For Quick Alerts
  ALLOW NOTIFICATIONS  
  For Daily Alerts

  ಹೃತಿಕ್ ಗಾಗಿ ಸಿಕ್ಸ್ ಪ್ಯಾಕ್ ನಲ್ಲಿ ಬೆಬೋ

  By ಜೇಮ್ಸ್ ಮಾರ್ಟಿನ್
  |

  'ಜೀರೋ ಫಿಗರ್' ಎಂದ ಕೂಡಲೇ ಎಲ್ಲರ ಕಣ್ಣು ಕರೀನಾ ಕಪೂರ್ ಕಡೆ ತಿರುಗುತ್ತದೆ. ಹಿಂದಿ ಚಿತ್ರರಂಗವೇ ತನ್ನತ್ತ ತಿರುಗಿ ನೋಡುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದ ಕಪೂರ್ ಖಾನ್ ದಾನ್ ಹುಡುಗಿ ಈಗ ಮತ್ತೊಂದು ಸಾಹಸಕ್ಕೆ ಮೈಯೊಡ್ದುತ್ತಿದ್ದಾಳೆ.

  ಜೀರೋ ಫಿಗರ್, ಪರ್ಫೆಕ್ಟ್ ಬಿಕಿನಿ ಬಾಡಿ ಎಂದೆಲ್ಲಾ ಹೊಗಳಿಕೆ ಗಳಿಸಿದ್ದ ಕರೀನಾ ಈಗ ಮತ್ತೊಮ್ಮೆ ದೇಹ ದಂಡನೆಗೆ ಮುಂದಾಗಿದ್ದಾರೆ. ಕರಣ ಮಲ್ಹೋತ್ರ ಅವರ ಚಿತ್ರದಲ್ಲಿ ಹೃತಿಕ್ ರೋಷನ್ ಅವರ ಜತೆ ನಟಿಸಲಿರುವ ಬೆಬೋ ಸಿಕ್ಸ್ ಪ್ಯಾಕ್ ಅಬ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಯಿದೆ.

  ಹೃತಿಕ್ ರೋಷನ್ ಅವರ ಜತೆ ನಟಿಸಿರುವ 'ಶುದ್ಧಿ' ಚಿತ್ರಕ್ಕಾಗಿ ಕರೀನಾ ನಡೆಸಿರುವ ತಯಾರಿ ಕಂಡು ಪತಿ ಸೈಫ್ ಕೂಡಾ ಅವಕ್ಕಾಗಿದ್ದಾರಂತೆ. ಜೀರೋ ಫಿಗರ್ ಗಾಗಿ ಮಾಡಿದ ಡಯಟ್ ಗಿಂತ ಕಠಿಣಾತಿಕಠಿಣ ಆಹಾರ ಪದ್ಧತಿಯನ್ನು ಕರೀನಾ ಅಳವಡಿಸಿಕೊಂಡಿದ್ದಾರಂತೆ.

  ತಶಾನ್ ಚಿತ್ರದಲ್ಲಿ ಕರೀನಾ ತನ್ನ ಮೈಮಾಟ ಪ್ರದರ್ಶಿಸಿ ಜೀರೋ ಫಿಗರ್ ಎಂದರೇನು ಎಂಬುದನ್ನು ಅಭಿಮಾನಿಗಳಿಗೆ ತೋರಿಸಿದ್ದರು. ಸಿಕ್ಸ್ ಪ್ಯಾಕ್ ಅಬ್ ಬೆಳೆಸುವುದು ಪುರುಷರಿಗೆ ಕಷ್ಟ ಎನಿಸುತ್ತದೆ ಆದರೆ, ಕರೀನಾ ನಾನೇನು ಕಮ್ಮಿಯಿಲ್ಲ ಎಂಬುದನ್ನು ತೋರಿಸಲು ಸಿದ್ಧತೆ ನಡೆಸಿದ್ದಾರಂತೆ.

  ಸದ್ಯಕ್ಕೆ ಕರೀನಾ ಕಪೂರ್ ಅವರು ಗೋರಿ ತೇರಾ ಪ್ಯಾರ್ ಮೇ ಚಿತ್ರದ ಶೂಟಿಂಗ್ ನಲ್ಲಿ ನಿರತರಾಗಿದ್ದಾರೆ. ಈ ಚಿತ್ರದ ಪ್ರಚಾರ ಕಾರ್ಯ ನವೆಂಬರ್ ತಿಂಗಳಿನಲ್ಲಿ ನಡೆಯಲಿದೆ. ಇದಾರ ಮೇಲೆ ಕರೀನಾ ಜಿಮ್ ನಲ್ಲಿ ಬೆವರು ಹರಿಸಲಿದ್ದಾರೆ ಎನ್ನಲಾಗಿದೆ.

  ಶುದ್ಧಿ ಚಿತ್ರದಲ್ಲಿ ಪಾತ್ರಕ್ಕೆ ಸಿಕ್ಸ್ ಪ್ಯಾಕ್ ಅಬ್ ಇರುವ ಪಾತ್ರಧಾರಿ ಅವಶ್ಯವಿದೆ. ಇದಕ್ಕಾಗಿ ನಾನು ತಯಾರಿ ನಡೆಸುತ್ತಿದ್ದೇನೆ ಎಂದು ಕರೀನಾ ಹೇಳಿಕೊಂಡಿದ್ದಾರೆ. ಶುದ್ಧಿ ಚಿತ್ರದ ಶೂಟಿಂಗ್ ಡಿಸೆಂಬರ್ ನಲ್ಲಿ ಆರಂಭವಾಗಲಿದೆ.

  ಸಾಹಕ ಕಲೆ ಪ್ರದರ್ಶನದ ದೃಶ್ಯಗಳನ್ನು ಶುದ್ಧಿ ಚಿತ್ರ ಹೊಂದಿದ್ದು, ಹೃತಿಕ್ ರೋಷನ್ ಅವರಿಗೆ ಪೈಪೋಟಿ ನೀಡುವಂತೆ ಸಾಹಸ ಪ್ರದರ್ಶಿಸಲು ಕರೀನಾ ಸಿದ್ಧತೆ ನಡೆಸಿದ್ದಾರಂತೆ. ಸಿಕ್ಸ್ ಪ್ಯಾಕ್ ಅಬ್ಸ್ ಬೆಳೆಸಲಿರುವ ಕರೀನಾ ಅವರಿಗೆ ಅಭಿಮಾನಿಗಳು ಶುಭ ಹಾರೈಸಿದ್ದು, ಕರೀನಾರನ್ನು ಹೊಸ ಅವತಾರದಲ್ಲಿ ಕಾಣಲು ಕಾತುರರಾಗಿದ್ದಾರೆ.

  English summary
  Bollywood actress Kareena Kapoor had once set the size zero trend in the town and now she is up for a new challenge. Kareena will be sporting six-pack abs for her upcoming film titled Shuddhi. This movie which is being made by Karan Malhotra also stars Hrithik Roshan in the lead role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X