For Quick Alerts
  ALLOW NOTIFICATIONS  
  For Daily Alerts

  ತಾರೆ ಕತ್ರಿನಾ ಕೈಫ್ ಗೆ ಆಕ್ಸಿಡೆಂಟ್, ಕೈಗೆ ಗಾಯ

  By Rajendra
  |

  ಸಿನಿಮಾ ತಾರೆಗಳಿಗೆ ಒಂದು ಸಣ್ಣ ಆಕ್ಸಿಡೆಂಟ್ ಆದರೂ ಸಾಕು ನಿರ್ಮಾಪಕರ ಪಾಲಿಗದು ಭಾರಿ ಆಘಾತ ನೀಡುವ ಸಮಾಚಾರ. ಕಾರಣ ಅವರನ್ನೇ ನಂಬಿಕೊಂಡು ಕೋಟ್ಯಾಂತರ ರೂಪಾಯಿ ಬಂಡವಾಳ ಸುರಿದಿರುತ್ತಾರೆ. ಅವರ ಲೆಕ್ಕಾಚಾರ ಎಲ್ಲಾ ತಲೆಕೆಳಗಾಗುವ ಸಾಧ್ಯತೆಗಳಿರುತ್ತವೆ.

  ಈಗ ಆ ವಿಚಾರ ಪಕ್ಕಕ್ಕಿಡಿ ನೇರವಾಗಿ ವಿಷಯಕ್ಕೆ ಬರೋಣ...ಬಾಲಿವುಡ್ ತಾರೆ ಕತ್ರಿನಾ ಕೈಫ್ ಗೆ ಆಕ್ಸಿಡೆಂಟ್ ಆಗಿದೆ. ಇತ್ತೀಚೆಗೆ ಆಕೆ "ಸ್ತನ ಹಾಗೂ ಅಂಡಾಶಯ ಕ್ಯಾನ್ಸರ್ ಜಾಗೃತಿ" ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆಕೆಯ ಕೈಗೆ ಬ್ಯಾಂಡೇಜ್ ಕಟ್ಟಿಕೊಂಡೇ ಭಾಗವಹಿಸಿದ್ದರು. ಆಗ ಈಕೆಗೆ ಆಕ್ಸಿಡೆಂಟ್ ಆಗಿರುವ ಸಂಗತಿ ಬಹಿರಂಗವಾಗಿದೆ.

  ಬಾಲಿವುಡ್ ಮೂಲಗಳ ಪ್ರಕಾರ ಆಕೆ ಅಭಿನಯಿಸುತ್ತಿರುವ 'ಧೂಮ್ 3' ಚಿತ್ರದಲ್ಲಿ ಆಕ್ಷನ್ ಸನ್ನಿವೇಶದಲ್ಲಿ ಭಾಗವಹಿಸಿದ್ದಾಗ ಈ ಅವಘಡ ನಡೆಯಿತಂತೆ. ಚಿತ್ರದಲ್ಲಿ ಡೂಪ್ ಇಲ್ಲದೆ ತಾನೇ ಅಭಿನಯಿಸಿ ಹೀಗೆ ಮೊಣಕೈ ಮುರಿದುಕೊಂಡಿದ್ದಾರೆ.

  ಈ ಹಿಂದೆ 'ಏಕ್ ಥಾ ಟೈಗರ್' ಚಿತ್ರದಲ್ಲೂ ಡೇರ್‍ ಡೆವಿಲ್ ಸ್ಟಂಟ್ಸ್ ಮಾಡಿದ್ದರು ಕತ್ರಿನಾ. ಆದರೆ ಅಲ್ಲಿ ಏನೂ ಎಡವಟ್ಟು ಮಾಡಿಕೊಂಡಿರಲಿಲ್ಲ. ಧೂಮ್, ಧೂಮ್ 2 ಚಿತ್ರಗಳು ಬಾಕ್ಸ್ ಆಫೀಸ್ ಕೊಳ್ಳೆಹೊಡೆದಿದ್ದವು. ಈಗ 'ಧೂಮ್ 3' ಚಿತ್ರವನ್ನು ಯಶ್ ರಾಜ್ ಫಿಲಂಸ್ ಅದ್ದೂರಿಯಾಗಿಯೇ ತೆರೆಗೆ ತರುತ್ತಿದೆ. ಚಿತ್ರದ ನಾಯಕ ನಟ ಅಮೀರ್ ಖಾನ್. (ಏಜೆನ್ಸೀಸ್)

  English summary
  Actress Katrina Kaif was recently spotted promoting breast and cervical cancer awareness at Cancer Patients Aid Association in Mumbai. But, we were pretty shocked to discover the actress's broken hand, that was covered with a crepe bandage.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X