For Quick Alerts
  ALLOW NOTIFICATIONS  
  For Daily Alerts

  ಹೆಸರು ಬದಲಾಯಿಸಿಕೊಂಡ ತಾರೆ ಕರೀನಾ ಕಪೂರ್

  By Rajendra
  |

  ಬಾಲಿವುಡ್ ತಾರೆ ಕರೀನಾ ಕಪೂರ್ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಆದರೂ ಜನ ಆಕೆಯನ್ನು ಕರೀನಾ ಕಪೂರ್ ಎಂದು ಕರೆಯುತ್ತಿರುವ ಬಗ್ಗೆ ಆಕೆಗೆ ಕೊಂಚ ಬೇಸರವೂ ಆಗಿದೆಯಂತೆ. ದಯವಿಟ್ಟು ಇನ್ನು ಮುಂದೆ ತಮ್ಮನ್ನು ಕರೀನಾ ಕಪೂರ್ ಖಾನ್ ಎಂದು ಕರೆಯಿರಿ ಎಂದು ಅವರು ತಮ್ಮ ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದಾರೆ.

  ಈ ಹೊಸ ಹೆಸರು ನನ್ನಲ್ಲೇನೋ ಪುಳಕ ತರುತ್ತಿದೆ. ದಯವಿಟ್ಟು ಇನ್ನು ಮುಂದೆ ಕರೀನಾ ಕಪೂರ್ ಖಾನ್ ಎಂದೇ ಕರೆಯಿರಿ. ನನಗೇನು ಇದರಿಂದ ಬೇಸರವಾಗಲ್ಲ ಬದಲಾಗಿ ಖುಷಿಯೇ ಹೆಚ್ಚು ಎಂದಿದ್ದಾರೆ. ಆದರೆ ತಾವು ಹೆಸರನ್ನಷ್ಟೇ ಬದಲಾಯಿಸಿಕೊಂಡಿದ್ದು ಇಸ್ಲಾಂ ಧರ್ಮಕ್ಕೆ ಮತಾಂತರವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಕರೀನಾ ಕಪೂರ್ ಖಾನ್.

  ಐಶ್ವರ್ಯಾ ರೈ ಅವರು ಅಭಿಷೇಕ್ ಬಚ್ಚನ್ ಅವರ ಕೈಹಿಡಿದ ಬಳಿಕ ತಮ್ಮ ಹೆಸರನ್ನು ಐಶ್ವರ್ಯಾ ರೈ ಬಚ್ಚನ್ ಎಂದು ಬದಲಾಯಿಸಿಕೊಂಡಿದ್ದರು. ಈಗ ಅದೇ ಹಾದಿಯನ್ನು ಕರೀನಾ ಸಹ ಹೆಜ್ಜೆ ಹಾಕಿದ್ದಾರೆ. ಸದ್ಯಕ್ಕೆ 'ದಬಾಂಗ್ 2' ಚಿತ್ರದ 'ಫೆವಿಕಾಲ್ ಸೆ' ಐಟಂ ಹಾಡು ಕರೀನಾ ಅವರನ್ನು ಮತ್ತಷ್ಟು ಎತ್ತರಕ್ಕೆ ಏರಿಸಿದೆ.

  ನಮ್ಮಿಬ್ಬರ ಧರ್ಮ ಯಾವುದೇ ಆಗಿರಲಿ ನಾವಿಬ್ಬರೂ ಇಷ್ಟಪಟ್ಟು ಒಬ್ಬರನ್ನೊಬ್ಬರು ವರಿಸುತ್ತಿದ್ದೇವೆ. ಧರ್ಮಗಳಲ್ಲಿ ನನಗೆ ನಂಬಿಕೆ ಇಲ್ಲ ಎಂದು ಸೈಫ್ ಈ ಹಿಂದೊಮ್ಮೆ ಹೇಳಿದ್ದರು. ಕರೀನಾ ಕಪೂರ್ ಹೆಸರಷ್ಟೇ ಬದಲಾಗಿದೆ. ಆದರೆ ಧರ್ಮ ಮಾತ್ರ ಬದಲಾಯಿಸಿಕೊಂಡಿಲ್ಲ ಎಂಬುದು ಲೇಟೆಸ್ಟ್ ಸಮಾಚಾರ. (ಏಜೆನ್ಸೀಸ್)

  English summary
  Bollywood actress Kareena Kapoor appealed her fans to address her with her beautiful new name, Kareena Kapoor Khan. Although I've not converted, Saif is my husband and it's a beautiful surname to have," Kareena was quoted.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X