For Quick Alerts
  ALLOW NOTIFICATIONS  
  For Daily Alerts

  ಅವನು ಹೆಂಡತಿ ಬಿಟ್ಟವನು, ಹುಷಾರು: ಸೈಫ್ ಬಗ್ಗೆ ಕರೀನಾಗೆ ಹೀಗೆ ಎಚ್ಚರಿಕೆ ನೀಡಿದ್ದರಂತೆ!

  By Avani Malnad
  |

  ಸೈಫ್ ಅಲಿ ಖಾನ್ ಜತೆ ಪ್ರೀತಿಯಲ್ಲಿ ಬಿದ್ದು 2012ರಲ್ಲಿ ಅವರನ್ನು ಮದುವೆಯಾಗುವ ವೇಳೆ ಕರೀನಾ ತಮ್ಮ ವೃತ್ತಿ ಜೀವನದ ಉತ್ತುಂಗದಲ್ಲಿದ್ದರು. ಸಂಸಾರ ಆರಂಭಿಸಿ ಇಬ್ಬರ ಪ್ರೀತಿಯ ಕುಡಿ ತೈಮೂರ್ ಜನಿಸಿದ್ದರೂ ಈ ಮದುವೆಯ ಬಗ್ಗೆ ಈಗಲೂ ಚರ್ಚೆಗಳು ನಡೆಯುತ್ತಿರುತ್ತವೆ.

  ದರ್ಶನ್ ಸಿನಿಮಾ ಶೀರ್ಷಿಕೆಯನ್ನು ತನ್ನ ಸಿನಿಮಾಗೆ ಇಟ್ಟ ಅನುಷ್ಕಾ ಶರ್ಮಾ | Anushka Sharma | Bul Bul

  ಸೈಫ್-ಕರೀನಾ ಮದುವೆಗೆ ಅನೇಕರು ಆಕ್ಷೇಪ, ಅಸಮಾಧಾನ ವ್ಯಕ್ತಪಡಿಸಿದ್ದರು. ಸೈಫ್ ಮೊದಲ ಮದುವೆಗೆ ಬಾಲಕಿಯಾಗಿದ್ದ ಕರೀನಾ ಕಪೂರ್ ಹಾಜರಾಗಿದ್ದ ಫೋಟೊಗಳು ಆ ಸಂದರ್ಭದಲ್ಲಿ ವೈರಲ್ ಆಗಿದ್ದವು. ಈ ಮದುವೆಗೆ ಎದುರಾಗಿದ್ದ ವಿರೋಧಗಳ ಬಗ್ಗೆ ಕೆಲವು ಸಮಯದ ಹಿಂದೆ ಕರೀನಾ ಕಪೂರ್ ಹೇಳಿಕೊಂಡಿದ್ದರು.

  ಪ್ರಿಯಾಂಕಾ ಚೋಪ್ರಾಳಂತೆ ನನ್ನಿಂದ ಇದು ಸಾಧ್ಯವೇ ಇಲ್ಲ ಎಂದಿದ್ದರು ಕರೀನಾ ಕಪೂರ್

  ವೃತ್ತಿ ಬದುಕು ಚೆನ್ನಾಗಿ ನಡೆಯುತ್ತಿರುವ ಈ ಸಮಯದಲ್ಲಿ ಮದುವೆಯಾದರೆ ಸಿನಿಮಾಕ್ಕೆ ಅಡ್ಡಿಯಾಗುತ್ತದೆ ಎಂದು ಕೆಲವರು ಹೇಳಿದ್ದರೆ, ಇನ್ನು ಅನೇಕರು ಆತ ವಿಚ್ಚೇದನ ಪಡೆದಿರುವವ ಹಾಗೂ ಆತನಿಗೆ ಇಬ್ಬರು ಮಕ್ಕಳಿದ್ದಾರೆ ಎಂಬುದನ್ನು ಮುಖ್ಯವಾಗಿ ಪ್ರಸ್ತಾಪಿಸುತ್ತಿದ್ದರು ಎಂದು ಕರೀನಾ ಹೇಳಿದ್ದಾರೆ. ಮುಂದೆ ಓದಿ...

