For Quick Alerts
  ALLOW NOTIFICATIONS  
  For Daily Alerts

  ಕೋಟಿ ವೆಚ್ಚದ ಪಾನ್ ಮಸಾಲ ಆಫರ್ ತಿರಸ್ಕರಿಸಿದ ಕಾರ್ತಿಕ್ ಆರ್ಯನ್!

  |

  ಸದ್ಯಕ್ಕೆ ಬಾಲಿವುಡ್‌ನಲ್ಲಿ ಸಿಕ್ಕಾ ಪಟ್ಟೆ ಸದ್ದು ಮಾಡುತ್ತಿರುವ, ಯಂಗ್ ಮತ್ತು ಎನರ್ಜಿಟಿಕ್ ಹೀರೋ ಅಂದ್ರೆ ಅದು ಕಾರ್ತಿಕ್ ಆರ್ಯನ್. ಇತ್ತೀಚೆಗೆ ಸಾಲು-ಸಾಲು ಸೋಲುಂಡ ಬಾಲಿವುಡ್‌ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದ ಏಕೈಕ ನಟ ಕಾರ್ತಿಕ್ ಆರ್ಯನ್.

  ಭೂಲ್ ಭುಲಯ್ಯ ಸಿನಿಮಾದ ಮೂಲಕ ಕಾರ್ತಿಕ್ ಆರ್ಯನ್ ಬಾಕ್ಸಾಫೀಸ್‌ನಲ್ಲಿ ಗೆದ್ದು ಬೀಗಿದ್ದರು. ಈ ಚಿತ್ರದ ಬಳಿಕ ನಟ ಕಾರ್ತಿಕ್‌ಗೆ ಬೇಡಿಕೆ ಹೆಚ್ಚಾಗಿದೆ. ಇವರ ಮುಂದಿನ ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಈ ನಡುವೆ ನಟ ಕಾರ್ತಿಕ್ ತಮಗೆ ಬಂದ ಆಫರ್ ಒಂದನ್ನು ತಿರಸ್ಕರಿಸಿದ್ದಾರೆ.

  ಸೋಲಿನ ಸುಳಿಯಲ್ಲಿರುವ ಅಕ್ಷಯ್‌ಗೆ ಮತ್ತೊಂದು ಸಂಕಷ್ಟ ತಂದಿಟ್ಟ ಬಿಜೆಪಿ ಸಂಸದಸೋಲಿನ ಸುಳಿಯಲ್ಲಿರುವ ಅಕ್ಷಯ್‌ಗೆ ಮತ್ತೊಂದು ಸಂಕಷ್ಟ ತಂದಿಟ್ಟ ಬಿಜೆಪಿ ಸಂಸದ

  ಅರಸಿ ಬಂದ ಕೋಟಿ ಆಫರನ್ನು ಕೈ ಬಿಟ್ಟಿದ್ದಾರೆ ನಟ ಕಾರ್ತಿಕ್ ಆರ್ಯನ್. ಇವರ ಈ ನಿರ್ಧಾರಕ್ಕೆ ಅಭಿಮಾನಿಗಳು ಜೈಕಾರ ಹಾಕುತ್ತಿದ್ದಾರೆ. ಯಾಕೆಂದರೆ ಕಾರ್ತಿಕ್ ಆರ್ಯನ್ ರಿಜೆಕ್ಟ್ ಮಾಡಿದ್ದು, ಪಾನ್ ಮಸಾಲ ಜಾಹೀರಾತಿನಲ್ಲಿ ನಟಿಸುವುದನ್ನು.

  8 ಕೋಟಿಯ ಪಾನ್ ಮಸಾಲ ಆಫರ್!

  8 ಕೋಟಿಯ ಪಾನ್ ಮಸಾಲ ಆಫರ್!

  ಪಾನ್ ಮಸಾಲ, ಲಿಕ್ಕರ್, ಗುಟ್ಕಾ, ಸಿಗರೇಟು, ಇಂತಹ ಪದಾರ್ಥಗಳನ್ನು ಜಾಹೀರಾತು ಮಾಡುವಂತೆ ಸ್ಟಾರ್ ನಟರ ಹಿಂದೆ ಹಲವು ಬ್ರ್ಯಾಂಡ್‌ಗಳು ಬಿದ್ದಿರುತ್ತವೆ. ಆದರೆ ಸ್ಟಾರ್ ನಟರು ನಮಗೆ ಸಾಕಷ್ಟು ಫಾಲೋವರ್ಸ್‌ಗಳು ಇರುವ ಕಾರಣಕ್ಕೆ, ಇಂತಹ ಜಾಹೀರಾತುಗಳಲ್ಲಿ ಅಭಿನಯಿಸುವ ಮುನ್ನ ಹಲವು ಬಾರಿ ಯೋಚನೆ ಮಾಡಬೇಕಾಗುತ್ತದೆ. ಈಗ ಅಂತಹದ್ದೇ ಒಂದು ಕಾರ್ತಿಕ್ ಆರ್ಯನ್‌ಗೆ ಬಂದಿದೆಯಂತೆ. ಪಾನ್ ಮಸಾಲ ಬ್ರಾಂಡ್ ಒಂದು ನಟ ಕಾರ್ತಿಕ್‌ಗೆ ಬಹುಕೋಟಿ ಆಫರ್ ನೀಡಿದೆ. ಈ ಜಾಹೀರಾತಿನಲ್ಲಿ ನಟಿಸಲು ಕಾರ್ತಿಕ್‌ಗೆ 8 ರಿಂದ 9 ಕೋಟಿಯ ಆಫರ್ ಕೂಡ ನೀಡಲಾಗಿದೆ. ಆದರೆ ಈ ಜಾಹೀರಾತಿನಲ್ಲಿ ನಟಿಸಲು ಕಾರ್ತಿಕ್ ಆರ್ಯನ್ ಒಪ್ಪಿಕೊಂಡಿಲ್ಲ.

