For Quick Alerts
  ALLOW NOTIFICATIONS  
  For Daily Alerts

  ಇಸ್ಲಾಂ ಧರ್ಮಕ್ಕೆ ಕರೀನಾ ಕಪೂರ್ ಮತಾಂತರ?

  By Rajendra
  |

  ಬಾಲಿವುಡ್ ತಾರೆ ಕರೀನಾ ಕಪೂರ್ ಅವರು ಪಟೌಡಿ ಕುಟುಂಬದ ಬೇಗಂ ಆಗುತ್ತಿರುವುದು ಗೊತ್ತೇ ಇದೆ. ಚೋಟಾ ನವಾಬ್ ಎಂದೇ ಖ್ಯಾತನಾಗಿರುವ ಬಾಲಿವುಡ್ ನಟ ಸೈಫ್ ಆಲಿ ಖಾನ್ ಜೊತೆ ಕರೀನಾ ಮದುವೆ ಮುಂದಿನ ತಿಂಗಳು ಅಕ್ಟೋಬರ್ 17ರಂದು ನಡೆಯಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.

  ಆದರೆ ಈ ಬಗ್ಗೆ ಅತ್ತ ಸೈಫ್ ಆಗಲಿ ಇತ್ತ ಕರೀನಾ ಆಗಲಿ ಇಬ್ಬರೂ ಬಾಯಿಗೆ ಬೀಗ ಹಾಕಿಕೊಂಡು ಕೂತಿದ್ದಾರೆ. ಹಾಗಾಗಿ ಇವರಿಬ್ಬರ ಮದುವೆ ಬಗ್ಗೆ ಕೊಂಚ ಅನುಮಾನಗಳಿದ್ದರೂ ಖಂಡಿತ ಕಾಗೆಯಂತೂ ಹಾರಿಸಿಲ್ಲ ಎಂದು ಬಾಲಿವುಡ್ ನಂಬಿದೆ.

  ಮದುವೆ ಬಳಿಕ ಕರೀನಾ ಇಸ್ಲಾಂ ಧರ್ಮಕ್ಕೆ ಮತಾಂತರವಾಗುತ್ತಾರೆಯೇ? ಎಂಬ ಪ್ರಶ್ನೆಗೆ ಈಗ ಅಸ್ಪಷ್ಟವಾದ ಉತ್ತರ ಸಿಕ್ಕಿದೆ. ತನ್ನ ಮದುವೆ ಬಗ್ಗೆ ಪ್ರಸ್ತಾಪಿಸಿರುವ ಕರೀನಾ, ಮದುವೆ ಬಳಿಕ ತಮ್ಮ ಹೆಸರನ್ನು 'ಕರೀನಾ ಕಪೂರ್ ಖಾನ್' ಎಂದು ಬದಲಾಯಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.

  ಆದರೆ ಆಕೆಯ ಹೆಸರಿನ ಜೊತೆಗೆ 'ಖಾನ್' ಸೇರಿಸಿಕೊಳ್ಳುವುದು ಸೈಫ್‌ಗೆ ಇಷ್ಟವಿಲ್ಲವಂತೆ ಎಂದಿದ್ದಾರೆ. ಆದರೆ ಈ ಹಿಂದೆ ಕರೀನಾ ತಾನು ಮುಸ್ಲಿಂ ವರನ ಕೈಹಿಡಿಯುತ್ತಿದ್ದರೂ ಹಿಂದು ಧರ್ಮವನ್ನೇ ಪಾಲಿಸುತ್ತೇನೆ. ಯಾವುದೇ ಕಾರಣಕ್ಕೂ ಇಸ್ಲಾಂ ಧರ್ಮಕ್ಕೆ ಮತಾಂತರವಾಗಲ್ಲ ಎಂದಿದ್ದರು.

  ಆಕೆ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವುದು ಸ್ವತಃ ಸೈಫ್ ಆಲಿ ಖಾನ್‌ಗೂ ಇಷ್ಟವಿಲ್ಲವಂತೆ. ಆದರೆ ಈಗ ಆಕೆ ತನ್ನ ಹೆಸರಿನ ಜೊತೆಗೆ 'ಖಾನ್' ಸೇರಿಸಿಕೊಳ್ಳುತ್ತೇನೆ ಎಂದಿರುವುದು ಆಕೆ ಇಸ್ಲಾಂಗೆ ಮತಾಂತರಗೊಳ್ಳುತ್ತಿರುವ ಯಾವುದೇ ಅನುಮಾನಗಳಿಲ್ಲ ಎಂದು ಬಾಲಿವುಡ್ ಮಂದಿ ಅನುಮಾನ ವ್ಯಕ್ತಪಡಿಸಿದ್ದಾರೆ.

  ನಮ್ಮಿಬ್ಬರ ಧರ್ಮ ಯಾವುದೇ ಆಗಿರಲಿ ನಾವಿಬ್ಬರೂ ಇಷ್ಟಪಟ್ಟು ಒಬ್ಬರನ್ನೊಬ್ಬರು ವರಿಸುತ್ತಿದ್ದೇವೆ. ಧರ್ಮಗಳಲ್ಲಿ ನನಗೆ ನಂಬಿಕೆ ಇಲ್ಲ ಎಂದು ಸೈಫ್ ಈ ಹಿಂದೊಮ್ಮೆ ಹೇಳಿದ್ದರು. ಹಾಗಾಗಿ ಮದುವೆಯಾದರೂ ಕರೀನಾ ಹೆಸರಿನ ಜೊತೆ 'ಖಾನ್' ಹೆಸರು ಇದ್ದರೂ ಮತಾಂತರ ಇರಲ್ಲ ಎಂಬುದು ಇನ್ನೊಂದು ಸುದ್ದಿ.

  ವಿಶೇಷ ಅಂದರೆ ಸೈಫ್ ಅವರ ತಂದೆ ಹಾಗೂ ಕ್ರಿಕೆಟಿಗ ದಿವಂಗತ ಮನ್ಸೂರ್‌ ಅಲಿ ಖಾನ್‌ ಪಟೌಟಿ ಅವರನ್ನು ಸೈಫ್ ತಾಯಿ ಶರ್ಮಿಳಾ ಠಾಗೋರ್‌ ವರಿಸಿದ ಮೇಲೆ (1969) ಅವರು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದರು. ಬಳಿಕ ತಮ್ಮ ಹೆಸರನ್ನು ಆಯೇಷಾ ಬೇಗಂ ಆಗಿ ಬದಲಾಯಿಸಿಕೊಂಡಿದ್ದರು. (ಏಜೆನ್ಸೀಸ್)

  English summary
  Actress Kareena Kapoor talking to a leading daily, Bebo said that she will become Kareena Kapoor Khan after her marriage with Saif Ali Khan. Is she converted to Islam?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X