For Quick Alerts
  ALLOW NOTIFICATIONS  
  For Daily Alerts

  ಅಭಿಮಾನಿಗಳಿಗೆ ಗುಡ್​ನ್ಯೂಸ್​: ಮೊದಲ ಬಾರಿಗೆ ಸ್ಕ್ರೀನ್​ ಶೇರ್​ ಮಾಡಿದ ' ವಿಕ್ಯಾಟ್​' ಜೋಡಿ!

  |

  ಬಾಲಿವುಡ್​ನ ಕ್ಯೂಟ್​ ಜೋಡಿ ವಿಕ್ಕಿ ಕೌಶಲ್​ ಹಾಗೂ ಕತ್ರಿನಾ ಕೈಫ್ ​ ಅಭಿಮಾನಿಗೆ ಗುಡ್​ನ್ಯೂಸ್​ವೊಂದು ಸಿಕ್ಕಿದ್ದು, ಸದ್ಯದಲ್ಲೇ ವಿಕ್ಯಾಟ್​​ ತೆರೆ ಮೇಲೆ ಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ಕತ್ರಿನಾ ಹಾಗೂ ವಿಕ್ಕಿ ಕೌಶಲ್ ​ ಜೊತೆಯಾಗಿ ನಟಿಸಬೇಕೆಂಬುದು ಅಭಿಮಾನಿಗಳ ಬಹು ದಿನಗಳ ಬಯಕೆಯಾಗಿತ್ತು. ಅಲ್ಲದೇ ಇದೇ ಮನವಿಯನ್ನು ಆಗಾಗ ಫ್ಯಾನ್ಸ್​​ ವಿಕ್ಕಿ ಕೌಶಲ್​ ಹಾಗೂ ಕತ್ರಿನಾ ಕೈಫ್​ ಜೋಡಿ ಮುಂದೆ ಇರಿಸುತ್ತಿದ್ದರು. ಇದೀಗ ಈ ಜೋಡಿ ಜೊತೆಯಾಗಿ ಸ್ಕ್ರೀನ್​ ಶೇರ್​ ಮಾಡುತ್ತಿರುವುದು ಪಕ್ಕಾ ಆಗಿದ್ದು, ಸಿನಿಮಾಗಾಗಿ ಅಲ್ಲ ಎನ್ನುವುದು ಕೂಡ ಸ್ಪಷ್ಟವಾಗಿದೆ.

  ನಟ ವಿಕ್ಕಿ ಕೌಶಲ್​ ಹಾಗೂ ಬಾಲಿವುಡ್​ನ ಸ್ಟಾರ್​ ನಟಿ ಕತ್ರಿನಾ ಕೈಫ್ ಜಾಹಿರಾತುವೊಂದರಲ್ಲಿ ಜೊತೆಯಾಗಿ ಕಾಣಿಸಿಕೊಳ್ಳಲಿದ್ದು, ಈ ಮೂಲಕ ಅಭಿಮಾನಿಗಳ ಆಸೆಯಂತೆ ವಿಕ್ಯಾಟ್​ ಜೋಡಿ ತೆರೆ ಮೇಲೆ ಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ವಿಕ್ಕಿ ಕೌಶಲ್​ ಹಾಗೂ ಕತ್ರಿನಾ ಜೊತೆಯಾಗಿರುವ ಜಾಹಿರಾತಿನ ಫೋಟೋಗಳು ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಜಾಹಿರಾತಿನ ಫೋಟೋದಲ್ಲಿ ಸಾಮಾನ್ಯ ಧರಿಸಿನಲ್ಲೂ ವಿಕ್ಯಾಟ್​ ಜೋಡಿ ಕ್ಯೂಟ್​ ಆಗಿ ಕಾಣಿಸಿಕೊಂಡಿದ್ದು, ಲಕ್ಷಾಂತರ ಅಭಿಮಾನಿಗಳು ಫೋಟೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  ಎರಡು ವರ್ಷಗಳ ಕಾಲ ಡೇಟಿಂಗ್​ನಲ್ಲಿದ್ದ ವಿಕ್ಕಿ ಕೌಶಲ್​ ಹಾಗೂ ಕತ್ರಿನಾ ಜೋಡಿ 2021 ಡಿಸೆಂಬರ್​ 9ರಂದು ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿರುವ ಸಿಕ್ಸ್​ ಸೆನ್ಸ್​​​ ಪೋರ್ಟ್​ ಬರ್ವಾರದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು. ಡೇಟಿಂಗ್ ಸಮಯಲ್ಲಿ ಬಹಳ ಸಿಕ್ರೇಟ್​ ಕಾಪಾಡಿಕೊಂಡಿದ್ದ ಈ ಜೋಡಿ ಕಾಫಿ ಕರಣ್​ ಕಾರ್ಯಕ್ರಮದಲ್ಲಿ ತಮ್ಮ ಸಂಬಂಧದ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದರು.

  ಸದ್ಯ ಕತ್ರಿನಾ ಕೈಫ್​ ಮೂರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕತ್ರಿನಾ ಕೈಫ್​, ಸಿದ್ಧಾಂತ್​ ಚತುರ್ವೇದಿ ಹಾಗೂ ಇಶಾನ್​ ಕಟ್ಟರ್​ ಜೊತೆಯಾಗಿ ನಟಿಸಿರುವ ಫೋನ್​ ಬೂತ್ ಚಿತ್ರ ತೆರೆ ಕಾಣಲು ಸಿದ್ಧವಾಗಿದ್ದು, ನವೆಂಬರ್​ 4, 2022ರಂದು ಚಿತ್ರ ರಿಲೀಸ್​ ಆಗಲಿದೆ. ಅಲ್ಲದೇ ಕತ್ರಿನಾ,​ ನಟ ವಿಜಯ್​ ಸೇತುಪತಿ ನಟನೆಯ ಮೆರಿ ಕ್ರಿಸ್​ಮಸ್​ ಹಾಗೂ ಬಾಲಿವುಡ್​ನ ಸಲ್ಮಾನ್ ಖಾನ್​ ನಟನೆಯ ಟೈಗರ್​-3 ಸಿನಿಮಾಗಳಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  ಇನ್ನು ವಿಕ್ಕಿ ಕೌಶಲ್​ ನಟನೆಯ ಗೋವಿಂದ ನಾಮ್​ ಮೇರಾ ಕೂಡ ಬಿಡುಗಡೆಗೆ ಸಜ್ಜಾಗುತ್ತಿದ್ದು, ಇನ್ನೂ ಹೆಸರಿಡದ ಎರಡು ಬಿಗ್​ ಬಜೆಟ್​ ಚಿತ್ರಗಳಿಗೆ ವಿಕ್ಕಿ ಒಪ್ಪಿಗೆ ನೀಡಿದ್ದಾರೆ. ಸದ್ಯದಲ್ಲೇ ವಿಕ್ಕಿ ಕೌಶಲ್​ ಮುಂದಿನ ಚಿತ್ರದ ಕೆಲಸಗಳು ಪ್ರಾರಂಭವಾಗಿದ್ದು, ಈ ಮಧ್ಯೆ ಪತ್ನಿ ಜೊತೆ ಜಾಹಿರಾತಿನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.

  English summary
  Vicky Kaushal and Katrina Kaif share the screen for the first time for collaborating for a TV commercial. Photos from ad shoot goes viral.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X