For Quick Alerts
  ALLOW NOTIFICATIONS  
  For Daily Alerts

  ಶ್ರೀದೇವಿ ಪುತ್ರಿ ಜಾಹ್ನವಿ ಮಾಡ್ತಿರೋ ಕೆಲಸವೇನು? ಕತ್ರಿನಾ ಮಾತಿನ ಅರ್ಥವೇನು?

  By Harshitha
  |

  ಸಾಮಾಜಿಕ ಜಾಲತಾಣಗಳಲ್ಲೊಂದಾದ ಇನ್ಸ್ಟಾಗ್ರಾಮ್ ನಲ್ಲಿ ಬಾಲಿವುಡ್ ನಟಿ ಕತ್ರಿನಾ ಕೈಫ್ ಸಿಕ್ಕಾಪಟ್ಟೆ ಸಕ್ರಿಯ. ಸದಾ ಒಂದಲ್ಲೊಂದು ಫೋಟೋ, ವಿಡಿಯೋನ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡುವ ಕತ್ರಿನಾ ಕೈಫ್ ನಿನ್ನೆ ದಿವಂಗತ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ರವರ ಒಂದು ಫೋಟೋ ನ ಲೀಕ್ ಮಾಡಿದ್ದರು.

  ಜಿಮ್ ಒಂದರ ರಿಸೆಪ್ಷನ್ ನಲ್ಲಿ ನಟಿ ಜಾಹ್ನವಿ ಕಪೂರ್ ಕುಳಿತು, ಫೋನ್ ಅಟೆಂಡ್ ಮಾಡುತ್ತಿರುವ ಫೋಟೋ ಅದು. ಅದಕ್ಕೆ ''ಜಿಮ್ ನಲ್ಲಿ ಸುಂದರಿ ಜಾಹ್ನವಿ ರಿಸೆಪ್ಷನಿಸ್ಟ್ ಆಗಿದ್ದಾರೆ'' ಎಂಬ ಕ್ಯಾಪ್ಷನ್ ಕೊಟ್ಟಿದ್ದರು ನಟಿ ಕತ್ರಿನಾ ಕೈಫ್.

  ಹಾಗ್ನೋಡಿದ್ರೆ, ಜಾಹ್ನವಿ ಹಾಗೂ ಕತ್ರಿನಾ ಜಿಮ್ ಫ್ರೆಂಡ್ಸ್. ಇಬ್ಬರೂ ಒಂದೇ ಜಿಮ್ ನಲ್ಲಿ ಒಟ್ಟಿಗೆ ವರ್ಕೌಟ್ ಮಾಡ್ತಾರೆ. ಹಾಗಾದ್ರೆ, ಪ್ರತಿನಿತ್ಯ ಕತ್ರಿನಾ ಭೇಟಿ ಕೊಡುವ ಜಿಮ್ ಗೆ ಜಾಹ್ನವಿ ರಿಸೆಪ್ಷನಿಸ್ಟ್ ಆಗ್ಬಿಟ್ರಾ.?

  ಅಮ್ಮನ ನೆನಪಲ್ಲಿ ತಾಯಂದಿರ ದಿನ ಕಳೆದ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ಅಮ್ಮನ ನೆನಪಲ್ಲಿ ತಾಯಂದಿರ ದಿನ ಕಳೆದ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್

  ಖಂಡಿತ ಸಾಧ್ಯ ಇಲ್ಲ. ಹಾಗಾದ್ರೆ, ಕತ್ರಿನಾ ಮಾತಿನ ಮರ್ಮ ಏನು ಎಂಬುದು ಇನ್ನೂ ಗೊತ್ತಾಗಿಲ್ಲ. ಆದ್ರೆ, ನೀವಿಲ್ಲಿ ಗಮನಿಸಬೇಕಾದ ಮತ್ತೊಂದು ಅಂಶ ಏನು ಅಂದ್ರೆ, ಜಾಹ್ನವಿ ಕಪೂರ್ ಇದೀಗ 'ಧಡಕ್' ಚಿತ್ರದ ಶೂಟಿಂಗ್ ನಲ್ಲಿ ಬಿಜಿಯಾಗಿದ್ದಾರೆ.

  'ಧಡಕ್' ಚಿತ್ರದ ಮೇಕಿಂಗ್ ಸ್ಟಿಲ್ ಇದಾಗಿರಬಹುದಾ.? ಚಾನ್ಸಸ್ ಇದೆ. ಒಟ್ನಲಿ, ನಿನ್ನೆ ಏಕಾಏಕಿ ಕತ್ರಿನಾ ಕೈಫ್ ಇನ್ಸ್ಟಾಗ್ರಾಮ್ ನಲ್ಲಿ ಲೀಕ್ ಮಾಡಿದ ಈ ಫೋಟೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೆಂಡಿಂಗ್ ಆಗಿದೆ.

  English summary
  Katrina Kaif reveals Janhvi Kapoor is a new receptionist in Gym. Take a look at the picture.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X