸವದ ಸಂಭ್ರಮ

  |

  ಬಾಲಿವುಡ್ ನಟಿ ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ದಂಪತಿಗೆ ಇಂದು ವಿಶೇಷವಾದ ದಿನ. ಈ ದಿನವನ್ನು ಇಬ್ಬರೂ ಸಂತೋಷದಿಂದ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಹೌದು, ಬಾಲಿವುಡ್ ನ ಈ ಸ್ಟಾರ್ ಕಪಲ್ ಗೆ ಇಂದು 8ನೇ ಮದುವೆ ವಾರ್ಷಿಕೋತ್ಸವದ ಸಂಭ್ರಮ.

  ಕರೀನಾ ಮತ್ತು ಸೈಫ್ ಅಲಿ ಖಾನ್ ಇಬ್ಬರು ಮದುವೆಯಾಗಿ 8 ವರ್ಷಗಳಾಗಿದೆ. ಇಬ್ಬರೂ ಒಬ್ಬರಿಗೊಬ್ಬರು ಪ್ರೀತಿಸಿ ಮದುವೆಯಾದವವರು. ಇಬ್ಬರ ಪ್ರೇಮ ಕಥೆ ಯಾವುದೇ ಸಿನಿಮಾಗಿಂತ ಕಮ್ಮಿ ಇಲ್ಲ. ಈ ಜೋಡಿ 2012 ಅಕ್ಟೋಬರ್ 16ರಂದು ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ. 8 ವರ್ಷದ ವೈವಾಹಿಕ ಜೀವನವನ್ನು ಸುಂದರವಾಗಿ ಕಳೆದಿದ್ದಾರೆ. ಈ ದಂಪತಿಗೆ ತೈಮೂರ್ ಅಲಿ ಖಾನ್ ಎನ್ನುವ ಮುದ್ದಾದ ಮಗನಿದ್ದಾನೆ.

  ಕೊರೊನಾ, ಪ್ರೆಗ್ನೆನ್ಸಿ ಮತ್ತು ಭಯದ ನಡುವೆ ಚಿತ್ರೀಕರಣ ಮಾಡಬೇಕಿತ್ತು: ಕರೀನಾ ಕಪೂರ್ಕೊರೊನಾ, ಪ್ರೆಗ್ನೆನ್ಸಿ ಮತ್ತು ಭಯದ ನಡುವೆ ಚಿತ್ರೀಕರಣ ಮಾಡಬೇಕಿತ್ತು: ಕರೀನಾ ಕಪೂರ್

  ಕರೀನಾ ಕಪೂರ್ ಮಗನ ಫೋಟೋವನ್ನು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿರುತ್ತಾರೆ. ಕರೀನಾ ದಂಪತಿಗೆ ಅಭಿಮಾನಿಗಳು ಮತ್ತು ಸ್ನೇಹಿತರು ಮದುವೆ ವಾರ್ಷಿಕೋತ್ಸವದ ಶುಭಾಶಯ ತಿಳಿಸುತ್ತಿದ್ದಾರೆ. 8ನೇ ವರ್ಷದ ವಾರ್ಷಿಕೋತ್ಸವ ಸಂದರ್ಭದಲ್ಲಿ ಕರೀನಾ ಸಾಮಾಜಿಕ ಜಾಲತಾಣಲ್ಲಿ ಸಂತೋಷದ ದಾಂಪತ್ಯ ಜೀವನದ ಬಗ್ಗೆ ಬರೆದುಕೊಂಡಿದ್ದಾರೆ.

  'ಒಂದು ಕಾಲದಲ್ಲಿ ಬೆಬೂ ಎಂಬ ಹುಡುಗಿ ಮತ್ತು ಸೈಫು ಎಂಬ ಹುಡುಗ ಇದ್ದರೂ ಆಹಾರ ಮತ್ತು ವೈನ್ ಅನ್ನು ಇಷ್ಟಪಟ್ಟರು. ನಂತರ ಇಬ್ಬರೂ ಸಂತೋಷದಿಂದ ಬದುಕಿದರು. ಸಂತೋಷದ ದಾಂಪತ್ಯ ಜೀವನದ ಕೀಲಿಯನ್ನು ನೀವು ಈಗ ತಿಳಿದಿದ್ದೀರಿ. ಸಂತೋಷದ ವಾರ್ಷಿಕೋತ್ಸವ' ಎಂದು ಬರೆದು ಇಬ್ಬರ ಸುಂದರ ಫೋಟೋವನ್ನು ಹಂಚಿಕೊಂಡಿದ್ದಾರೆ.

  ಸರ್ಜಾ ಕುಟುಂಬಕ್ಕೆ ನಾಳೆ ಮಹತ್ವದ ದಿನ | Chiranjeevi Sarja Family | Filmibeat Kannada

  ಅಂದ್ಹಾಗೆ ಕರೀನಾ ಕಪೂರ್ ಎರಡನೇ ಬಾರಿ ಗರ್ಭಿಣಿ. ಮುಂದಿನ ವರ್ಷ ಈ ತಾರಾದಂಪತಿ ಎರಡನೇ ಮಗುವನ್ನು ಬರಮಾಡಿಕೊಳ್ಳಲಿದ್ದಾರೆ. ಕರೀನಾ ಕಪೂರ್ ಸದ್ಯ ಲಾಲಾ ಸಿಂಗ್ ಚಡ್ಡಾ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ನಿನ್ನೆಯಷ್ಟೆ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಕೊರೊನಾ ಮತ್ತು ಪ್ರೆಗ್ನೆನ್ಸಿ ನಡುವೆ ಚಿತ್ರೀಕರಣ ತುಂಬ ಕಠಿಣವಾಗಿತ್ತು ಎಂದು ಬರೆದುಕೊಂಡಿದ್ದಾರೆ.

  English summary
  Happy anniversary Kareena Kapoor-Saif Ali Khan: Kareena Kapoor Khan shared a sweet post To Her Happy Married Life On 8th Wedding Anniversary.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X