For Quick Alerts
  ALLOW NOTIFICATIONS  
  For Daily Alerts

  ಕರೀನಾ ಕಪೂರ್ ಆತ್ಮರತಿ ಮಾಡಿಕೊಂಡಿದ್ದು ಯಾಕೆ?

  |

  ಹೀರೋಯಿನ್ ಚಿತ್ರದ ನಾಯಕಿ ಕರೀನಾ ಕಪೂರ್, ತಮ್ಮನ್ನೇ ತಾವು 'ಸೂಪರ್ ಸ್ಟಾರ್' ಎಂದು ಹೇಳಿಕೊಂಡಿದ್ದಾರೆ. ಬಹಳಷ್ಟು ನಟನಟಿಯರು ತಮ್ಮನ್ನು ತಾವು ಸೂಪರ್ ಸ್ಟಾರ್ ಎಂದೇ ಅಂದುಕೊಂಡಿರುತ್ತಾರೆ. ಆದರೆ ಬಹಿರಂಗವಾಗಿ ಹೇಳಿಕೊಳ್ಳುವುದಿಲ್ಲ. ಹೀಗಿರುವಾಗ, ಕರೀನಾ ಇಷ್ಟು ಬಹಿರಂಗವಾಗಿ ಹೇಳಿಕೊಂಡಿದ್ದರ ಹಿಂದೆ ಏನಿರಬಹುದು? ಕರೀನಾ ಕಪೂರ್ ತಮ್ಮನ್ನೇ ತಾವು ಹೊಗಳಿಕೊಂಡು 'ಆತ್ಮರತಿ' ಮಾಡಿಕೊಂಡಿದ್ದು ಯಾಕೆ?

  ಹೌದು, ಕರೀನಾ ಸೂಪರ್ ಸ್ಟಾರ್ ಅಂತೆ. ಕಾರಣ, ಇದೇ ತಿಂಗಳು ಸೆಪ್ಟೆಂಬರ್ 10ಕ್ಕೆ ಬಿಡುಗಡೆಯಾಗಲಿರುವ ಕರೀನಾ ಬಹುನಿರೀಕ್ಚಿತ 'ಹೀರೋಯಿನ್' ಚಿತ್ರದಲ್ಲಿ ಅವರು ಸೂಪರ್ ಸ್ಟಾರ್ ಪಾತ್ರ ಮಾಡಿದ್ದಾರಂತೆ. ಈ ಬಗ್ಗೆ ಸ್ವತಃ ಕರೀನಾ ಮಾಧ್ಯಮದ ಪ್ರಶ್ನೆಯೊಂದಕ್ಕೆ ನೀಡಿರುವ ಉತ್ತರದಲ್ಲಿ ಸ್ಪಷ್ಟಪಡಿಸಿದ್ದಾರೆ. ಅಂತೂ ಕೊನೆಗೂ ಸೂಪರ್ ಸ್ಟಾರ್ ಆಗುವ ಕರೀನಾ ಕನಸು ನನಸಾಗಿದೆ.

  "ನಾನೊಬ್ಬಳು ಸೂಪರ್ ಸ್ಟಾರ್. ಈ ಚಿತ್ರವು ಸೂಪರ್ ಸ್ಟಾರ್ ಒಬ್ಬರ ಜೀವನದ ಕಥೆ ಹೊಂದಿದೆ. ಇದರಲ್ಲಿರುವ ಮಾಯಿ ಹೆಸರು ನೆಪವಷ್ಟೇ. ಪ್ರೇಕ್ಷಕರು 'ಗೀತ್' ಎಂದೇ ಭಾವಿಸುವಂತಿದೆ ಆ ಪಾತ್ರ. ಅದೇನೆ ಇರಲಿ, ನಾನು ಈ ಪಾತ್ರದಲ್ಲಿ ಕೇವಲ ಪಾತ್ರವಾಗಿ ನಟಿಸಿಲ್ಲ. ಬದಲಿಗೆ ನಾನೇ ಪಾತ್ರವಾಗಿದ್ದೇನೆ" ಎಂದಿದ್ದಾರೆ ಕರೀನಾ. ಅಂದಹಾಗೆ, ಕರೀನಾಗೆ ಈ ಆಫರ್ ಬರುವುದಕ್ಕೆ ಮೊದಲು ಈ ಪಾತ್ರದಲ್ಲಿ ನಟಿಸಲು ಐಶ್ವರ್ಯಾ ರೈ ಆಯ್ಕೆಯಾಗಿದ್ದರು. ಅವರು ಆ ವೇಳೆ ಗರ್ಭಿಣಿಯಾಗಿದ್ದರಿಂದ ನಂತರ ಅದು ಕರೀನಾ ಪಾಲಾಯ್ತು.

  ಮುಂದುವರಿದ ಕರೀನಾ "ನಮ್ಮಮ್ಮನ ಗರ್ಭದಲ್ಲಿರುವಾಗಲೇ ಹಿರೋಯಿನ್ ಆಗಬೇಕೆಂದುಕೊಂಡಿದ್ದೆ, ಆಗಿದ್ದೇನೆ ಕೂಡ. 'ಹೀರೋಯಿನ್' ಹೆಸರಿನ ಚಿತ್ರದಲ್ಲಿ ನಾನು ನಾಯಕಿಯಾಗಿದ್ದು ಕಾಕತಾಳೀಯ ಎನಿಸಿದರೂ ಅದು ಸತ್ಯವಾಗಿಯೂ ನನ್ನ ಮನದ ಅಭಿಲಾಷೆಯಂತೆ ಜರುಗಿದೆ. ನಾನು ಕೆಲವೇ ಕೆಲವು ಪಾತ್ರಗಳನ್ನು ಮಾಡಲು ಈ ರಂಗಕ್ಕೆ ಬಂದಿದಲ್ಲ. 50, 60 ವರ್ಷಗಳಾದರೂ ನಾನು ಪಾತ್ರಗಳನ್ನು ಮಾಡುತ್ತಲೇ ಇರಲಿದ್ದೇನೆ" ಎಂದಿದ್ದಾರೆ ಕರೀನಾ. (ಏಜೆನ್ಸೀಸ್ )

  English summary
  Kareena Kapoor, who is playing the role of an actor in her upcoming film Heroine, says that the film is about a superstar life and she is a superstar.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X