Don't Miss!
- Sports
ಗೆದ್ದ ಜಯ್ ಶಾ ಹಠ, ಪಾಕ್ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವಿಕ್ಕಿ ಕೌಶಲ್ ಹುಟ್ಟುಹಬ್ಬದಂದು ಪತ್ನಿ ಕತ್ರಿನಾ ಭಾವುಕ ಪೋಸ್ಟ್
ಬಾಲಿವುಡ್ ಸ್ಟಾರ್ ನಟ ವಿಕ್ಕಿ ಕೌಶಲ್‌ಗೆ ಇಂದು (ಮೇ 16) ಹುಟ್ಟುಹಬ್ಬದ ಸಂಭ್ರಮ. ಈ ಬಾರಿಯ ಹುಟ್ಟುಹಬ್ಬ ವಿಕ್ಕಿ ಕೌಶಲ್‌ಗೆ ಸ್ಪೆಷಲ್ ಆಗಿದ್ದು, ನಟಿ ಕತ್ರಿನಾ ಕೈಫ್ ಜೊತೆ ಮದುವೆಯಾದ ಬಳಿಕ ತಮ್ಮ ಮೊದಲ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಇಷ್ಟು ವರ್ಷ ಸಿಂಗಲ್ ಆಗಿ ಬರ್ತಡೇ ಸೆಲೆಬ್ರೇಷನ್ ಮಾಡಿಕೊಳ್ಳುತ್ತಿದ್ದ ನಟ ವಿಕ್ಕಿ ಕೌಶಲ್ ಈ ಬಾರಿ ಪತ್ನಿ ಕತ್ರಿನಾ ಕೈಫ್ ಜೊತೆ ಅದ್ಧೂರಿಯಾಗಿ ಬರ್ತ್‌ಡೇ ಸೆಲೆಬ್ರೆಷನ್ ಮಾಡಿಕೊಂಡಿದ್ದಾರೆ.
ಕತ್ರಿನಾ ಹಾಗೂ ವಿಕ್ಕಿ ಸದ್ಯಕ್ಕೆ ನ್ಯೂಯಾರ್ಕ್‌ನಲ್ಲಿದ್ದು, ಅಲ್ಲಿಯೇ ಅದ್ಧೂರಿಯಾಗಿ ಹುಟ್ಟುಹಬ್ಬ ಸೆಲೆಬ್ರೆಷನ್ ಮಾಡಿಕೊಂಡಿದ್ದಾರೆ. ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಪ್ರೀತಿಸಿ ಮದುವೆಯಾಗಿದ್ದಾರೆ. ಮೂರ್ನಾಲ್ಕು ವರ್ಷಗಳಿಂದ ಪ್ರೀತಿಯಲ್ಲಿದ್ದ ಈ ಜೋಡಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ತಮ್ಮ ಮದುವೆಯ ವಿಚಾರವನ್ನು ತುಂಬಾ ಗೌಪ್ಯವಾಗಿ ಇಟ್ಟಿದ್ದ ಈ ಜೋಡಿ ಬಳಿಕ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮದುವೆ ಪೋಟೊಗಳನ್ನು ಹರಿಬಿಡುವ ಮೂಲಕ ಮದುವೆಯ ವಿಚಾರವನ್ನು ಬಹಿರಂಗಗೊಳಿಸಿದ್ದರು.
'ಟೈಗರ್
3':
2023
ಈದ್
ಪ್ರಯುಕ್ತ
ತೆರೆಗೆ!
ಸದ್ಯ ಈ ಇಬ್ಬರು ನ್ಯೂರ್ಯಾರ್ಕ್‌ನ ಪ್ರವಾಸದಲ್ಲಿದ್ದು, ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಅದು ಅಲ್ಲದೆ ಇಂದು ವಿಕ್ಕಿ ಕೌಶಲ್ ಹುಟ್ಟುಹಬ್ಬವಿರುವುದರಿಂದ ಕತ್ರಿನಾ ಕೈಫ್ ಪತಿ ವಿಕ್ಕಿ ಕೌಶಲ್‌ಗೆ ಏನು ಊಡುಗೂರೆ ಕೊಡಬಹುದು ಎಂಬ ಕುತೂಹಲ ಅಭಿಮಾನಿಗಳಲ್ಲಿದೆ. ಇದೆ.
