For Quick Alerts
  ALLOW NOTIFICATIONS  
  For Daily Alerts

  ವಿಡಿಯೋ: ಫೋಟೊ ಕೇಳಿದ ಅಭಿಮಾನಿಯೊಂದಿಗೆ ಹೀಗಾ ನಡೆದುಕೊಳ್ಳೋದು ಕರೀನಾ?

  |

  ಅಭಿಮಾನಿಗಳಿಗೆ ದೇವರು ಪಟ್ಟ ಕೊಟ್ಟಿದ್ದರು ಡಾ.ರಾಜ್‌ಕುಮಾರ್. ಕನ್ನಡದ ಸ್ಟಾರ್ ನಟ-ನಟಿಯರು ಈಗಲೂ ಅಭಿಮಾನಿಗಳಿಗೆ ಅದೇ ಪಟ್ಟವನ್ನು ನೀಡಿದ್ದಾರೆ, ಅಭಿಮಾನಿಗಳನ್ನು ಗೌರವಿಸುತ್ತಾರೆ, ಪ್ರೀತಿಸುತ್ತಾರೆ. ಆದರೆ ಎಲ್ಲಾ ಸಿನಿ ಉದ್ಯಮದಲ್ಲೂ ಇದೇ ಪರಿಸ್ಥಿತಿ ಇಲ್ಲ.

  ಸಿಎಂ ಬಳಿ ಯಶ್ ಇಟ್ಟ ವಿಶೇಷ ಬೇಡಿಕೆ ಏನು ? | Yash | Yediyurappa | Film Festival

  ಬಾಲಿವುಡ್‌ನಲ್ಲಿ ಅಭಿಮಾನಿಗಳು ಮತ್ತು ಸ್ಟಾರ್ ಗಳ ನಡುವೆ ದಕ್ಷಿಣ ಭಾರತದ ಸಿನಿ ಉದ್ಯಮದಲ್ಲಿರುವಂತೆ ಉತ್ತಮ ಬಾಂಧವ್ಯವಿಲ್ಲ. ಬಾಲಿವುಡ್ ಸ್ಟಾರ್‌ಗಳು ಸಹ ತಮ್ಮ ಅಭಿಮಾನಿಗಳೊಂದಿಗೆ ಆಗಾಗ್ಗೆ ಕಿರಿಕ್ ಮಾಡಿಕೊಳ್ಳುವುದು ಸುದ್ದಿಯಾಗುತ್ತಲೇ ಇರುತ್ತದೆ. ಇದಕ್ಕೆ ಹೊಸ ಸೇರ್ಪಡೆ ನಟ ಕರೀನಾ ಕಪೂರ್ ಕಿರಿಕ್.

  ಸ್ಟಾರ್ ಬಾಲಿವುಡ್ ನಟಿ ಕರೀನಾ ಕಪೂರ್ ಮೊದಲಿನಿಂದಲೂ ಸ್ವಲ್ಪ 'ಅಹಂಕಾರದ ನಟಿ' ಎಂದೇ ಖ್ಯಾತರು. ಸೈಫ್ ಅಲಿ ಖಾನ್ ರನ್ನು ಮದುವೆಯಾಗಿ ನವಾಬ್ ಕುಟುಂಬ ಸೇರಿದ ಮೇಲಂತೂ ಆಟಿಟ್ಯೂಡ್ ಸ್ವಲ್ಪ ಹೆಚ್ಚಾದಂತೆ ಕಾಣುತ್ತಿದೆ. ಹೋಳಿ ಹಬ್ಬದ ದಿನ ನಡೆದಿರುವ ಘಟನೆ ಇದಕ್ಕೆ ಉದಾಹರಣೆ.

