»   » ಕರಿನಾ ಮಗನ ದೃಷ್ಠಿ ತೆಗೆದ ಮಂಗಳ ಮುಖಿಯರಿಗೆ ಇಷ್ಟೊಂದು ದೊಡ್ಡ ಕಾಣಿಕೆಯೇ!

ಕರಿನಾ ಮಗನ ದೃಷ್ಠಿ ತೆಗೆದ ಮಂಗಳ ಮುಖಿಯರಿಗೆ ಇಷ್ಟೊಂದು ದೊಡ್ಡ ಕಾಣಿಕೆಯೇ!

Posted By:
Subscribe to Filmibeat Kannada

ಮಂಗಳ ಮುಖಿಯರು ಮದುವೆಗೆ ಮತ್ತು ಮಗು ಜನಿಸಿದ ಮನೆಗೆ ಬಂದರೆ ಶುಭವಾಗುತ್ತದೆ ಎಂಬ ನಂಬಿಕೆ ಎಲ್ಲಾ ಕಡೆಯೂ ಇದೆ. ಅದರಲ್ಲೂ ಮಗು ಜನಿಸಿದ ಮನೆಗೆ ಹೋಗಿ ಆ ಮಗುವಿಗೆ ಶುಭಹಾರೈಸಿದಲ್ಲಿ ಯಾರಿಂದಲೂ ದೃಷ್ಟಿ ಆಗುವುದಿಲ್ಲ, ದುಷ್ಟರ ಕಣ್ಣು ಬೀಳುವುದಿಲ್ಲ ಎಂಬ ಮಾತು ಇದೆ.

ಸಾಮಾನ್ಯ ಜನರಂತೆ ಕರಿನಾ ಕಪೂರ್ ಸಹ ಮಂಗಳ ಮುಖಿಯರ ಬಗ್ಗೆ ಈ ವಿಷಯದಲ್ಲಿ ಅಗಾಧವಾದ ನಂಬಿಕೆ ಇಟ್ಟಿದ್ದಾರೆ. ಆದ್ದರಿಂದಲೇ ತಮ್ಮ ಮಗನ ದೃಷ್ಟಿ ತೆಗೆದ ಮಂಗಳ ಮುಖಿಯರಿಗೆ ದೊಡ್ಡ ಮೊತ್ತದ ಅಮೌಂಟ್ ಕೊಟ್ಟು ಎಲ್ಲರೂ ಬಾಯ ಮೇಲೆ ಬೆರಳಿಟ್ಟು ಕೊಳ್ಳುವಂತೆ ಮಾಡಿದ್ದಾರೆ ಕರಿನಾ. ಅಸಲಿ ಅವರು ಕೊಟ್ಟ ಅಮೌಂಟ್ ಎಷ್ಟು ಕೇಳಿದ್ರೆ ಎಲ್ಲರಿಗೂ ಆಶ್ಚರ್ಯವಾಗುವುದರಲ್ಲಿ ಡೌಟೇ ಇಲ್ಲ.

Kareena Kapoor Pays A HEFTY AMOUNT To Keep Taimur Ali Khan Protected From The Evil Eyes!

ಕರಿನಾ ಕಪೂರ್ ತಮ್ಮ ಮಗ ತೈಮೂರ್ ಅಲಿ ಖಾನ್ ದೃಷ್ಟಿ ತೆಗೆದ ಮಂಗಳ ಮುಖಿಯರಿಗೆ ಬರೋಬರಿ 51 ಸಾವಿರ ರೂಪಾಯಿಗಳನ್ನು ಕಾಣಿಕೆಯಾಗಿ ನೀಡಿದ್ದಾರೆ. ಈ ಬಗ್ಗೆ ಬಾಲಿವುಡ್ ಲೈಫ್ ವರದಿ ಮಾಡಿದೆ. ಆದ್ರೆ ತೈಮೂರ್ ದೃಷ್ಟಿ ತೆಗೆಯಲು ಇಷ್ಟು ದೊಡ್ಡ ಅಮೌಂಟ್ ನೀಡುವುದು ತೈಮೂರು ಪಾಪ್ಯುಲಾರಿಟಿಗೆ ಕಡಿಮೆಯೇ ಎಂದೇಳಬಹುದು. ಕಾರಣ ತೈಮೂರ್ ಜನಿಸಿದಾಗಿನಿಂದ ಹಿಡಿದು ಇದುವರೆಗೂ ಆತನ ಎಷ್ಟು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಆಗಿವೆ ಎಂಬುದು ತಾಯಿ ಕರಿನಾ ಕಪೂರ್ ಗೂ ಸಹ ತಿಳಿದಿಲ್ಲ.

Kareena Kapoor Pays A HEFTY AMOUNT To Keep Taimur Ali Khan Protected From The Evil Eyes!
English summary
Bollywood Actress Kareena Kapoor Khan Pays A HEFTY AMOUNT To Keep Taimur Ali Khan Protected From The Evil Eyes!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada