»   » ಐಶ್ವರ್ಯ ಬಗ್ಗೆ ಆಶ್ಚರ್ಯಕರ ಹೇಳಿಕೆ ನೀಡಿದ ಕತ್ರಿನಾ, ಏನದು?

ಐಶ್ವರ್ಯ ಬಗ್ಗೆ ಆಶ್ಚರ್ಯಕರ ಹೇಳಿಕೆ ನೀಡಿದ ಕತ್ರಿನಾ, ಏನದು?

Posted By:
Subscribe to Filmibeat Kannada

ಬಾಲಿವುಡ್ ನ ಬಾರ್ಬಿ ಡಾಲ್ ಕತ್ರಿನಾ ಕೈಫ್ ಮತ್ತು ರಣಬೀರ್ ಕಪೂರ್ ನಡುವಿನ ಲವ್ ಲೈಫ್ ಗೆ ಬ್ರೇಕ್ ಬಿದ್ದು ಎಷ್ಟೋ ದಿನಗಳು ಕಳೆದುಹೋಗಿದೆ. ಆದರೂ ಸಹ ಇಬ್ಬರೂ ಈಗ 'ಜಗ್ಗ ಜಸೂಸ್' ಚಿತ್ರದ ಪ್ರಮೋಶನ್ ಹಿನ್ನೆಲೆಯಲ್ಲಿ ಜೊತೆಯಲ್ಲಿ ಸುತ್ತುತ್ತಿದ್ದಾರೆ.

ಅಂದಹಾಗೆ 'ಜಗ್ಗ ಜಸೂಸ್' ಚಿತ್ರ ಪ್ರಮೋಶನ್ ನಲ್ಲಿ ಬ್ಯುಸಿಯಾಗಿರುವ ಕತ್ರಿನಾ ಕೈಫ್ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಬಚ್ಚನ್ ಬಗ್ಗೆ ಅಘಾತಕಾರಿ ಸ್ಟೇಟ್‌ಮೆಂಟ್ ನೀಡಿದ್ದು, ಬಿಟೌನಿಗರು ಕಣ್ಣರಳಿಸುವಂತೆ ಮಾಡಿದ್ದಾರೆ. ಅಸಲಿ ಕ್ಯಾಟ್ ಐಶು ಬಗ್ಗೆ ಹೇಳಿದ್ದಾದರೂ ಏನು ಎಂಬುದನ್ನು ಮುಂದೆ ಓದಿರಿ..

ಐಶು ಗೆ ಅವಮಾನ ಮಾಡಿದ್ಲ ಕ್ಯಾಟ್?

'ಜಗ್ಗ ಜಸೂಸ್' ಚಿತ್ರದ ಪ್ರಮೋಶನ್ ಗಾಗಿ ಇತ್ತೀಚೆಗೆ ಕತ್ರಿನಾ-ರಣಬೀರ್ ಇಬ್ಬರೂ ಫೇಸ್ ಬುಕ್ ಲೈವ್ ಬಂದಿದ್ದರು. ಈ ವೇಳೆ ಮೋಜು-ಮಸ್ತಿ ಮಾಡುತ್ತ ಈ ಇಬ್ಬರು ಪರಸ್ಪರ ಕಾಲೆಳುಕೊಳ್ಳುತ್ತಿದ್ದರು. ಈ ನಡುವೆಯೇ ರಣಬೀರ್ ಪ್ರಾಣಿಗಳ ಹೆಸರಿಗೆ ಸೂಕ್ತವಾಗುವ ಸೆಲೆಬ್ರಿಟಿಗಳ ಹೆಸರನ್ನು ಹೇಳಬೇಕು ಎಂದು ಕ್ಯಾಟ್ ಗೆ ಹೇಳಿದ್ರು. ರಣಬೀರ್ 'Fox'(ನರಿ) ಎನ್ನುತ್ತಿದಂತೆ ಕತ್ರಿನಾ ಕೈಫ್ ರವರು ಐಶ್ವರ್ಯ ರೈ ಬಚ್ಚನ್ ಎಂದು ಹೇಳಿದ್ದಾರೆ.

ಐಶು ಮೇಲೆ ಅದೆಷ್ಟು ಕೋಪ ಇತ್ತೋ..

