»   » 6 ತಿಂಗಳ ಮಗುವಿನ ತಾಯಿ ಕರೀನಾ ಟಿವಿ ನಟನ ಜೊತೆ ರೊಮ್ಯಾನ್ಸ್

6 ತಿಂಗಳ ಮಗುವಿನ ತಾಯಿ ಕರೀನಾ ಟಿವಿ ನಟನ ಜೊತೆ ರೊಮ್ಯಾನ್ಸ್

Posted By:
Subscribe to Filmibeat Kannada

ದೀರ್ಘಕಾಲದ ಮೆಟರ್ನಿಟಿ ರಜೆ ನಂತರ ಬಾಲಿವುಡ್ ಬೆಬೋ ಕರೀನಾ ಕಪೂರ್ ಖಾನ್ ಅಭಿನಯಕ್ಕೆ ಹಿಂದಿರಿಗಿದ್ದಾರೆ. ಸದ್ಯದಲ್ಲೇ ಕರೀನಾ, ಶಶಾಂಕ್ ಘೋಶ್ ನಿರ್ದೇಶನದ 'ವೀರ್ ದಿ ವೆಡ್ಡಿಂಗ್' ಎಂಬ ಚಿತ್ರಕ್ಕಾಗಿ ಬಣ್ಣಹಚ್ಚಲಿದ್ದಾರೆ.

ಕರೀನಾ ಕಪೂರ್ ಮಗನ ಈ ಎಕ್ಸ್ ಪ್ರೆಶನ್ ಗೆ ಎಷ್ಟು ಮಾರ್ಕ್ಸ್ ಕೊಡ್ತೀರ?

'ವೀರ್ ದಿ ವೆಡ್ಡಿಂಗ್' ಚಿತ್ರ ಹಲವು ಕಾರಣಗಳಿಂದ ಡಿಲೇ ಆಗಿತ್ತು. ಅದರಲ್ಲಿ ಕರೀನಾ ಕಪೂರ್ ತಾಯಿಯಾಗಿದ್ದು ಒಂದು ಕಾರಣವಾಗಿತ್ತು. ಆದರೆ ಈಗ ಚಿತ್ರತಂಡ ಶೂಟಿಂಗ್ ಆರಂಭಿಸಲು ಸಂಪೂರ್ಣ ಸಿದ್ಧವಾಗಿದೆಯಂತೆ.

Kareena Kapoor Khan to romance this actor in 'Veere Di Wedding'

ಅಂದಹಾಗೆ ಕರೀನಾ ಕಪೂರ್ ಅಭಿನಯಿಸಲಿರುವ 'ವೀರ್ ದಿ ವೆಡ್ಡಿಂಗ್' ಚಿತ್ರದಲ್ಲಿ ಸುಮೀತ್ ವ್ಯಾಸ್ ಎಂಬ ಕಿರುತೆರೆ ನಟ ಬಣ್ಣಹಚ್ಚಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಚಿತ್ರದಲ್ಲಿ ಕರೀನಾ ಬಾಯ್ ಫ್ರೆಂಡ್ ಆಗಿ ನಟಿಸಲಿರುವ ಸುಮೀತ್ ಅವರ ಜೊತೆ ರೊಮ್ಯಾನ್ಸ್ ದೃಶ್ಯಗಳಲ್ಲಿ ಸಹ ಕಾಣಿಸಿಕೊಳ್ಳಲಿದ್ದಾರಂತೆ.

'ಅಮ್ಮ' ಆದ್ಮೇಲೆ ಕರೀನಾ ಕಪೂರ್ ಹೊಸ ಹೇರ್ ಸ್ಟೈಲ್!

ಸುಮೀತ್ ವ್ಯಾಸ್ 'ಪರ್ಮನೆಂಟ್ ರೂಂಮೆಟ್ಸ್' ಎಂಬ ವೆಬ್‌ ಸೀರೀಸ್ ನಲ್ಲಿ ನಟಿಸಿದ್ದು, ಬಾಲಿವುಡ್ ನ ಕೆಲವು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಈ ಹಿಂದೆ ಕಾಣಿಸಿಕೊಂಡಿದ್ದಾರೆ. 'ವೀರ್ ದಿ ವೆಡ್ಡಿಂಗ್' ಚಿತ್ರಕ್ಕೆ ಸುಮೀತ್ ಇನ್ನೂ ಫೈನಲೈಸ್ ಆಗಿಲ್ಲ. ಆದರೆ ಚಿತ್ರತಂಡ ಇವರ ಸಹಿಗಾಗಿ ಕಾಯುತ್ತಿದೆಯಂತೆ. ವಿಶೇಷ ಅಂದ್ರೆ ನಾಲ್ಕು ಸ್ನೇಹಿತರ ನಡುವೆ ನಡೆಯುವ ಕಥೆ ಹೊಂದಿರುವ ಈ ಚಿತ್ರದಲ್ಲಿ ಕರೀನಾ ಕಪೂರ್ ಜೊತೆ ನಟಿ ಸೋನಂ ಕಪೂರ್ ಸಹ ಅಭಿನಯಿಸಲಿದ್ದಾರಂತೆ.

English summary
Kareena Kapoor Khan will mark her return to Bollywood after her short maternity break with Shashank Ghosh's Veere Di Wedding'. The film which got delayed due to multiple reasons, one being Bebo's pregnancy, is now back on track and is finally ready to go on floors soon.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada