For Quick Alerts
  ALLOW NOTIFICATIONS  
  For Daily Alerts

  ಶಾರೂಖ್ ಗೆ ನಾಯಕಿಯಾಗುವ ಆಸಕ್ತಿ ಈ ನಟಿಗೆ ಇಲ್ಲ.!

  By Bharath Kumar
  |

  ಬಾಲಿವುಡ್ ಬಾದ್ ಶಾ ಶಾರೂಖ್ ಖಾನ್ ಜೊತೆಯಲ್ಲಿ ನಟಿಸಬೇಕು, ಅವರ ಚಿತ್ರದಲ್ಲಿ ಹೀರೋಯಿನ್ ಆಗ್ಬೇಕು ಎನ್ನುವುದು ಅದೇಷ್ಟೋ ನಟಿಯರ ಆಸೆಯಿರುತ್ತೆ. ಆದ್ರೆ, ಇಲ್ಲೊಬ್ಬ ನಟಿಗೆ ಶಾರೂಖ್ ಗೆ ಜೋಡಿಯಾಗುವ ಆಸಕ್ತಿಯೇ ಇಲ್ಲ ಎಂದು ಹೇಳಲಾಗುತ್ತೆ.

  ಸದ್ಯ, 'ಜೀರೋ' ಚಿತ್ರದಲ್ಲಿ ನಾಯಕನಾಗಿ ಅಭಿನಯಿಸುತ್ತಿರುವ ಶಾರೂಖ್ ಖಾನ್ ಅದಾದ ಬಳಿಕ ಭಾರತೀಯ ಮೊದಲ ಗಗನಯಾತ್ರಿ ರಾಕೇಶ್ ಶರ್ಮಾ ಅವರ ಬಯೋಪಿಕ್ ನಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ 'ಸಲ್ಯೂಟ್' ಎಂದು ಹೆಸರಿಟ್ಟಿದ್ದು, ನಾಯಕಿಗಾಗಿ ಹುಡುಕಾಟ ಆರಂಭವಾಗಿದೆ.

  ಸದ್ಯಕ್ಕೆ ಅಪ್ರೋಚ್ ಮಾಡಿರುವ ನಾಯಕಿ ಬಿಟ್ಟರೇ, ಬೇರೆ ಯಾರನ್ನ ಹೀರೋಯಿನ್ ಮಾಡೋದು ಎಂಬ ತಲೆನೋವು ಚಿತ್ರತಂಡಕ್ಕೆ ಕಾಡುತ್ತಿದೆ. ಅಷ್ಟಕ್ಕೂ, ಶಾರೂಖ್ ಜೊತೆ ನಟಿಸಲು ಆಸಕ್ತಿ ತೋರದ ಆ ನಟಿ ಯಾರು.? ಈಗ ಯಾರನ್ನ ಈ ಚಿತ್ರಕ್ಕಾಗಿ ಕರೆತರುವ ಪ್ರಯತ್ನ ಸಾಗಿದೆ.

  ಕರೀನಾ ಅವರಿಗೆ ಅವಕಾಶ ಬಂದಿದೆ

  ಕರೀನಾ ಅವರಿಗೆ ಅವಕಾಶ ಬಂದಿದೆ

  ಶಾರೂಖ್ ಖಾನ್ ಅವರ 'ಸಲ್ಯೂಟ್' ಚಿತ್ರದಲ್ಲಿ ನಾಯಕಿಯಾಗಲು ನಟಿ ಕರೀನಾ ಕಪೂರ್ ಗೆ ಅವಕಾಶ ಬಂದಿದೆ. ಆದ್ರೆ, ಈ ಆಫರ್ ನ್ನ ಕರೀನಾ ಒಪ್ಪಿಕೊಳ್ಳುವ ಸಾಧ್ಯತೆ ಕಡಿಮೆ ಇದೆ ಎನ್ನಲಾಗಿದೆ. ಬಹುಶಃ ಈ ನಟಿಗೆ ಶಾರೂಖ್ ಚಿತ್ರದಲ್ಲಿ ನಟಿಸುವ ಆಸಕ್ತಿ ಇಲ್ಲ ಎಂದು ಹೇಳಲಾಗ್ತಿದೆ.

  ಬಿಗ್ ಬಜೆಟ್ ಸಿನಿಮಾ ಬೇಡ ಎನ್ನಿಸುತ್ತಿದೆ

  ಬಿಗ್ ಬಜೆಟ್ ಸಿನಿಮಾ ಬೇಡ ಎನ್ನಿಸುತ್ತಿದೆ

  ಈ ಬಗ್ಗೆ ಪರೋಕ್ಷವಾಗಿ ಮಾತನಾಡಿರುವ ಕರೀನಾ ''ನನಗೇ ಬೇರೆ ಏನಾದರೂ ಮಾಡಬೇಕು ಎನಿಸಿದೆ. ಈ ಬಿಗ್ ಬಜೆಟ್ ಸಿನಿಮಾಗಳನ್ನ ಹೊರತು ಪಡಿಸಿ, ನನ್ನ ಸಿನಿಮಾಗಳನ್ನ ಬದಲಿಸಿಕೊಳ್ಳಬೇಕಿದೆ'' ಎಂದು ಹೇಳುವ ಮೂಲಕ ಶಾರೂಖ್ ಜೊತೆ ಅಭಿನಯಿಸುವುದು ಅನುಮಾನ ಎಂದಿದ್ದಾರೆ.

