For Quick Alerts
  ALLOW NOTIFICATIONS  
  For Daily Alerts

  ಪ್ರೆಸ್ ಮೀಟ್ ನಲ್ಲಿ ಕರೀನಾ ಕಪೂರ್ ಭಾರಿ ಗರಮ್

  |

  'ಲೇಡಿ ಸೂಪರ್ ಸ್ಟಾರ್' ಅಂದಿದ್ದಕ್ಕೆ ಭಾರಿ 'ಗರಮ್' ಆದರಂತೆ ನಟಿ ಕರೀನಾ ಕಪೂರ್. ಇತ್ತೀಚಿಗೆ ಮೀಡಿಯಾದವರಿಗೇ ಪ್ರಶ್ನೆ ಕೇಳಿದ ಕರೀನಾ, "ನಿವ್ಯಾಕೆ ನನ್ನನ್ನು 'ಸೂಪರ್ ಸ್ಟಾರ್' ಅಂತ ಕರೆಯಬಾರದು" ಎಂಬ ಪ್ರಶ್ನೆ ಕೇಳಿ ಮಾಧ್ಯಮದವರನ್ನೇ ಕಂಗಾಲು ಮಾಡಿದ್ದಾರೆ. "ನಾಲ್ಕು ಸಿನಿಮಾಗಳು ಹಿಟ್ ಆದ್ರೆ ಸಾಕು, ಹೀರೋಗಳನ್ನು 'ಸೂಪರ್ ಸ್ಟಾರ್', 'ಆ ಸ್ಟಾರ್', 'ಈ ಸ್ಟಾರ್' ಅಂತ ಕರೆಯುತ್ತೀರಿ, ನಮ್ಮನ್ಯಾಕೆ ಕರೆಯೋದಿಲ್ಲ?"

  ಕರೀನಾ ಕೇಳಿದ ಪ್ರಶ್ನೆಯಲ್ಲಿ ನ್ಯಾಯ ಇದೆ ಎಂಬುದನ್ನು ಮನಗಂಡ ಪತ್ರಕರ್ತರು, ನಿಮ್ಮನ್ನು 'ಲೇಡಿ ಸೂಪರ್ ಸ್ಟಾರ್' ಎಂದು ಕರೆಯಲೇ ಎಂದು ಕೇಳಿದರಂತೆ. ಈ ಪ್ರಶ್ನೆಯಿಂದ ಕೆಂಡಾಮಂಡಲವಾದ ಕರೀನಾ, "ಅದ್ಯಾಕೆ ಹಾಗೆ ಕರೆಯುತ್ತೀರಿ? ಹಾಗೆ ಕರೆದರೆ ಹೀರೋಗಳ ಮುಂದೆ ನಮ್ಮ ಲೆವಲ್ ಕಡಿಮೆಯಾಗುತ್ತದೆ. ನಿಮಗೆ ಸೂಪರ್ ಸ್ಟಾರ್ ಅಂತ ಕರೆಯುವುದಕ್ಕೆ ಏನು ಸಮಸ್ಯೆ?" ಎಂದು ಕೂಗಾಡಿದರಂತೆ.

  ಸಾಕಷ್ಟು ಸೂಪರ್ ಹಿಟ್, ಹಿಟ್ ಚಿತ್ರಗಳನ್ನು ಕೊಡುತ್ತಿರುವ ಹೀರೋಯಿನ್ ಗಳನ್ನು ನೀವೇಕೆ ಕಡೆಗಣಿಸುತ್ತೀರಿ? ಬಾಕ್ಸ್ ಆಫೀಸ್ ನಲ್ಲಿ ನಾವೂ ಕೂಡ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ್ದೇವೆ. ಬಾಕ್ಸ್ ಆಫೀಸ್ ಬ್ರೇಕ್ ನಾವೂ ಕೂಡ ಮಾಡಿದ್ದೇವೆ. ಹೀಗಿರುವಾಗ ನಮ್ಮನ್ನು ಕಡೆಗಣಿಸುವುದೇಕೆ? ಕರೆದರೆ ನಮ್ಮನ್ನೂ ಸೂಪರ್ ಸ್ಟಾರ್ ಅಂತಲೇ ಕರೆಯಿರಿ, ಇಲ್ಲವಾದರೆ ಬೇಡ" ಎಂದು ಕಡ್ಡಿ ಮುರಿದಂತೆ ಹೇಳಿ ಸುಮ್ಮನಾದರಂತೆ ಕರೀನಾ.

  ಇಷ್ಟೇ ಅಲ್ಲ, ಹಾಟ್ ಬೆಡಗಿ, ಅಲ್ಲಲ್ಲ ಸೂಪರ್ ಸ್ಟಾರ್ ಕರೀನಾ ಪುಸ್ತಕವೊಂದನ್ನು ಬರೆಯುತ್ತಿದ್ದಾರಂತೆ. ಅದರಲ್ಲಿ ತಮ್ಮ ವೃತ್ತಿ ಜೀವನದ ಅನುಭವಗಳ ಜೊತೆಗೆ ತಮ್ಮ ಆಕರ್ಷಕ ಮೈಮಾಟ ಹಾಗೂ ಬ್ಯೂಟಿ ಸೀಕ್ರೆಟ್ ಗಳನ್ನು ತೆರೆದಿಡಲಿದ್ದಾರಂತೆ ಕರೀನಾ, ಒಟ್ಟಿನಲ್ಲಿ, ಕರೀನಾ ಸಾಕಷ್ಟು ಬದಲಾಗಿದ್ದಾರೆ ಅಥವಾ ಬದಲಾಗುತ್ತಿದ್ದಾರೆ. ಹೀರೋಯಿನ್ ಚಿತ್ರವೇನಾದರೂ ಸೂಪರ್ ಹಿಟ್ ದಾಖಲಿಸಿದರೆ ಕರೀನಾ ಸೂಪರ್ ಸ್ಟಾರ್ ಎಂದು ಹೇಳಲೇಬೇಕಾದೀತೋ ಏನೋ! (ಏಜೆನ್ಸೀಸ್)

  English summary
  Bollywood actress Kareena Kapoor told in a Mumbai Press Meet to call her 'Super Star'. She told it in an Engry Mood and even press persons are agreed to call her as Super Star and called as her wish. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X