ಕ್ರೈಸ್ತ ಧರ್ಮದ ಪ್ರಕಾರ ಕರೀನಾ, ಸೈಫ್ ಮದುವೆ

By Rajendra

ಬಾಲಿವುಡ್ ತಾರಾ ಜೋಡಿ ಕರೀನಾ ಕಪೂರ್ ಹಾಗೂ ಸೈಫ್ ಆಲಿ ಖಾನ್ ರಿಜಿಸ್ಟರ್ಡ್ದ್ ಮದುವೆಯಾಗುವ ಮೂಲಕ ಅಕ್ಟೋಬರ್ 16ರಂದು ದಾಂಪತ್ಯ ಜೀವನಕ್ಕೆ ಅಡಿಯಿಟ್ಟರು. ಆದರೆ ಇವರಿಬ್ಬರ ಮದುವೆ ಇಸ್ಲಾಂ ಧರ್ಮದ ಪ್ರಕಾರ ನಡೆದಿಲ್ಲ ಎಂಬ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.

ಇವರಿಬ್ಬರೂ ಉಂಗುರ ಬದಲಾಯಿಸಿಕೊಳ್ಳುವ ಮೂಲಕ ಕ್ರೈಸ್ತ ಧರ್ಮದ ಪ್ರಕಾರ ಮದುವೆಯಾಗಿದ್ದಾರೆ. ಕರೀನಾ ಅವರ ತಾಯಿ ಬಬಿತಾ ಅವರ ಆಶಯದಂತೆ ಕ್ರೈಸ್ತ ಧರ್ಮದ ವಿಧಿ ವಿಧಾನಗಳ ಪ್ರಕಾರ ಇವರಿಬ್ಬರ ಮದುವೆ ನೆರವೇರಿದೆ.

ಈ ಸಂಗತಿಯನ್ನು ಕರೀನಾರ ಆತ್ಮೀಯ ಸ್ನೇಹಿತ ಹಾಗೂ ವಿನ್ಯಾಸಕ ಮನೀಶ್ ಮಲ್ಹೋತ್ರಾ ಅವರು ಖಚಿತಪಡಿಸಿದ್ದಾರೆ. ಇಸ್ಲಾಂ ಧರ್ಮದಂತೆ ಇವರಿಬ್ಬರ ನಿಖಾಹ್ ನಡೆಯಬೇಕಿತ್ತು. ಆದರೆ ಬಬಿತಾ ಆಶಯದಂತೆ ಕ್ರೈಸ್ತ ಧರ್ಮದ ಪ್ರಕಾರ ಇವರಿಬ್ಬರೂ ಸತಿಪತಿಯರಾಗಿದ್ದಾರೆ.

ಕೊಲಾಬ್ ನಲ್ಲಿರುವ ತಾಜ್ ಮಹಲ್ ಹೋಟೆಲ್ ನಲ್ಲಿ ಉಂಗುರ ಬದಲಾಯಿಸಿಕೊಳ್ಳುವ ಮೂಲಕ ಇವರಿಬ್ಬರ ಮದುವೆ ಕ್ರೈಸ್ತ ಧರ್ಮದ ವಿಧಿವಿಧಾನದಂತೆ ನೆರವೇರಿದೆ. ಆದರೆ ಆರತಕ್ಷತೆ ಕಾರ್ಯಕ್ರಮ ಮಾತ್ರ ಮೊಘಲ್ ಸಂಪ್ರದಾಯದಂತೆ ನಡೆಸಲು ಇಬ್ಬರೂ ಕುಟುಂಬಿಕರು ಒಪ್ಪಿಗೆ ಸೂಚಿಸಿದ್ದಾರೆ. ಗುರುವಾರ (ಅ.18) ದೆಹಲಿಯಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.

ಸೈಫ್ ಅವರನ್ನು ಕರೀನಾ ವರಿಸುತ್ತಿದ್ದರೂ ಅವರು ಮುಸ್ಲಿಂ ಧರ್ಮಕ್ಕೆ ಮತಾಂತರವಾಗುತ್ತಿಲ್ಲ. ಹಿಂದು ಧರ್ಮದ ಅಸ್ತಿತ್ವವನ್ನು ಉಳಿಸಿಕೊಂಡು ಅವರು ಸೈಫ್ ಜೊತೆ ಬಾಳಪಯಣ ಆರಂಭಿಸಿದ್ದಾರೆ. ಮುಂದೆ ತಮ್ಮ ಮನಸ್ಸನ್ನು ಬದಲಾಯಿಸಿಕೊಂಡು ಮತಾಂತರವಾಗುತ್ತಾರೋ ಇಲ್ಲವೋ ಗೊತ್ತಿಲ್ಲ. (ಏಜೆನ್ಸೀಸ್)

More from Filmibeat

English summary
Saif Ali Khan and Kareena Kapoor did not seal with a ‘Nikaah’ after the registry marriage as reported but the duo exchanged wedding vows. The newly wedded couple only exchanged wedding vows and exchanged wedding rings. They followed the Christian tradition as Kareena’s mother Babita follows Christianity.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X