  ಆಗ ಯಾರೂ ಹೀಗೆ ಇರಲಿಲ್ಲ

  ಆಗ ಯಾರೂ ಹೀಗೆ ಇರಲಿಲ್ಲ

  'ಜನರು ಈಗ ಅವರ ಪಾಡಿಗೆ ತಮ್ಮ ಕೆಲಸ ಮಾಡಿಕೊಂಡು ಇದ್ದಾರೆ ಮತ್ತು ತಮ್ಮ ಪ್ರೀತಿಯ ಬಗ್ಗೆ ಹೆಚ್ಚು ಮಾತನಾಡುತ್ತಿದ್ದಾರೆ ಎನ್ನುವುದು ನೋಡಿ ಸಂತೋಷವಾಗುತ್ತಿದೆ. ನಾನು ಸೈಫ್ ಅಲಿಖಾನ್ ಜತೆ ಮದುವೆಯಾಗಲು ಬಯಸಿದಾಗ ಯಾರೂ ಹೀಗೆ ಇರಲಿಲ್ಲ' ಎಂದಿದ್ದರು.

  ಸಾಲು ಸಾಲು ಪ್ರಶ್ನೆಗಳು

  ಸಾಲು ಸಾಲು ಪ್ರಶ್ನೆಗಳು

  'ಆತನಿಗೆ ಇಬ್ಬರು ಮಕ್ಕಳಿದ್ದಾರೆ. ಆತ ವಿಚ್ಚೇದನ ಪಡೆದುಕೊಂಡಿದ್ದಾನೆ. ಈಗಲೂ ನೀನು ಮದುವೆ ವಿಚಾರವಾಗಿ ಮುಂದುವರಿಯುವುದರಲ್ಲಿ ಖಾತರಿಯಿದೆಯೇ?' ಎಂದು ಒಂದರ ಮೇಲೊಂದು ಪ್ರಶ್ನೆಗಳನ್ನು ಹಾಕುತ್ತಿದ್ದರು' ಎಂದಿದ್ದಾರೆ.

  ಮದುವೆಯಾಗುವುದು ಅಪರಾಧವೇ?

  ಮದುವೆಯಾಗುವುದು ಅಪರಾಧವೇ?

  ಈಗ ಮದುವೆಯಾದರೆ ನಿನ್ನ ಸಿನಿಮಾ ಬದುಕೇ ಮುಗಿದು ಹೋಗುತ್ತದೆ ಎಂದು ಎಚ್ಚರಿಕೆ ನೀಡುತ್ತಿದ್ದರು. ಅದಕ್ಕೆ ನಾನು 'ಪ್ರೀತಿಯಲ್ಲಿ ಬೀಳುವುದು ಅಷ್ಟೊಂದು ದೊಡ್ಡ ಅಪರಾಧವೇ? ಮದುವೆಯಾಗುವುದು ಅಷ್ಟೊಂದು ದೊಡ್ಡ ಅಪರಾಧವೇ? ಆದದ್ದಾಗಲಿ, ನೋಡೇ ಬಿಡೋಣ' ಎನ್ನುತ್ತಿದ್ದೆ ಎಂದು ತಿಳಿಸಿದ್ದಾರೆ.

  ಸೈಫ್ ಮೊದಲ ಮದುವೆ

  ಸೈಫ್ ಮೊದಲ ಮದುವೆ

  ಕರೀನಾ ಜತೆ 2012ರಲ್ಲಿ ಮದುವೆಯಾಗುವ ಮುನ್ನ ಸೈಫ್ ಅಲಿಖಾನ್ 1991ರಲ್ಲಿ ಅಮೃತಾ ಸಿಂಗ್ ಅವರನ್ನು ಮದುವೆಯಾಗಿದ್ದರು. 2004ರಲ್ಲಿ ಅವರಿಂದ ವಿಚ್ಚೇದನ ಪಡೆದಿದ್ದರು. ಅವರಿಗೆ ನಟಿ ಸಾರಾ ಅಲಿ ಖಾನ್ ಮತ್ತು ಇಬ್ರಾಹಿಂ ಅಲಿ ಖಾನ್ ಎಂಬ ಇಬ್ಬರು ಮಕ್ಕಳಿದ್ದಾರೆ.

  English summary
  Bollywood actress Kareena Kapoor once revealed that she was warned by many against marrying Saif Ali Khan as he was a divorcee with 2 children.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X