For Quick Alerts
  ALLOW NOTIFICATIONS  
  For Daily Alerts

  ಕಾರ್ತಿಕ್ - ಸಾರಾ ನಡುವೆ ಲವ್ ಬ್ರೇಕ್ ಅಪ್: ದೂರ ಆಗಿದ್ದೇಕೆ ಈ ರೊಮ್ಯಾಂಟಿಕ್ ಕಪಲ್?

  |

  ಸಿನಿಮಾರಂಗದಲ್ಲಿ ಲವ್, ಬೇರ್ ಅಪ್, ಲಿಂಕ್ ಅಪ್ ಸುದ್ದಿಗಳು ಆಗಾಗ ವೈರಲ್ ಆಗುತ್ತಿರುತ್ತೆ. ಇದೀಗ ಮತ್ತೊಂದು ಬ್ರೇಕ್ ಅಪ್ ಸುದ್ದಿ ಬಾಲಿವುಡ್ ನಲ್ಲಿ ಸದ್ದು ಮಾಡುತ್ತಿದೆ. ಬಾಲಿವುಡ್ ಮೋಸ್ಟ್ ರೊಮ್ಯಾಂಟಿಕ್ ಕಪಲ್ ಅಂತನೆ ಖ್ಯಾತಿಗಳಿಸಿದ್ದ ನಟ ಕಾರ್ತಿ ಆರ್ಯನ್ ಮತ್ತು ಸಾರಾ ಅಲಿ ಖಾನ್ ನಡುವಿನ ಬ್ರೇಕ್ ಅಪ್ ಸುದ್ದಿ ಈಗ ಸದ್ದು ಮಾಡುತ್ತಿದೆ.

  ಮೊದಲ ಸಿನಿಮಾದಲ್ಲೇ Superstar Niranjan 6 packs | Filmibeat Kannada

  ಕಳೆದೆರಡು ವರ್ಷಗಳಿಂದ ಪ್ರೇಮಿಗಳು ಅಂತಾನೆ ಕರೆಸಿಕೊಳ್ಳುತ್ತಿದ್ದ ಕಾರ್ತಿಕ್ ಮತ್ತು ಸಾರಾ ಈಗ ದೂರ ದೂರ ಆಗಿದ್ದಾರೆ. ಸದಾ ಜೊತೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಜೋಡಿ ಬೇರೆ ಆಗಿದ್ದಲ್ಲದೆ, ಇನ್ಸ್ಟಾಗ್ರಮ್ ನಲ್ಲಿ ಒಬ್ಬರನ್ನೊಬ್ಬರು ಅನ್ ಫಾಲೋ ಮಾಡಿದ್ದಾರೆ. ಈ ಮೂಲಕ ಇಬ್ಬರು ಅಧಿಕೃತವಾಗಿ ಲವ್ ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಬಹಿರಂಗವಾಗಿದೆ. ಮುಂದೆ ಓದಿ..

  ಫೋಟೋ ವೈರಲ್: ಮುದ್ದುಮುದ್ದಾಗಿರೊ ಈ ಪುಟಾಣಿ ಈಗ ಸ್ಟಾರ್ ನಟಿ

  ಸದಾ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದ ಜೋಡಿ

  ಸದಾ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದ ಜೋಡಿ

  ಇಬ್ಬರು ಡೇಟಿಂಗ್ ಮಾಡುತ್ತಿದ್ದ ವಿಚಾರ ಗುಟ್ಟಾಗೇನು ಉಳಿದಿರಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಇಬ್ಬರು ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದರು. ಸಾರಾ ಅಲಿ ಖಾನ್ ಹುಟ್ಟುಹಬ್ಬದ ದಿನ, ಬ್ಯಾಂಕಾಕ್ ನಲ್ಲಿ ಶೂಟಿಂಗ್ ನಲ್ಲಿ ಬ್ಯುಸಿ ಇದ್ದರು. ಕೂಲಿ ನಂ.1 ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಪ್ರೇಯಸಿಗಾಗಿ ಕಾರ್ತಿಕ್ ಆರ್ಯನ್ ಬ್ಯಾಂಕಾಕ್ ಗೆ ಹೋಗಿ ಸರ್ಪೈಸ್ ನೀಡಿದ್ದರು.