ರಣಬೀರ್ ಪ್ರಶ್ನೆಗೆ ಕತ್ರಿನಾ ಕೈಫ್ ಉತ್ತರ ಗಮನಿಸಿ ಬಿಟೌನ್ ಆಶ್ಚರ್ಯಗೊಂಡಿದೆ. ಇನ್ನೂ ಹಲವರು ಐಶ್ವರ್ಯ ರೈ ಬಚ್ಚನ್ ಮೇಲೆ ಅದೆಷ್ಟು ಕೋಪ ಇತ್ತೋ ಆಕೆಗೆ ಎಂದು ಹಲವರು ಮಾತನಾಡಿಕೊಂಡಿದ್ದಾರೆ.

ಕತ್ರಿನಾ ಕಾಲೆಳೆದ ರಣಬೀರ್

ಇನ್ನೂ ಫೇಸ್ ಬುಕ್ ಲೈವ್ ನಲ್ಲೇ ಕತ್ರಿನಾ ಸಹ ರಣಬೀರ್ ಗೆ ನಿನ್ನ ಜೀವನದ ಐದು ಪ್ರಮುಖ ವ್ಯಕ್ತಿಗಳು ಯಾರು ಎಂಬ ಬಗ್ಗೆ ಪ್ರಶ್ನೆ ಹಾಕಿದ್ದಳು. ಅದಕ್ಕೆ ರಣಬೀರ್ ಕಪೂರ್, "ತಂದೆ-ತಾಯಿ, ಸೋದರಿಯ ಮಗ, ಅಯಾನ್, ನಿನಗೆ ಸಂತೋಷ ಆಗುವುದಾದರೆ ನೀನು. ಆದರೆ ನಾನು ನಮ್ಮ ಎರಡು ಸಾಕು ನಾಯಿಗಳು ಎಂದೇ ಹೇಳುತ್ತೇನೆ' ಎಂದು ಲೈಟಾಗಿ ಕತ್ರಿನಾ ಕಾಲು ಎಳೆದರು.

ರಣಬೀರ್ ಕೆನ್ನೆಗೆ ಬಾರಿಸಿದ ಕ್ಯಾಟ್

ರಣಬೀರ್ ಮತ್ತೆ ಕತ್ರಿನಾಗೆ, 'ನೀನು ಏಕೆ 'ಜಗ್ಗ ಜಸೂಸ್'ಗೆ ಸಹಿ ಹಾಕಿದೆ ಎಂದು ಪ್ರಶ್ನೆ ಮಾಡಿದ್ದರು'. ಅದಕ್ಕೆ ಕತ್ರಿನಾ, 'ಕಾರಣ ನೀನು ನನ್ನ ಜೊತೆ ವರ್ಕ್ ಮಾಡಲು ಬಯಸುತ್ತಿದ್ದೆ, ಅಲ್ಲದೇ ನಾನು ನಟಿಸುವ ಚಿತ್ರದಲ್ಲಿ ನಿನ್ನ ಟ್ಯಾಲೆಂಟ್ ಪ್ರಮೋಟ್ ಮಾಡಿಕೊಳ್ಳಬೇಕು ಎಂದುಕೊಂಡಿದ್ದೆ ಅಲ್ವಾ.. ಸೋ" ಎಂದು ಉತ್ತರಿಸಿ ನಂತರ ರಣಬೀರ್ ಕೆನ್ನೆಗೆ ಬಾರಿಸಿದ್ದಾರೆ. ಆದ್ರೆ ಅದು ಸೀರಿಯಸ್ ಆಗಿ ಅಲ್ಲ.

ರಿವೇಂಜ್ ತೀರಿಸಿಕೊಂಡ ಕ್ಯಾಟ್

ಐಶ್ವರ್ಯ ಬಗ್ಗೆ ಆಶ್ಚರ್ಯಕರ ಹೇಳಿಕೆ ನೀಡಿದ ಕತ್ರಿನಾ, ರಣಬೀರ್ ಗೆ ನಿನ್ನ ಜೊತೆ 'ಜಗ್ಗ ಜಸೂಸ್' ಚಿತ್ರದಲ್ಲಿ ನಟಿಸಿದ್ದೇ ದೊಡ್ಡ ಕಠಿಣವಾದ ಕೆಲಸ ಎಂದು ಹೇಳಿ ರಿವೇಂಜ್ ಸಹ ತೀರಿಸಿಕೊಂಡಿದ್ದಾರೆ.

English summary
Recently, when Katrina Kaif did a live session on Facebook along with Ranbir Kapoor, to promote Jagga Jasoos, the actress gave a shocking statement about Aishwarya Rai Bachchan that left us shocked to Bollywood People.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada