twitter
    For Quick Alerts
    ALLOW NOTIFICATIONS  
    For Daily Alerts

    ಹಿಂದಿ ಬಾಕ್ಸಾಫೀಸ್ ಧೂಳೀಪಟ, 400 ಕೋಟಿ ಗಡಿಯತ್ತ 'ಕೆಜಿಎಫ್‌ 2'

    |

    ದಕ್ಷಿಣ ಭಾರತದ ಸಿನಿಮಾಗಳನ್ನು ಕಡೆಗಣಿಸುತ್ತಿದ್ದ ಬಾಲಿವುಡ್‌ ಸ್ಟಾರ್‌ಗಳಿಗೆ ಈಗ ಅದೇ ದಕ್ಷಿಣ ಭಾರತದ ಸಿನಿಮಾಗಳು ಭಾರೀ ಟಕ್ಕರ್‌ ಕೊಡುತ್ತಿದೆ. ಹಿಂದಿ ಸಿನಿಮಾ ಬಿಟ್ಟರೆ ಬೇರೆ ಭಾಷೆ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಕಲೆಕ್ಷನ್ ಮಾಡುವುದಕ್ಕೆ ಸಾಧ್ಯವೇ ಇಲ್ಲ ಎಂದು ಹೇಳುತ್ತಿದ್ದ ಬಾಯಿಗಳಿಗೆ ಇಂದು ಬೀಗ ಬಿದ್ದಂತಾಗಿದೆ.

    ಹೌದು, ಆಗೊಂದು ಕಾಲ ಇತ್ತು. ಕೇವಲ ಬಾಲಿವುಡ್‌ ಸ್ಟಾರ್‌ಗಳೇ ಭಾರತೀಯ ಚಿತ್ರರಂಗದ ಸ್ಟಾರ್‌ ನಾಯಕರು ಅಂತ ಹೇಳಲಾಗುತ್ತಿತ್ತು. ಹಾಗೇ ಹೇಳಿಕೊಂಡು ಬರುತ್ತಿದ್ದರು. ಆದರೆ. ಈಗ ಬಾಲಿವುಡ್‌ ಸಿನಿಮಾಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂಬಾತಾಗಿ ಬಿಟ್ಟಿದೆ. ಇತ್ತೀಚಿನ ವರ್ಷಗಳಲ್ಲಿ ಬಂದಂತಹ ಪ್ಯಾನ್‌ ಇಂಡಿಯಾ ಸಿನಿಮಾಗಳು ಬಾಲಿವುಡ್‌ ಅಂಗಳದಲ್ಲಿ ಅಬ್ಬರಿಸಿದ್ದು, ಬಾಲಿವುಡ್ ಬಿಗ್‌ ಸ್ಟಾರ್‌ಗಳೇ ಸುಮ್ಮನೇ ಇರುವಂತೆ ಮಾಡಿಬಿಟ್ಟಿವೆ.

    'KGF 2' 14ನೇ ದಿನವೂ ಅದ್ಭುತ ಕಲೆಕ್ಷನ್? ಅತೀ ಹೆಚ್ಚು ಗಳಿಕೆ ಕಂಡ 3ನೇ ಬಾಲಿವುಡ್ ಸಿನಿಮಾ! 'KGF 2' 14ನೇ ದಿನವೂ ಅದ್ಭುತ ಕಲೆಕ್ಷನ್? ಅತೀ ಹೆಚ್ಚು ಗಳಿಕೆ ಕಂಡ 3ನೇ ಬಾಲಿವುಡ್ ಸಿನಿಮಾ!

    ಹಿಂದಿ ಬಿಟ್ಟರೆ ಬೇರೆ ಭಾಷೆಯ ಸಿನಿಮಾಗಳು ಪ್ಯಾನ್‌ ಇಂಡಿಯಾ ಸಿನಿಮಾ ಎಂದು ಬಾಲಿವುಡ್‌ ಮಂದಿ ಹೇಳಿಕೊಂಡು ಬರುತ್ತಿದ್ದರು. ಹಿಂದಿ ಸಿನಿಮಾಗಳಿಗೆ ಬೇರೆ ಭಾಷೆಯ ಸಿನಿಮಾಗಳು ಹತ್ತಿರ ಬರಲು ಕೂಡ ಸಾಧ್ಯವಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಆದರೆ ಇಂದಿನ ಪರಿಸ್ಥಿತಿ ಬದಲಾಗಿದೆ. ಈಗ ಹಿಂದಿ ಸಿನಿಮಾಗಳೇ ಮೂಲೆಗುಂಪಾಗಿದ್ದು, ಬೇರೆ ಭಾಷೆಯ ಸಿನಿಮಾಗಳು ಬಾಲಿವುಡ್‌ನಲ್ಲಿ ರಾರಾಜಿಸುತ್ತಿದೆ. ಅದರಲ್ಲಿ 'ಕೆಜಿಎಫ್‌ 2' ಅಂತೂ ಅಬ್ಬರಿಸುತ್ತಿದ್ದು, ಇನ್ನು ತನ್ನ ಕಲೆಕ್ಷನ್‌ಗೆ ಬ್ರೇಕ್ ಕೊಟ್ಟೇ ಇಲ್ಲ.

    15ನೇ ದಿನದಲ್ಲೂ ನಿಲ್ಲದ 'KGF 2' ಓಟ: ಇದೇ ವೀಕೆಂಡ್‌ನಲ್ಲಿ ದಾಟುತ್ತಾ 1000 ಕೋಟಿ? 15ನೇ ದಿನದಲ್ಲೂ ನಿಲ್ಲದ 'KGF 2' ಓಟ: ಇದೇ ವೀಕೆಂಡ್‌ನಲ್ಲಿ ದಾಟುತ್ತಾ 1000 ಕೋಟಿ?

     ದಕ್ಷಿಣ ಸಿನಿಮಾಗಳ ಮುಂದೆ ಬಿಗ್‌ ಸ್ಟಾರ್‌ಗಳ ಚಿತ್ರಗಳು ಗಾಯಬ್

    ದಕ್ಷಿಣ ಸಿನಿಮಾಗಳ ಮುಂದೆ ಬಿಗ್‌ ಸ್ಟಾರ್‌ಗಳ ಚಿತ್ರಗಳು ಗಾಯಬ್

    ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಭಾರತದ ಸಿನಿಮಾಗಳ ಅಬ್ಬರ ಆರ್ಭಟ ಹೆಚ್ಚಾಗಿದೆ. ಏಕೆಂದರೆ ಸಿನಿಮಾಗಳನ್ನು ಬಾಲಿವುಡ್ ಸಿನಿಮಾಗಳಿಗಿಂತಲೂ ಮೀರಿ ನಿರ್ಮಾಣ ಮಾಡಲಾಗುತ್ತಿದೆ. ಆಕ್ಷನ್ ಸ್ವಿಕ್ಸೇನ್‌ಗಳ ಪ್ರಮಾಣವನ್ನು ಹೆಚ್ಚಳ ಮಾಡಲಾಗಿದೆ. ದೃಶ್ಯ ವೈಭವ ಅದ್ದೂರಿಯಾಗಿ ಇರುತ್ತದೆ. ಅಲ್ಲದೆ ಪಂಚ ಭಾಷೆಯಲ್ಲಿ ಸಿನಿಮಾ ರಿಲೀಸ್‌ ಆಗುವುದರಿಂದ ಸಿನಿಮಾದ ಮೇಲಿನ ನಿರೀಕ್ಷೆಯೂ ಹೆಚ್ಚಿರುತ್ತದೆ. ಹೀಗಾಗಿ ರಾಜಮೌಳಿ, ಪ್ರಶಾಂತ್‌ ನೀಲ್‌ ನಂತಹ ನಿರ್ದೇಶಕರು ಹೆಚ್ಚಿನ ಶ್ರಮ ವಹಿಸಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. 'ಬಾಹುಬಲಿ', 'ಬಾಹುಬಲಿ 2', 'ಪುಷ್ಪ', 'RRR', ಈಗ 'ಕೆಜಿಎಫ್‌ 2' ಹಿಂದಿ ವರ್ಷನ್‌ನಲ್ಲೂ ಕೂಡ ನಿಲ್ಲದೆ ತನ್ನ ಓಟ ಮುಂದುವರೆಸಿದೆ. ಇದರಿಂದಾಗಿ ಬಾಲಿವುಡ್‌ನ ಬಿಗ್‌ ಸ್ಟಾರ್‌ಗಳ ಮೂವಿಗಳೇ ಹಿಂದಕ್ಕೆ ಸರಿಯುವಂತಾಗಿದೆ.

     'ಕೆಜಿಎಫ್‌ 2' ಅಬ್ಬರಕ್ಕೆ 'ದಂಗಲ್‌' ದಾಖಲೆ ದಿಕ್ಕಾಪಾಲು

    'ಕೆಜಿಎಫ್‌ 2' ಅಬ್ಬರಕ್ಕೆ 'ದಂಗಲ್‌' ದಾಖಲೆ ದಿಕ್ಕಾಪಾಲು

    'ಕೆಜಿಎಫ್‌ 2' ಸಿನಿಮಾ ಕಳೆದ ಮೂರು ವಾರಗಳಿಂದ ಕಲೆಕ್ಷನ್ ಪ್ರಮಾಣವನ್ನು ಎಲ್ಲೂ ಕಡಿಮೆ ಮಾಡಿಕೊಳ್ಳದೇ ಓಡುತ್ತಿದೆ. ಈಗಲೂ ಸಹ ಜನರು ಥಿಯೇಟರ್‌ಗೆ ಬಂದು ಸಿನಿಮಾವನ್ನು ನೋಡುತ್ತಿದ್ದಾರೆ. ಅದರಲ್ಲೂ ಹಿಂದಿ ವರ್ಷನ್‌ ರಿಲೀಸ್ ಆಗಿರುವ 'ಕೆಜಿಎಫ್‌ 2' ಆಮಿರ್‌ ಖಾನ್‌ ನಟಿಸಿದ್ದ 'ದಂಗಲ್‌' ಸಿನಿಮಾ ದಾಖಲೆಯನ್ನು ಮುರಿದು ಮುನ್ನುಗುತ್ತಿದೆ. ಬಾಲಿವುಡ್‌ ಬಾಕ್ಸಾಫೀಸ್‌ನಲ್ಲಿ ಆಮಿರ್ ಖಾನ್ ನಟನೆಯ 'ದಂಗಲ್' ಸಿನಿಮಾ ಹಿಂದಿ ಚಿತ್ರರಂಗದಲ್ಲಿಯೇ ಭಾರೀ ಮೊತ್ತದ ಕಲೆಕ್ಷನ್ ಮಾಡಿ ಎರಡನೇ ಸ್ಥಾನದಲ್ಲಿತ್ತು. ಈಗ ಸ್ಥಾನವನ್ನು 'ಕೆಜಿಎಫ್‌ 2' ಆವರಿಸಿಕೊಂಡಿದೆ. 'ದಂಗಲ್' ಕಲೆಕ್ಷನ್‌ ಬ್ರೇಕ್ ಮಾಡಿ 400 ಕೋಟಿ ರೂ ಕಲೆಕ್ಷನ್‌ ಕಡೆ ದಾಪುಗಾಲು ಇಡುತ್ತಿದೆ. ಸದ್ಯ ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳಲ್ಲಿ 'ಕೆಜಿಎಫ್‌2' ಎರಡನೇ ಸ್ಥಾನದಲ್ಲಿದೆ.