  ಹೋಳಿ ಹಬ್ಬದ ದಿನ ನಡೆದ ಘಟನೆ

  ಹೋಳಿ ಹಬ್ಬದ ದಿನ ನಡೆದ ಘಟನೆ

  ಹೋಳಿ ಹಬ್ಬದ ದಿನ ಮಗ ತೈಮೂರ್‌ ನೊಂದಿಗೆ ಹೊರಗೆ ಹೋಗಿ ಕರೀನಾ ಕಪೂರ್ ವಾಪಸ್ಸಾಗುತ್ತಿದ್ದಾಗ ಇಬ್ಬರು ಯುವತಿಯರು ಕರೀನಾ ಅವರಿಗೆ ಹೋಳಿಯ ಶುಭಾಶಯ ತಿಳಿಸಿದ್ದಾರೆ. ಅವರತ್ತ ಕಣ್ಣೆತ್ತಿ ಸಹ ನೋಡದ ಕರೀನಾ ಸುಮ್ಮನೆ ಹಾಗೆ ಹೋಗಿದ್ದಾರೆ.

  ವಿನಯದಿಂದಲೇ ಚಿತ್ರಕ್ಕಾಗಿ ಕೇಳಿಕೊಂಡ ಅಭಿಮಾನಿ

  ಸ್ಟಾರ್ ನಟಿಯೊಂದಿಗೆ ಚಿತ್ರ ತೆಗೆಸಿಕೊಳ್ಳಬೇಕೆಂಬ ಹಂಬಲದಿಂದ ವಿನಯದಿಂದಲೇ ಕರಿನಾ ಕಪೂರ್ ಅವರನ್ನು ಚಿತ್ರಕ್ಕಾಗಿ ಕೇಳಿಕೊಂಡಿದ್ದಾರೆ. ಚಿತ್ರಕ್ಕೆ ನಿಲ್ಲುವ ಮೊದಲು ಯುವತಿಯೊಂದಿಗೆ ಸಿಟ್ಟಿನಲ್ಲಿ ಮಾತನಾಡಿ ಚಿತ್ರಕ್ಕಾಗಿ ನಿಂತ ಕರೀನಾ, ಒಂದು ಸಣ್ಣ ಮುಗುಳ್ನಗೆಯನ್ನೂ ನೀಡದೆ, ಎರಡೇ ಸೆಕೆಂಡ್‌ನಲ್ಲಿ ಅಲ್ಲಿಂದ ಹೊರಟುಹೋಗಿದ್ದಾರೆ.

  ಭಾರಿ ವೈರಲ್ ಆಗಿರುವ ವಿಡಿಯೋ

  ಭಾರಿ ವೈರಲ್ ಆಗಿರುವ ವಿಡಿಯೋ

  ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಕರೀನಾ ಕಪೂರ್‌ ರ ಈ ವರ್ತನೆ ಬಗ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕರೀನಾ ಕಪೂರ್‌ ಗೆ ಆಟಿಟ್ಯೂಡ್ ಹೆಚ್ಚಾಗಿದೆ. ನವಾಬ್ ಕುಟುಂಬದ ಅಹಂಕಾರ ಕರೀನಾ ಗೂ ಸೋಕಿದೆ ಎಂದು ಮೂದಲಿಸಿದ್ದಾರೆ.

  ಅಭಿಮಾನಿ ಮೇಲೆ ಹಲ್ಲೆ ಮಾಡಿದ್ದ ಸೈಫ್ ಅಲಿ ಖಾನ್

  ಅಭಿಮಾನಿ ಮೇಲೆ ಹಲ್ಲೆ ಮಾಡಿದ್ದ ಸೈಫ್ ಅಲಿ ಖಾನ್

  ಕರೀನಾ ಕಪೂರ್ ಪತಿ ಸೈಫ್ ಅಲಿ ಖಾನ್ ಸಹ ಅಭಿಮಾನಿಗಳೊಂದಿಗೆ ಜಗಳ ಮಾಡಿ ಸುದ್ದಿಯಾಗಿದ್ದರು. ಸ್ಟಾರ್ ಹೊಟೆಲ್ ಒಂದರಲ್ಲಿ ಅಭಿಮಾನಿ ಮೇಲೆ ಸೈಫ್ ಹಲ್ಲೆ ಮಾಡಿದ್ದು ಭಾರಿ ಸುದ್ದಿಯಾಗಿತ್ತು.

  English summary
  A video of Kareena Kapoor behaving rudely with lady fan went viral. Kareena talks rudely and did not gave photo to fan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X