For Quick Alerts
  ALLOW NOTIFICATIONS  
  For Daily Alerts

  ಹಳೆ ಬಾಯ್‌ಫ್ರೆಂಡ್ ಜೊತೆಗಿನ ಚಿತ್ರ ಹಂಚಿಕೊಂಡ ಕರೀನಾ ಕಪೂರ್

  |

  ಇದೇ ಅಕ್ಟೋಬರ್ 16 ಕ್ಕೆ ನಟಿ ಕರೀನಾ ಕಪೂರ್, ನಟ ಸೈಫ್ ಅಲಿ ಖಾನ್ ಜೊತೆಗೆ ವಿವಾಹವಾಗಿ ಎಂಟು ವರ್ಷವಾಯಿತು. ಒಬ್ಬ ಮುದ್ದಾದ ಮಗುವನ್ನು ಹೊಂದಿರುವ ಈ ಜೋಡಿ, ಈಗ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದ್ದಾರೆ.

  ಕರೀನಾ ಸಿನಿಮಾ ರಂಗಕ್ಕೆ ಕಾಲಿಟ್ಟ ಕೆಲವು ವರ್ಷಗಳಲ್ಲಿಯೇ ನಟ ಶಾಹಿದ್ ಕಪೂರ್ ಜೊತೆಗೆ ಹೆಸರು ಕೇಳಿಬಂದಿತ್ತು, ಇಬ್ಬರ ಪ್ರೀತಿ ಕುರಿತ ಚರ್ಚೆಗಳು ಬಾಲಿವುಡ್ ತುಂಬೆಲ್ಲಾ ಹರಡಿದ್ದವು.

  ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ದಂಪತಿಗೆ ಮದುವೆ ವಾರ್ಷಿಕೋತ್ಸವದ ಸಂಭ್ರಮಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ದಂಪತಿಗೆ ಮದುವೆ ವಾರ್ಷಿಕೋತ್ಸವದ ಸಂಭ್ರಮ

  ಇಬ್ಬರೂ ತಮ್ಮ ವೃತ್ತಿ ರಂಗದಲ್ಲಿ ಉನ್ನತದಲ್ಲಿದ್ದಾಗ ಪ್ರೀತಿಯಲ್ಲಿ ಬಿದ್ದಿದ್ದರು. ಹಲವು ವರ್ಷಗಳ ಕಾಲ ಇಬ್ಬರೂ ಜೊತೆಯಾಗಿದ್ದರು, ತಮ್ಮ ಪ್ರೀತಿಯನ್ನು ತೀರಾ ಬಚ್ಚಿಟ್ಟುಕೊಳ್ಳುವ ಗೋಚಿಗೂ ಹೋಗಿರಲಿಲ್ಲ. ಆದರೆ ಏನಾಯಿತೋ ಏನೊ ಇಬ್ಬರು ಪರಸ್ಪರ ದೂರಾದರು. ಆದರೆ ಈಗ ಇದ್ದಕ್ಕಿದ್ದಂತೆ ಹಳೆ ಬಾಯ್‌ಫ್ರೆಂಡ್ ಶಾಹಿದ್ ಜೊತೆಗಿರುವ ಚಿತ್ರವನ್ನು ಇನ್‌ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ ನಟಿ ಕರೀನಾ.

  ಕರೀನಾ-ಶಾಹಿದ್ ಒಟ್ಟಿಗೆ ಇರುವ ಚಿತ್ರ

  ಕರೀನಾ-ಶಾಹಿದ್ ಒಟ್ಟಿಗೆ ಇರುವ ಚಿತ್ರ

  ಕರೀನಾ ಕಪೂರ್, ಶಾಹಿದ್ ಕಪೂರ್ ಒಟ್ಟಿಗೆ ಇರುವ ಚಿತ್ರವೊಂದನ್ನು ಕರೀನಾ ಇನ್‌ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ನಿರ್ದೇಶಕ ಇಮ್ತಿಯಾಜ್ ಅಲಿ ಸಹ ಇದ್ದಾರೆ. ಕರೀನಾ ತಮ್ಮ ಹಳೆ ಬಾಯ್‌ಫ್ರೆಂಡ್ ಜೊತೆಗಿನ ಚಿತ್ರ ಹಂಚಿಕೊಂಡಿರುವುದು ಸಾಕಷ್ಟು ಚರ್ಚೆಯಾಗುತ್ತಿದೆ.