ಕತ್ರಿನಾ
ಹಾಗೂ
ವಿಕ್ಕಿ
ಕೌಶಲ್
ಪ್ರೇಮಗಳ
ದಿನ
ಆಚರಣೆ
ಮಾಡಿಕೊಳ್ಳಲ್ವಂತೆ:
ಅಡ್ಡ
ಬಂದಿದ್ದು
ಸಲ್ಮಾನ್
ಖಾನ್
ಸದ್ಯಕ್ಕೆ ಕತ್ರಿನಾ ಕೈಫ್ ನ್ಯೂರ್ಯಾಕ್‌ನಲ್ಲಿ ತೆಗೆಸಿಕೊಂಡ ಪೋಟೊವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದು, 'ನನ್ನ ಪ್ರೀತಿಯ ಪತಿ, ನಿಮ್ಮ ಬಗ್ಗೆ ಸರಳವಾಗಿ ಹೇಳಬೇಕೆಂದರೆ, ನೀವು ನನ್ನ ಜೀವನದಲ್ಲಿ ಬಂದ ಮೇಲೆ ಎಲ್ಲವನ್ನೂ ಉತ್ತಮಗೊಳಿಸಿದ್ದೀರಿ,' ಎಂದು ಪತಿಯ ಬಗ್ಗೆ ಭಾವುಕವಾಗಿ ಬರೆದುಕೊಂಡಿದ್ದಾರೆ.
ನಟ ವಿಕ್ಕಿ ಕೌಶಲ್ 2012 ರಲ್ಲಿ ಬಾಲಿವುಡ್‌ಗೆ ಪಾದರ್ಪಾಣೆ ಮಾಡಿದರು. 2015 ರಲ್ಲಿ 'ಮಸಾಣ್' ಚಿತ್ರ ಮೂಲಕ ಬಾಲಿವುಡ್ ನಲ್ಲಿ ಬೇಡಿಕೆಯ ನಟರಾಗಿ ಗುರುತಿಸಿಕೊಂಡರು. 'ಮಸಾಣ್' ಚಿತ್ರದಲ್ಲಿನ ವಿಕ್ಕಿ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಯಿತು. ಆನಂತರ 2019 ರಲ್ಲಿ 'ಉರಿ: ದಿ ಸರ್ಜಿಕಲ್ ಸ್ಟ್ರೈಕ್' ಸಿನಿಮಾ, ವಿಕ್ಕಿ ವೃತ್ತಿ ಬದುಕಿಗೆ ಒಳ್ಳೆಯ ಇಮೇಜ್ ನೀಡಿತು. ಸದ್ಯ ಕತ್ರಿನಾ ಜೊತೆ ಕಳೆದ ವರ್ಷ ಮದುವೆಯಾದ ಬಳಿಕ ವಿಕ್ಕಿಗೆ ಮತ್ತಷ್ಟು ಸಿನಿಮಾದಲ್ಲಿ ಚಾರ್ಮ್ ಸಿಕ್ಕಿದ್ದು, ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ಕತ್ರಿನಾ ಕೈಫ್‌ಗೂ ಕೂಡ ಹಲವು ಪ್ರಾಜೆಕ್ಟ್‌ಗಳಲ್ಲಿ ವರ್ಕ್ ಮಾಡುತ್ತಿದ್ದು, ಸಲ್ಮಾನ್ ಖಾನ್ ಅಭಿನಯದ 'ಟೈಗರ್ 3' ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಸದ್ಯ ಇಂದು ವಿಕ್ಕಿ ಕೌಶಲ್ ಹುಟ್ಟುಹಬ್ಬವನ್ನು ಪತ್ನಿ ಕತ್ರಿನಾ ನ್ಯೂರ್ಯಾರ್ಕ್‌ನಲ್ಲಿ ಸೆಲೆಬ್ರೆಟ್ ಮಾಡಿದ್ದು, ಪ್ರೀತಿಯ ಪತಿಗೆ ಎಷ್ಟು ದುಬಾರಿಯ ಗಿಫ್ಟ್ ನೀಡುತ್ತಾರೆ ಎಂಬ ಕುತೂಹಲ ಅವರ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಒಟ್ಟಿನಲ್ಲಿ ಈ ಬಾರಿಯ ಹುಟ್ಟುಹಬ್ಬ ವಿಕ್ಕಿ ಕೌಶಲ್‌ಗೆ ಸ್ಪೆಷಲ್ ಅಗಿದ್ದು, ಅಭಿಮಾನಿಗಳು ಹಾಗೂ ಸಿನಿ ಕಲಾವಿದರು ಶುಭಾಶಯವನ್ನು ಸಾಮಾಜಿಕ ಜಾಲತಾಣದ ಮೂಲಕ ಕೋರಿದ್ದಾರೆ.