»   » ಸೈಫ್, ಸಲ್ಲೂ ಹೋಲಿಕೆಗೆ ಕಂಗಾಲಾದ ಕರೀನಾ!

ಸೈಫ್, ಸಲ್ಲೂ ಹೋಲಿಕೆಗೆ ಕಂಗಾಲಾದ ಕರೀನಾ!

Posted By:
Subscribe to Filmibeat Kannada

ಬಾಲಿವುಡ್ ಬೆಡಗಿ ಕರೀನಾ ಕಪೂರ್ ಭಾರಿ ಬುದ್ಧಿವಂತೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ಬಗ್ಗೆ ನಟಿ ಕರೀನಾ ಕಪೂರ್ ಹೇಳಿದ ಮಾತು ಅದಕ್ಕೆ ಸಾಕ್ಷಿ. ಸಂದರ್ಶನಕಾರರು ಕರೀನಾಗೆ 'ಏಜೆಂಟ್ ವಿನೋದ್' ಹಾಗೂ 'ಏಕ್ ಥಾ ಟೈಗರ್' ಚಿತ್ರದ ಹೋಲಿಕೆ ಮಾಡಿ ಪ್ರಶ್ನೆ ಕೇಳಿದ್ದರು. ಅದಕ್ಕೆ ಕರೀನಾ ಕೊಟ್ಟ ಉತ್ತರ ಮಾರ್ಮಿಕವಾಗಿದೆ.

"ಸಲ್ಮಾನ್ ಖಾನ್ 'ಏಕ್ ಥಾ ಟೈಗರ್' ಚಿತ್ರ ಬಾಲಿವುಡ್ ನಲ್ಲಿ ಹೊಸ ದಾಖಲೆ ಬರೆದಿರುವುದು ನನಗೆ ಅತೀವ ಸಂತೋಷವನ್ನು ಉಂಟುಮಾಡಿದೆ. ಸಲ್ಮಾನ್ ಖಾನ್ ನಿಜವಾಗಿಯೂ ಬಾಲಿವುಡ್ ಸೂಪರ್ ಸ್ಟಾರ್ ಹಾಗೂ ಟೈಗರ್. ಆದರೆ ಸೈಫ್ ಅಲಿ ಖಾನ್ ಅಭಿನಯದ 'ಏಜೆಂಟ್ ವಿನೋದ್' ಹಾಗೂ ಸಲ್ಲೂರ 'ಏಕ್ ಥಾ ಟೈಗರ್' ಚಿತ್ರಗಳನ್ನು ಹೋಲಿಕೆ ಮಾಡುವುದು ಸರಿಯಲ್ಲ.

ಮುಂದುವರಿದ ಕರೀನಾ, "ಸಲ್ಮಾನ್ ಖಾನ್ ತಂಬಾ ಗ್ರೇಟ್. ಅವರು 'ಏಕ್ ಥಾ ಟೈಗರ್' ಚಿತ್ರದಲ್ಲಿ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ. ಆದರೆ ಸೈಫ್ ಅಲಿ ಖಾನ್ 'ಏಜೆಂಟ್ ವಿನೋದ್' ಚಿತ್ರವನ್ನು ಹೃದಯದಾಳದಿಂದ, ಬಹು ಪ್ರೀತಿಯಿಂದ ಮಾಡಿದ್ದಾರೆ. ಹೀಗಾಗಿ ಎರಡೂ ಚಿತ್ರಗಳನ್ನು ಹೋಲಿಸುವ ಉಸಾಬರಿಗೆ ನಾನಾಗಲೀ ನನ್ನ ಗೆಳೆಯ ಸೈಫ್ ಆಗಲೀ ಹೋಗುವುದಿಲ್ಲ. ನಾವಿಬ್ಬರೂ ಸಲ್ಲೂ ನಮ್ಮಿಂದ ಬೇರೆ ಎಂದು ಯೋಚಿಸುವುದೇ ಇಲ್ಲ" ಎಂದಿದ್ದಾರೆ.

ಎಲ್ಲರಿಗೂ ತಿಳಿದಿರುವಂತೆ ಸೈಫ್ ಅಲಿ ಖಾನ್ ಅವರ 'ಏಜೆಂಟ್ ವಿನೋದ್' ಚಿತ್ರ ಹಾಗೂ ಸಲ್ಮಾನ್ ಖಾನ್ ಅವರ 'ಏಕ್ ಥಾ ಟೈಗರ್' ಚಿತ್ರ ಎರಡೂ ಕೂಡ 'ಐಎಸ್ಐ' ಸಬ್ಜೆಕ್ಟ್ ಗೆ ಸಂಬಂಧಿಸಿದ್ದು. ಆದರೆ 'ಏಕ್ ಥಾ ಟೈಗರ್' ಬಾಕ್ಸ್ ಆಫೀಸ್ ನಲ್ಲಿ ಹೊಸ ದಾಖಲೆ ಬರೆದರೆ 'ಏಜೆಂಟ್ ವಿನೋದ್' ಗಳಿಕೆಯಲ್ಲಿ ಅಷ್ಟೊಂದು ಸದ್ದು ಮಾಡಲಿಲ್ಲ. ಹೀಗಾಗಿ ಸಂದರ್ಶನಕಾರರು ಸಹಜವಾಗಿ ಈ ಎರಡು ಚಿತ್ರಗಳನ್ನು ಹೋಲಿಕೆ ಮಾಡಿದ್ದಾರೆ.

ಕರೀನಾಗೆ ತನ್ನ ಬಾಯ್ ಫ್ರೆಂಡ್ ಸೈಫ್ ರನ್ನು ಸಲ್ಮಾನ್ ಖಾನ್ ಜೊತೆ ಹೋಲಿಸಿದ್ದು ಸರಿಹೋಗಲಿಲ್ಲ. ಆದರೆ ಬುದ್ಧಿವಂತಿಕೆ ಬಳಸಿ ತೂರಿಬಂದ ಪ್ರಶ್ನೆಗೆ ಉತ್ತರಿಸಿ ಬಚಾವ್ ಆಗಿದ್ದಾರೆ. ಎಷ್ಟೆಂದರೂ ಕರೀನಾ ಕಪೂರ್ ಮಹಾ ಬುದ್ಧಿವಂತೆ ಅಲ್ಲವೇ? ಅಷ್ಟಿಲ್ಲದೇ ಬಾಲಿವುಡ್ ಸಾಗರದಲ್ಲಿ 'ನಂ 1' ನಾಯಕಿಯರ ಸಾಲಿನಲ್ಲಿ ಕುಳಿತಿರಲು ಸಾಧ್ಯವೇ ಹೇಳಿ? ಒಟ್ಟಿನಲ್ಲಿ ಕರೀನಾ ಬುದ್ಧಿವಂತಿಕೆ ಮೀರಿಯೂ ಯೋಚಿಸುವವರಿಗೆ ಏನೇ ಆಗಲೀ, ಕರೀನಾ ಸೈಫ್ ರನ್ನು ಬಿಟ್ಟುಕೊಡುವುದಿಲ್ಲ ಎಂಬುದು ತಿಳಿಯದೇ ಇರುವುದಿಲ್ಲ. (ಏಜೆನ್ಸೀಸ್)

English summary
Kareena Kapoor says that Ek Tha Tiger has done good business at the box-office. But at the same time it is unfair to compare Ek Tha Tiger with A gent Vinod.
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada