ಥ್ರಿಲ್ಲಿಂಗ್ ಸುದ್ದಿ ನೀಡಿದ ಕತ್ರಿನಾ ಕೈಫ್-ವಿಜಯ್ ಸೇತುಪತಿ ಚಿತ್ರ!

ಬಾಲಿವುಡ್ ನಟಿ ಕತ್ರಿನಾ ಕೈಫ್ ಮತ್ತು ವಿಜಯ್ ಸೇತುಪತಿ ಕಾಂಬಿನೇಷನ್‌ನಲ್ಲಿ ಸಿನಿಮಾ ಬರಲಿದೆ ಎನ್ನುವ ಸುದ್ದಿ ಕಳೆದ ಕೆಲವು ದಿನಗಳಿಂದ ಚರ್ಚೆಯಾಗುತ್ತಿದೆ. ಶ್ರೀರಾಮ್ ರಾಘವನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದು, ಏಪ್ರಿಲ್ ತಿಂಗಳಲ್ಲಿ ಸಿನಿಮಾ ಶುರುವಾಗಲಿದೆ ಎನ್ನಲಾಗಿದೆ.

ಇದೀಗ, ಈ ಚಿತ್ರದ ಕುರಿತು ಹೊಸ ಅಪ್‌ಡೇಡ್ ಹೊರಬಿದ್ದಿದ್ದು, ಈ ಸಿನಿಮಾದ ಅವಧಿ 90 ನಿಮಿಷ ಮಾತ್ರ ಇರಲಿದೆಯಂತೆ. ಸಾಮಾನ್ಯವಾಗಿ ಕಮರ್ಷಿಯಲ್ ಚಿತ್ರಗಳು 120 ನಿಮಿಷಗಳು ಇರುತ್ತದೆ. ಆದರೆ, ಕತ್ರಿನಾ ಮತ್ತು ಸೇತುಪತಿ ಸಿನಿಮಾ ಒಂದೂವರೆಗಂಟೆ ಮಾತ್ರ ತಯಾರಾಗಲಿದೆಯಂತೆ.

ಥ್ರಿಲ್ಲಿಂಗ್ ಏನಪ್ಪಾ ಅಂದ್ರೆ ಈ ಚಿತ್ರದಲ್ಲಿ ಇಂಟರ್‌ವಲ್ ಬ್ರೇಕ್ ಇರುವುದಿಲ್ಲವಂತೆ. ಬ್ರೇಕ್ ಇಲ್ಲದೇ 90 ನಿಮಿಷ ಸಿನಿಮಾ ನೋಡುವ ಅವಕಾಶ ಸಿಗಲಿದೆ ಎಂಬ ಸುದ್ದಿ ಸಾಮಾಜಿಕ ಜಾಲಜಾಣದಲ್ಲಿ ಹರಿದಾಡುತ್ತಿದೆ.

Katrina Kaif and Vijay Sethupathi Movie is a 90 minute film with no interval

ಇನ್ನು ಪುಣೆಯಲ್ಲಿ ಇಡೀ ಸಿನಿಮಾದ ಚಿತ್ರೀಕರಣ ನಡೆಯಲು ಸಿದ್ಧತೆ ಆಗಿದೆ. ಒಂದು ತಿಂಗಳೊಳಗೆ ಶೂಟಿಂಗ್ ಮುಗಿಸಲಿದ್ದು, ಕೆಲವು ದೃಶ್ಯಗಳನ್ನು ಮಾತ್ರ ಮುಂಬೈನಲ್ಲಿ ಚಿತ್ರಿಕರಿಸಲಾಗುವುದು.

ಒಂದೂವರೆ ಗಂಟೆಗೆ ತಕ್ಕಂತೆ ಸ್ಕ್ರಿಪ್ಟ್ ಮಾಡಲಾಗಿದ್ದು, ಸದ್ಯಕ್ಕೆ ಚಿತ್ರದ ಹೆಸರು ಅಂತಿಮ ಮಾಡಿಲ್ಲ. ಪ್ರಸ್ತುತ ಕತ್ರಿನಾ ಕೈಫ್ ಬೂತ್ ಪೊಲೀಸ್ ಎಂಬ ಪ್ರಾಜೆಕ್ಟ್‌ನಲ್ಲಿ ಬ್ಯುಸಿ ಇದ್ದಾರೆ.

ಸಲ್ಮಾನ್ ಖಾನ್ ಟೈಗರ್ 3 ಸರಣಿ ಮುಂದುವರಿಸಲಿದ್ದು, ಈ ಚಿತ್ರದಲ್ಲೂ ಕತ್ರಿನಾ ಕಾಣಿಸಿಕೊಳ್ಳಲಿದ್ದಾರೆ. ಈ ನಡುವೆ ಶ್ರೀರಾಮ್ ರಾಘವನ್ ಸಿನಿಮಾ ಆರಂಭಿಸುವ ಲೆಕ್ಕಾಚಾರದಲ್ಲಿದ್ದಾರೆ.

More from Filmibeat

English summary
Bollywood actress Katrina Kaif and Vijay Sethupathi starrer next with Sriram Raghavan is a 90-minute film with no interval. Film goes on the floor from April 2021.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X