Kareena-Saif: ಮಕ್ಕಳು ಸಾಕು, ಪತಿಗೆ ಎಚ್ಚರಿಕೆ ನೀಡಿದ ಕರೀನಾ!
ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಜೊಡಿಯಷ್ಟೇ ಅವರ ಮಕ್ಕಳು ಕೂಡ ಫೇಮಸ್. ತಮ್ಮ ಮಕ್ಕಳಿಗೆ ಸಾಕಷ್ಟು ಸಮಯವನ್ನು ನೀಡುವ ದಂಪತಿಗಳಲ್ಲಿ ಇವರೂ ಒಬ್ಬರು. ತಂದೆ-ತಾಯಿಯ ಜವಾಬ್ದಾರಿಯನ್ನು ಇಬ್ಬರೂ ಚೆನ್ನಾಗಿ ನಿಭಾಯಿಸುತ್ತಾರೆ ಎನ್ನುವ ಹೆಗ್ಗಳಿಕೆ ಪಾತ್ರವಾಗಿದೆ ಈ ಜೋಡಿ.
ಇತ್ತೀಚೆಗಿನ ಸಂದರ್ಶನವೊಂದರಲ್ಲಿ, ಕರೀನಾ ಪತಿ ಸೈಫ್ ಅಲಿ ಖಾನ್ ಬಗ್ಗೆ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸೈಫ್ ಅಲಿ ಖಾನ್ ಮತ್ತು ಮಕ್ಕಳನ್ನು ಕುರಿತು ಮಾತನಾಡಿದ್ದಾರೆ. ತನ್ನ 20ನೇ ವಯಸ್ಸಿನಿಂದ ಈಚೆಗೆ ಪ್ರತಿ ದಶಕದಲ್ಲಿ ಸೈಫ್ ಅಲಿಖಾನ್ ಮಗುವಿನ ತಂದೆಯಾಗಿದ್ದಾರೆ ಎಂದು ಕರೀನಾ ಹೇಳಿಕೊಂಡಿದ್ದಾರೆ.
ಸೈಫ್ ಅಲಿ ಖಾನ್ 51 ನೇ ವಯಸ್ಸಿಗೆ 4 ಮಕ್ಕಳ ತಂದೆ ಆಗಿದ್ದಾರೆ.ಸೈಫ್ ಅಲಿ ಖಾನ್ 23 ವರ್ಷ ವಯಸ್ಸಾಗಿದ್ದಾಗ, ಮೊದಲ ಬಾರಿಗೆ ತಂದೆಯಾದರು. ಸಾರಾ ಅಲಿ ಖಾನ್ ಗೆ ಮೊದಲು ತಂದೆ ಆದರು ಸೈಫ್ ಅಲಿ ಖಾನ್. ಅಂದಿನಿಂದ, ಪ್ರತಿ ದಶಕದಲ್ಲಿ, ಅವರು ಒಂದೊಂದು ಮಗುವಿನ ತಂದೆಯಾಗಿದ್ದಾರೆ.

ಸೈಫ್ ಅಲಿ ಖಾನ್, ಅಮೃತಾ ಸಿಂಗ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಸಾರಾ ಅಲಿ ಖಾನ್ ಮತ್ತು ಇಬ್ರಾಹಿಂ ಅಲಿ ಖಾನ್. ಕರೀನಾ ಕಪೂರ್ ಅವರನ್ನು ಮದುವೆಯಾದ ನಂತರ ತೈಮೂರ್ ಮತ್ತು ಜೆಹ್‌ಗೆ ಸೈಫ್ ತಂದೆಯಾದರು. ಸೈಫ್ ಅವರ ನಾಲ್ಕು ಮಕ್ಕಳು ಎಂದರೆ ಸೈಫ್ ಗೆ ಪ್ರಾಣ. ಸೈಫ್ ತಮ್ಮ ನಾಲ್ಕು ಮಕ್ಕಳನ್ನು ತುಂಬಾ ಪ್ರೀತಿಸುತ್ತಾರೆ ಮತ್ತು ಅವರೊಂದಿಗೆ ಹೆಚ್ಚು ಸಮಯ ಕಳೆಯುತ್ತಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ, ಸೈಫ್ ಮಕ್ಕಳನ್ನು ಪ್ರೀತಿಸುತ್ತಾರೆ ಎಂದು ಕರೀನಾ ಹೇಳಿಕೊಂಡಿದ್ದಾರೆ. ಸೈಫ್ ತನ್ನ ವಯಸ್ಸಿನ ಪ್ರತಿ ದಶಕದಲ್ಲಿ ಮಗು ಮಾಡಿಕೊಂಡಿದ್ದಾರೆ. ಎಂದು ಕರೀನಾ ಹೇಳಿದರು.

ಜೀವನದ ಪ್ರತಿ ಹಂತದಲ್ಲೂ ನಾಲ್ಕು ಮಕ್ಕಳ ತಂದೆಯಾಗಿದ್ದಾರೆ. ಸೈಫ್‌ನಂತಹ ವಿಶಾಲ ಮನಸ್ಸಿನ ವ್ಯಕ್ತಿಯಿಂದ ಮಾತ್ರ ಇದನ್ನು ಮಾಡಲು ಸಾಧ್ಯ ಎಂದು ಕರೀನಾ ಹೇಳಿದರು. 60ರ ಹರೆಯದಲ್ಲೂ ಸೈಫ್ ತಂದೆಯಾಗುವ ಹಂಬಲ ಹೊಂದಿದ್ದಾರೆ. ಎಂಬುದು ಕರೀನಾ ಮಾತುಗಳಿಂದ ಸ್ಪಷ್ಟವಾಗಿದೆ. ಆದರೆ ಇದನ್ನು ಕರೀನಾ ಸಂಪೂರ್ಣವಾಗಿ ನಿರಾಕರಿಸಿದ್ದಾರೆ.


Click it and Unblock the Notifications