  ಜಬ್ ವಿ ಮೆಟ್ ಸಿನಿಮಾ ತೆರೆಕಂಡು 13 ವರ್ಷ

  ಜಬ್ ವಿ ಮೆಟ್ ಸಿನಿಮಾ ತೆರೆಕಂಡು 13 ವರ್ಷ

  ಶಾಹಿದ್ ಹಾಗೂ ಕರೀನಾ ಒಟ್ಟಿಗೆ ಅಭಿನಯಿಸಿದ್ದ 'ಜಬ್ ವಿ ಮೆಟ್' ಸಿನಿಮಾ ತೆರೆಕಂಡು 13 ವರ್ಷವಾದ ಸವಿ ನೆನಪಿಗೆ ಈ ಚಿತ್ರ ಹಂಚಿಕೊಂಡಿದ್ದಾರೆ ಕರೀನಾ. ಜೊತೆಗೆ 'ಜೀವನದಲ್ಲಿ ನೀವು ಏನನ್ನು ನಿಜವಾಗಿ ಬಯಸಿತ್ತೀರೋ ಅದು ನಿಮಗೆ ಸಿಕ್ಕೇ ಸಿಗುತ್ತದೆ' ಎಂದು ಬರೆದುಕೊಂಡಿದ್ದಾರೆ ಕರೀನಾ.

  ಕೊರೊನಾ, ಪ್ರೆಗ್ನೆನ್ಸಿ ಮತ್ತು ಭಯದ ನಡುವೆ ಚಿತ್ರೀಕರಣ ಮಾಡಬೇಕಿತ್ತು: ಕರೀನಾ ಕಪೂರ್ಕೊರೊನಾ, ಪ್ರೆಗ್ನೆನ್ಸಿ ಮತ್ತು ಭಯದ ನಡುವೆ ಚಿತ್ರೀಕರಣ ಮಾಡಬೇಕಿತ್ತು: ಕರೀನಾ ಕಪೂರ್

  ಶಾಹಿದ್ ಚಿತ್ರ ಹಂಚಿಕೊಂಡಿದ್ದಕ್ಕೆ ಮೆಚ್ಚುಗೆ

  ಶಾಹಿದ್ ಚಿತ್ರ ಹಂಚಿಕೊಂಡಿದ್ದಕ್ಕೆ ಮೆಚ್ಚುಗೆ

  ಕರೀನಾ, ಶಾಹಿದ್ ಜೊತೆಗಿನ ಚಿತ್ರ ಹಂಚಿಕೊಂಡಿದ್ದಕ್ಕೆ ನೆಟ್ಟಿಗರಂತೂ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಶಾಹಿದ್ ಕಪೂರ್ ಅನ್ನು ಟ್ಯಾಗ್ ಮಾಡಿದ್ದಕ್ಕೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ. ಕೆಲವರು, 'ನೀವಿಬ್ಬರು ಮತ್ತೆ ಒಟ್ಟಿಗೆ ಸಿನಿಮಾ ಮಾಡಿ' ಎಂದೂ ಸಹ ಹೇಳಿದ್ದಾರೆ.

  Shashi Kumar ಮಗನಿಗೆ ಸಾಥ್ ಕೊಟ್ಟ ಉಪೇಂದ್ರ | Filmibeat Kannada
  ಪರಸ್ಪರ ಅಂತರ ಕಾಯ್ದುಕೊಂಡಿದ್ದ ಜೋಡಿ

  ಪರಸ್ಪರ ಅಂತರ ಕಾಯ್ದುಕೊಂಡಿದ್ದ ಜೋಡಿ

  ಆದ ನಂತರ ಕೇವಲ ಒಂದು ಸಿನಿಮಾದಲ್ಲಿ ಮಾತ್ರ (ಉಡ್ತಾ ಪಂಜಾಬ್) ಇಬ್ಬರೂ ಒಟ್ಟಿಗೆ ನಟಿಸಿದ್ದರು. ಅದರಲ್ಲೂ ಸಹ ಇಬ್ಬರದ್ದು ಒಟ್ಟಿಗೆ ಒಂದು ಸೀನ್ ಸಹ ಇರಲಿಲ್ಲ. ಪ್ರಚಾರ ಕಾರ್ಯಕ್ರಮಗಳಲ್ಲಿ ಸಹ ಅವರು ಮಾತನಾಡದೆ ಅಂತರ ಕಾಯ್ದುಕೊಂಡಿದ್ದರು.

  IPLನಲ್ಲಿ ಅವಕಾಶ ಇದ್ಯಾ?: ಬ್ಯಾಟ್ ಹಿಡಿದು ಫೀಲ್ಡ್ ಗೆ ಇಳಿದ ನಟಿ ಕರೀನಾ ಪುತ್ರIPLನಲ್ಲಿ ಅವಕಾಶ ಇದ್ಯಾ?: ಬ್ಯಾಟ್ ಹಿಡಿದು ಫೀಲ್ಡ್ ಗೆ ಇಳಿದ ನಟಿ ಕರೀನಾ ಪುತ್ರ

  English summary
  Actress Kareena Kapoor shares her ex boyfriend Shahid Kapoor's photo on Instagram. Netizen praised the actress.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X