     400 ಕೋಟಿ ಸಮೀಪಿಸುತ್ತಿರುವ 'ಕೆಜಿಎಫ್‌ 2' ಗಳಿಕೆ

    400 ಕೋಟಿ ಸಮೀಪಿಸುತ್ತಿರುವ 'ಕೆಜಿಎಫ್‌ 2' ಗಳಿಕೆ

    ಈ ಹಿಂದೆ ರಾಜಮೌಳಿ ನಿರ್ದೇಶನದ 'ಬಾಹುಬಲಿ 2' ಚಿತ್ರ ಕೂಡ ಭರ್ಜರಿ ಕಲೆಕ್ಷನ್‌ ಮಾಡಿಕೊಂಡಿತ್ತು, ಬರೋಬ್ಬರಿ 511.30 ಕೋಟಿ ರೂ ಸಂಪಾದಿಸುವ ಮೂಲಕ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ನಿರ್ಮಿಸಿತ್ತು. ಇದು ಕೂಡ ದಕ್ಷಿಣ ಭಾರತದ ಸಿನಿಮಾವಾಗಿದ್ದು, ಹಿಂದಿ ಚಲನಚಿತ್ರೋದ್ಯಮದಲ್ಲಿ 'ಬಾಹುಬಲಿ 2' 511 ಕೋಟಿ ಗಳಿಕೆ ಮಾಡುವ ಮೂಲಕ ಮೊದಲ ಸ್ಥಾನ ಪಡೆದುಕೊಂಡಿತ್ತು. ಆದಾದ ಬಳಿಕ ಯಾವ ಬಾಲಿವುಡ್‌ ಸಿನಿಮಾಗಳು 'ಬಾಹುಬಲಿ 2' ದಾಖಲೆಯನ್ನು ಮುರಿಯಲು ಸಾಧ್ಯವಾಗಿರಲಿಲ್ಲ. ಈಗ ಇನ್ನೊಂದು ದಕ್ಷಿಣ ಭಾರತದ ಸಿನಿಮಾದ 'ಕೆಜಿಎಫ್‌ 2', 'ಬಾಹುಬಲಿ 2' ಚಿತ್ರದ ದಾಖಲೆ ಮುರಿಯುವ ಎಲ್ಲಾ ಸಾಧ್ಯತೆಗಳು ಇದೆ. ಈಗಾಗಲೇ 400 ಕೋಟಿ ಸಮೀಪ ಬಂದಿರುವ 'ಕೆಜಿಎಫ್‌ 2' ಕಲೆಕ್ಷನ್‌ ಇನ್ನೊಂದು ವಾರದಲ್ಲಿ 500 ಕೋಟಿ ದಾಟುವ ಎಲ್ಲಾ ಲಕ್ಷಣಗಳು ಇದೆ. ಒಂದು ವೇಳೆ ಹಾಗಾದರೆ, ಮತ್ತೆ ದಕ್ಷಿಣ ಭಾರತದ ಸಿನಿಮಾವೇ ಭಾರತೀಯ ಚಿತ್ರರಂಗದಲ್ಲಿ ಹೆಚ್ಚು ಗಳಿಕೆ ಕಂಡ ಸಿನಿಮಾವಾಗಿ ಉಳಿಯಲಿದೆ.

     ಕಲೆಕ್ಷನ್ ಇಲ್ಲದೆ ಖಾಲಿ ಹೊಡೆಯುತ್ತಿರೋ 'ರನ್ ವೇ 34', 'ಹೀರೊಪಂತಿ 2'

    ಕಲೆಕ್ಷನ್ ಇಲ್ಲದೆ ಖಾಲಿ ಹೊಡೆಯುತ್ತಿರೋ 'ರನ್ ವೇ 34', 'ಹೀರೊಪಂತಿ 2'

    ಏಪ್ರಿಲ್ 14 ರಂದು ರಿಲೀಸ್ ಆದ 'ಕೆಜಿಎಫ್‌ 2' ಚಿತ್ರದ ಆಟ ಇನ್ನು ನಿಂತಿಲ್ಲ. ಮೂರು ವಾರಗಳು ಕಳೆದರು ಬೇರೆ ಸಿನಿಮಾಗಳು ಬರಲು ಬಿಡದೇ ಥಿಯೇಟರ್‌ಗಳನ್ನು ಆವರಿಸಿಕೊಂಡಿದೆ. ಇದರಿಂದಾಗಿ ಬಾಲಿವುಡ್‌ನ ಹಲವು ಸ್ಟಾರ್‌ ನಿರ್ದೇಶಕರು ತಮ್ಮ ಸಿನಿಮಾಗಳನ್ನು ಪೋಸ್ಟ್ ಪೋನ್ ಮಾಡಿಕೊಂಡಿದ್ದಾರೆ. ಇನ್ನು ಈಗಾಗಲೇ ರಿಲೀಸ್‌ ಮಾಡಿರುವ 'ಹೀರೊಪಂತಿ 2', 'ರನ್‌ವೇ 34' ಚಿತ್ರಗಳು ಕಲೆಕ್ಷನ್‌ ಇಲ್ಲದೆ ಥಿಯೇಟರ್‌ಗಳಿಗೆ ಜನ ಬರದೇ ಖಾಲಿ ಹೊಡೆಯುತ್ತಿವೆ. ಆ ಮಟ್ಟಿಗೆ 'ಕೆಜಿಎಫ್‌ 2' ಹವಾ ಕ್ರಿಯೇಟ್‌ ಆಗಿದೆ. ದಕ್ಷಿಣ ಭಾರತದ ಸಿನಿಮಾಗಳನ್ನು ಕಡೆಗಣಿಸುತ್ತಿದ್ದ ಬಾಲಿವುಡ್‌ ಮಂದಿಗೆ ಪ್ಲಾಪ್‌ ಸಿನಿಮಾಗಳ ಬಿಸಿ ಮುಟ್ಟಿಸಿದೆ.

    English summary
    KGF Chapter 2 box office collection (Hindi) : Yash's KGF 2 film is all set to cross Rs 400 crore mark. KGF Chapter 2 will become only the second Hindi film to achieve this feat after Baahubali 2.
    Friday, May 6, 2022, 16:17
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X