  ಈ ಒಪ್ಪಂದಕ್ಕೆ ಓಕೆ ಅಂದ್ರೆ 'ವಿಕ್ರಂವೇದ' ರೀಮೇಕ್ ಮಾಡ್ತಾರಂತೆ ಶಾರೂಖ್.!ಈ ಒಪ್ಪಂದಕ್ಕೆ ಓಕೆ ಅಂದ್ರೆ 'ವಿಕ್ರಂವೇದ' ರೀಮೇಕ್ ಮಾಡ್ತಾರಂತೆ ಶಾರೂಖ್.!

  ಐಶ್ವರ್ಯ ರೈ ಮಾಡಬಹುದಾ.?

  ಐಶ್ವರ್ಯ ರೈ ಮಾಡಬಹುದಾ.?

  ಕರೀನಾ ಹೊರತುಪಡಿಸಿದರೇ, ಈ ಚಿತ್ರಕ್ಕಾಗಿ ಐಶ್ವರ್ಯ ರೈ ಬಚ್ಚನ್ ಅವರನ್ನ ಕರೆತರುವ ಯೋಚನೆಯೂ ಚಿತ್ರತಂಡಕ್ಕೆ ಇದೆ. ಆದ್ರೆ, ಐಶ್ ಈಗಾಗಲೇ ಮೂರು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಮೂರು ಚಿತ್ರಗಳ ಪ್ರಿ-ಪ್ರೊಡಕ್ಷನ್ ಕೆಲಸವೂ ಆರಂಭವಾಗಿದೆ. ಈ ಮೂರರಲ್ಲಿ 'ಫೆನ್ನಿ ಖಾನ್' ಸಿನಿಮಾ ಮೊದಲು ಬಿಡುಗಡೆಯಾಗಲಿದೆ. ಇವುಗಳ ಮಧ್ಯೆ ಖಾನ್ ಚಿತ್ರಕ್ಕಾಗಿ ಡೇಟ್ ಹೊಂದಾಣಿಕೆ ಮಾಡಿಕೊಳ್ತಾರ ಎಂಬುದು ಕಾದುನೋಡಬೇಕಿದೆ.

  ದೀಪಿಕಾ ಸೂಕ್ತ ಎನ್ನಲಾಗುತ್ತಿದೆ

  ದೀಪಿಕಾ ಸೂಕ್ತ ಎನ್ನಲಾಗುತ್ತಿದೆ

  ಕರೀನಾ ಮತ್ತು ಐಶ್ವರ್ಯ ರೈ ಬಿಟ್ಟರೇ ದೀಪಿಕಾ ಪಡುಕೋಣೆ ಈ ಚಿತ್ರಕ್ಕೆ ಸೂಕ್ತವಂತೆ. ಆದ್ರೆ, ದೀಪಿಕಾ ಪಡುಕೋಣೆ ಸದ್ಯಕ್ಕೆ ಇರ್ಫಾನ್ ಖಾನ್ ಸಿನಿಮಾ ಹೊರತು ಪಡಿಸಿ, ಬೇರೆ ಯಾವ ಚಿತ್ರವೂ ಒಪ್ಪಿಕೊಂಡಿಲ್ಲ. ಯಾಕಂದ್ರೆ, ದೀಪಿಕಾ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಹೀಗಾಗಿ, ಸದ್ಯಕ್ಕೆ ದೀಪಿಕಾ ಸಿಗೋದು ಡೌಟು.

  ಎಸ್.ಆರ್.ಕೆ ಜೊತೆಯಲ್ಲಿ ಯಾರನ್ನ ನೋಡಬಯಸುತ್ತೀರಾ.?

  ಎಸ್.ಆರ್.ಕೆ ಜೊತೆಯಲ್ಲಿ ಯಾರನ್ನ ನೋಡಬಯಸುತ್ತೀರಾ.?

  'ಸಲ್ಯೂಟ್' ಚಿತ್ರಕ್ಕೆ ನಾಯಕಿ ಫಿಕ್ಸ್ ಆಗಿಲ್ಲ. ಶಾರೂಖ್ ಜೊತೆಯಲ್ಲಿ ಕರೀನಾ, ದೀಪಿಕಾ, ಐಶ್ವರ್ಯ ಮಿಸ್ ಆಗುವ ಲಕ್ಷಣವಿದೆ. ಹೀಗಾಗಿ, ಈ ಚಿತ್ರದಲ್ಲಿ ಎಸ್.ಆರ್.ಕೆ ಜೊತೆಯಲ್ಲಿ ನೀವು ಯಾರನ್ನ ನೋಡಬಯಸುತ್ತೀರಾ.?

  'ಪದ್ಮಾವತ್' ನಂತರ ಬನ್ಸಾಲಿ ಆಫರ್ ತಿರಸ್ಕರಿಸಿದ ಶಾರೂಖ್: ಕಾರಣವೇನು?'ಪದ್ಮಾವತ್' ನಂತರ ಬನ್ಸಾಲಿ ಆಫರ್ ತಿರಸ್ಕರಿಸಿದ ಶಾರೂಖ್: ಕಾರಣವೇನು?

  English summary
  Rumours were also rife that Kareena Kapoor Khan was approached for Shahrukh Khan starrer Salute, which will be a biopic on the first Indian astronaut Rakesh Sharma.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X