»   » ಟ್ರೋಲ್ ಆಗುತ್ತಿದೆ ಕರೀನಾ ಕಪೂರ್ ಫೋಟೋ: ಅಂತಹದ್ದೇನಿದೆ.?

ಟ್ರೋಲ್ ಆಗುತ್ತಿದೆ ಕರೀನಾ ಕಪೂರ್ ಫೋಟೋ: ಅಂತಹದ್ದೇನಿದೆ.?

Posted By:
Subscribe to Filmibeat Kannada

ಬಾಲಿವುಡ್ ನಟಿ ಕರೀನಾ ಕಪೂರ್ 37ನೇ ವಯಸ್ಸಿನಲ್ಲೂ 18ರ ತರುಣಿಯಂತೆ ಕಂಗೊಳಿಸುತ್ತಾರೆ. ಗಂಡು ಮಗುವಿಗೆ ಜನ್ಮ ನೀಡಿದ್ದ ಕರೀನಾ ಕಪೂರ್ ಫಿಟ್ನೆಸ್ ವಿಷ್ಯದಲ್ಲಿ ಸ್ವಲ್ಪ ಹಿಂದಿದ್ದರು. ನಂತರ ಕಮ್ ಬ್ಯಾಕ್ ಆದ ಕರೀನಾ ಮತ್ತೆ ಸೈಜ್ ಜೀರೋ ಆಗುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.

ಆದ್ರೀಗ, ತಮ್ಮ ಸೈಜ್ ಜೀರೋ ವಿಷ್ಯದಲ್ಲೇ ಕರೀನಾ ಟ್ರೋಲ್ ಆಗ್ತಿದ್ದಾರೆ. ಇತ್ತೀಚಿಗಷ್ಟೆ ಸಿಂಗಾಪೂರ್ ದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಮ್ಮ ನೆಚ್ಚಿನ ವಿನ್ಯಾಸಕಾರ ಮನೀಶ್ ಮಲ್ಹೋತ್ರ ಅವರೊಂದಿಗೆ Ramp Walk ಮಾಡಿದ್ದರು. ಅದಕ್ಕೂ ಮುಂಚೆ ವೇದಿಕೆ ಹಿಂದೆ ಸ್ನೇಹಿತೆ ಅಮೃತ ಆರೋರ ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

ಬೆಂಗಳೂರಿಗೆ ಬಂದಿದ್ದ ಕರೀನಾ ಕಪೂರ್ ಸ್ಯಾಂಡಲ್ ವುಡ್ ಗೆ ಕೊಟ್ರು ಸಿಹಿ ಸುದ್ದಿ

Kareena Kapoor Trolled For Looking Like A Skeleton

ಈ ಫೋಟೋಗೆ ಈಗ ನೆಟ್ಟಿಗರು ಟ್ರೋಲ್ ಮಾಡ್ತಿದ್ದಾರೆ. ಮದುವೆ ಆದ್ಮೇಲೂ ಬ್ಯೂಟಿ ಕ್ವೀನ್ ಎನಿಸಿಕೊಳ್ಳುತ್ತಿರುವ ಕರೀನಾ ಕಪೂರ್ ಹೊಸ ಫೋಟೋ ನೋಡಿ ''ಒಳ್ಳೆ ಅಸ್ಥಿಪಂಜರ ರೀತಿ ಕಾಣ್ತಿದ್ದೀರಾ. ದಯವಿಟ್ಟು ತಿನ್ನೋದಕ್ಕೆ ಶುರು ಮಾಡಿ'' ಎಂದು ಕಾಮೆಂಟ್ ಮಾಡ್ತಿದ್ದಾರೆ.

Kareena Kapoor Trolled For Looking Like A Skeleton

ಕರೀನಾ ಅವರ ಹೊಸ ಲುಕ್ ನೋಡಿ ಮತ್ತಷ್ಟು ಮಂದಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ''ಕರೀನಾಗೆ ಏನಾಯಿತು? ಅವರ ತಲೆಬುರುಡೆ ಕಾಣುತ್ತಿದೆ'' ಎಂದು ಹಾಸ್ಯ ಮಾಡುತ್ತಿದ್ದಾರೆ. ''ಅಮೃತ ಆರೋರ ಸೂಪರ್ ಆಗಿ ಕಾಣ್ತಿದ್ದಾರೆ. ಕರೀನಾಗೆ ವಯಸ್ಸಾಗಿದೆ'' ಎಂದು ಕೂಡ ಕಾಮೆಂಟ್ ಮಾಡಿದ್ದಾರೆ. ಆದ್ರೆ, ಅಮೃತಗೆ 40 ವರ್ಷ, ಕರೀನಾಗೆ 37 ವರ್ಷ.

ಇನ್ನು ಕಳೆದ ವರ್ಷ ವಿಡಿಯೋವೊಂದು ಪೋಸ್ಟ್ ಮಾಡಿದ್ದ ಕರೀನಾ ''ಫಿಟ್ನೆಸ್ ಗಾಗಿ ಜಿಮ್ ನಲ್ಲಿ ಕಸರತ್ತು ಮಾಡ್ತಿದ್ದ ವಿಡಿಯೋ ಹಾಕಿದ್ದರು. ಆಗ ಕರೀನಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಮಂದಿ ಈಗ ಕರೀನಾಳನ್ನ ನೋಡಿ ಕಾಲೆಳೆಯುತ್ತಿದ್ದಾರೆ. ಕಾರಣ ಈ ಫೋಟೋದಲ್ಲಿ ಕರೀನಾ ಅವರ ದೇಹದ ಮೂಳೆಗಳೆಲ್ಲವೂ ಕಾಣುತ್ತಿದೆ.

English summary
Bollywood actress Kareena Kapoor Trolled For Looking Like 'A Skeleton', Asked To Start Eating. Seems like Kareena Kapoor underwent some treatment to look skinny, read one of the comments.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X