  ಕಾರ್ತಿಕ್‌ಗೆ ಯುವ ಅಭಿಮಾನಿಗಳೇ ಹೆಚ್ಚು!

  ಕಾರ್ತಿಕ್‌ಗೆ ಯುವ ಅಭಿಮಾನಿಗಳೇ ಹೆಚ್ಚು!

  ಬಾಲಿವುಡ್‌ ಉದಯೋನ್ಮುಖ ನಟನಾಗಿ ಬೆಳೆಯುತ್ತಿರುವ ಕಾರ್ತಿಕ್ ನಿಗೆ ಸಾಕಷ್ಟು ಅಭಿಮಾನಿಗಳು ಈಗಾಗಲೇ ಹುಟ್ಟಿಕೊಂಡಿದ್ದಾರೆ. ಅದರಲ್ಲೂ ಕೂಡ ಕಾರ್ತಿಕ ಆರ್ಯನ್ ಗೆ ಇರುವುದೆಲ್ಲ ಯುವ ಅಭಿಮಾನಿಗಳೇ. ರಾಗಿ ಈ ರೀತಿಯ ಜಾಹೀರಾತಿನಲ್ಲಿ ಕಾರ್ತಿಕ್ ನಟಿಸಿದರೆ ಒಂದು ವೇಳೆ ಅವರು ಅಭಿಮಾನಿಗಳು ಕೂಡ ಅವರನ್ನು ಅನುಸರಿಸುವಂತಹ ಅಪಾಯವಿರುತ್ತದೆ. ಹಾಗಾಗಿಯೇ ನಟ ಕಾರ್ತಿಕ್ ಆರ್ಯನ್ ಪಾನ್ ಮಸಾಲ ಜಾಹೀರಾತನ್ನು ತಿರಸ್ಕರಿಸಿದ್ದಾರೆ. ಈ ವಿಚಾರ ಹೊರಬರುತ್ತಲೇ ಕಾರ್ತಿಕ ಎಲ್ಲರೂ ಜೈಕಾರ ಹಾಕುತ್ತಿದ್ದಾರೆ. ಮಾದರಿಯ ನಟನಾಗಿದ್ದಾರೆ ನಿಮ್ಮನ್ನು ನೋಡಿ ಕೆಲವರು ಕಲಿಯಬೇಕು ಎಂದೆಲ್ಲಾ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.

  ಅಲ್ಲು ಅರ್ಜುನ್‌ಗೂ ಬಂದಿದ್ದ ಆಫರ್!

  ಅಲ್ಲು ಅರ್ಜುನ್‌ಗೂ ಬಂದಿದ್ದ ಆಫರ್!

  ಇತ್ತೀಚೆಗೆ ನಟ ಅಲ್ಲು ಅರ್ಜುನ್ ಕೂಡ ಇದೇ ವಿಚಾರರದಲ್ಲಿ ಸುದ್ದಿಯಾಗಿದ್ದರು. ಒಂದು ಜಾಹೀರಾತಿನಲ್ಲಿ ನಟಿಸಲು ಅಲ್ಲು ಅರ್ಜುನ್ 7.5 ಕೋಟಿ ರೂ. ಗುಟ್ಕಾ ಬ್ರಾಂಡ್ ಕಂಪೆನಿಯೊಂದು ತಮ್ಮ ಜಾಹೀರಾತಿಗಾಗಿ ಐಕಾನ್ ಸ್ಟಾರ್‌ಗೆ 10 ಕೋಟಿ ರೂ. ಆಫರ್ ಮಾಡಿದೆಯಂತೆ. ಜನರಿಗೆ ಹಾನಿಕಾರಕವಾಗುವಂತಹ ಉತ್ಪನ್ನಗಳನ್ನು ಪ್ರಮೋಟ್ ಮಾಡುವುದಿಲ್ಲ ಎಂದು ಹೇಳಿ ಐಕಾನ್ ಸ್ಟಾರ್ ಈ ಭಾರಿ ಆಫರ್ ತಿರಸ್ಕರಿಸಿದ್ದಾರೆ ಎನ್ನಲಾಗಿತ್ತು.

  ಬಾಲಿವುಡ್‌ ನಟರು ಟ್ರೋಲ್!

  ಬಾಲಿವುಡ್‌ ನಟರು ಟ್ರೋಲ್!

  ಕೆಲವೇ ದಿನಗಳ ಹಿಂದೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಕ್ಷಯ್ ಕುಮಾರ್ ಹಾಗೂ ಅಜಯ್ ದೇವಗನ್ ಪಾನ್ ಮಸಾಲಾ ಜಾಹೀರಾತಿನಲ್ಲಿ ನಟಿಸಿದ್ದರು. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಸೂಪರ್‌ ಸ್ಟಾರ್‌ಗಳು ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಕೊನೆಗೆ ತಪ್ಪಿನ ಅರಿವಾಗಿ ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆ ಕೂಡ ಕೇಳಿದ್ದರು.

  English summary
  Kartik Aaryan Reject 8 Crore Pan Masala Deal to endorse a Pan Masala Brand. Know More,
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X