  ಲವ್ ಆಜ್ ಕಲ್ ಸಿನಿಮಾ ಬಳಿಕ ಇಬ್ಬರ ನಡುವೆ ಬ್ರೇಕ್ ಅಪ್

  ಲವ್ ಆಜ್ ಕಲ್ ಸಿನಿಮಾ ಬಳಿಕ ಇಬ್ಬರ ನಡುವೆ ಬ್ರೇಕ್ ಅಪ್

  ಲವ್ ಆಜ್ ಕಲ್ ಸಿನಿಮಾದ ವರೆಗೂ ಇಬ್ಬರ ಪ್ರೀತಿ ಗಟ್ಟಿಯಾಗೆ ಇತ್ತು. ಬಳಿಕ ಇಬ್ಬರ ನಡುವೆ ವೈಮನಸ್ಸು ಮೂಡಿದೆ ಎಂದು ಹೇಳಲಾಗುತ್ತಿದೆ. ಲವ್ ಆಜ್ ಕಲ್ ಸಿನಿಮಾ ಬಳಿಕ ಇಬ್ಬರು ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಹಾಗಾಗಿ ಇಬ್ಬರ ನಡುವೆ ಯಾವುದು ಸರಿ ಇಲ್ಲ ಎನ್ನುವ ಸುದ್ದಿ ಕೇಳಿಬರುತ್ತಿತ್ತು. ಇದೀಗ ಇಬ್ಬರನೊಬ್ಬರು ಅನ್ ಫಾಲ್ ಮಾಡುವ ಮೂಲಕ ಹರಿದಾಡುತ್ತಿದ್ದ ಬ್ರೇಕ್ ಅಪ್ ಸುದ್ದಿಗೆ ಮತ್ತಷ್ಟು ಪುಷ್ಟಿ ನೀಡಿದ್ದಾರೆ.

  ಬ್ರೇಕ್ ಅಪ್ ಗೆ ಕಾರಣವೇನು?

  ಬ್ರೇಕ್ ಅಪ್ ಗೆ ಕಾರಣವೇನು?

  ಇಬ್ಬರು ಸಿನಿಮಾಗಳಲ್ಲಿ ಬ್ಯುಸಿ ಇರುವ ಕಾರಣ ಒಬ್ಬರಿಗೊಬ್ಬರು ಸಮಯ ಕೊಡಲು ಸಾಧ್ಯವಾಗುತ್ತಿಲ್ಲ ಎನ್ನುವ ಕಾರಣಕ್ಕೆ ಬೇರೆ ಬೇರೆ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಇಬ್ಬರಿಗೂ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಫ್ಯಾನ್ ಫಾಲೋವರ್ಸ್ ಇದ್ದಾರೆ.

  ಸಾರಾ ಮತ್ತು ಕಾರ್ತಿಕ್ ಆರ್ಯನ್ ಸಿನಿಮಾಗಳು

  ಸಾರಾ ಮತ್ತು ಕಾರ್ತಿಕ್ ಆರ್ಯನ್ ಸಿನಿಮಾಗಳು

  ಸಾರಾ ಅಲಿ ಖಾನ್ ಕೊನೆಯದಾಗಿ ಲವ್ ಆಜ್ ಕಲ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ಕೂಲ್ ನಂ.1 ಮತ್ತು ಅತ್ರಂಗಿ ರೇ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಕಾರ್ತಿಕ್ ಸದ್ಯ ದೋಸ್ತಾನ-2 ಮತ್ತು ಭೂಲ್ ಭೂಲೈಯಾ-2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

  English summary
  Bollywood Actor Kartik Aaryan and Sara Ali Khan unfollow each other on Instagram.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X