Don't Miss!
- Sports
ಕೆಎಲ್ ರಾಹುಲ್ಗೆ ಐಷಾರಾಮಿ ಕಾರು ಗಿಫ್ಟ್ ನೀಡಿದ ವಿರಾಟ್ ಕೊಹ್ಲಿ; ಧೋನಿಯಿಂದಲೂ ದುಬಾರಿ ಉಡುಗೊರೆ!
- News
ಹರಿಯಾಣ ಘಟಕ ವಿಸರ್ಜಿಸಿದ ಆಮ್ ಆದ್ಮಿ ಪಕ್ಷ
- Lifestyle
ಆರೋಗ್ಯಕರ ಸ್ತನದ ಲಕ್ಷಣಗಳೇನು? ಸ್ತನಗಳು ಹೇಗಿದ್ದರೆ ನಿರ್ಲಕ್ಷ್ಯ ಮಾಡಲೇಬಾರದು?
- Technology
WhatsApp: ವಾಟ್ಸಾಪ್ ಮ್ಯಾಕ್ಒಎಸ್ MacOS ಆ್ಯಪ್ ಬಿಡುಗಡೆ! ಇದನ್ನು ಬಳಸುವುದು ಹೇಗೆ?
- Finance
Budget 2023: ಹಲ್ವಾ ಸಮಾರಂಭ ಎಂದರೇನು, ಪ್ರಾಮುಖ್ಯತೆಯೇನು?
- Automobiles
ಬೊಲೆರೊ ನಿಯೋ ಲಿಮಿಟೆಡ್ ಎಡಿಷನ್ ಕುರಿತ ಟಾಪ್ ವಿಷಯಗಳಿವು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕೆಎಲ್ ರಾಹುಲ್-ಅಥಿಯಾ ಮದುವೆಗೆ ಬಂದವು ದುಬಾರಿ ಉಡುಗೊರೆ, ಕೊಹ್ಲಿ, ಸಲ್ಮಾನ್ ಖಾನ್ ಕೊಟ್ಟಿದ್ದೇನು?
ಕ್ರಿಕೆಟಿಗ ಕೆ.ಎಲ್.ರಾಹುಲ್ ಹಾಗೂ ನಟಿ ಅಥಿಯಾ ಶೆಟ್ಟಿ ಎರಡು ದಿನ ಹಿಂದೆಯಷ್ಟೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಬ್ಬರೂ ಮುಂಬೈನ ಖಂಡಾಲಾನಲ್ಲಿನ ಸುನಿಲ್ ಶೆಟ್ಟಿಯ ಫಾರ್ಮ್ ಹೌಸ್‌ನಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ದಾರೆ.
ಕ್ರಿಕೆಟ್ ಹಾಗೂ ಬಾಲಿವುಡ್‌ನ ಈ ಸಮಾಗಮಕ್ಕೆ ಎರಡೂ ಉದ್ಯಮಗಳ ಖ್ಯಾತನಾಮರು ಆಗಮಿಸಿ ನವ ವಿವಾಹಿತರಿಗೆ ಹರಿಸಿದ್ದಾರೆ. ಸಲ್ಮಾನ್ ಖಾನ್, ಕ್ರಿಕೆಟಿಗ ವಿರಾಟ್ ಕೊಹ್ಲಿ, ಟೈಗರ್ ಶ್ರಾಫ್, ಕರಣ್ ಜೋಹರ್ ಸೇರಿದಂತೆ ಇನ್ನೂ ಹಲವು ಖ್ಯಾತನಾಮರು ಕೆ.ಎಲ್.ರಾಹುಲ್ ಹಾಗೂ ಅಥಿಯಾ ಶೆಟ್ಟಿಯ ವಿವಾಹಕ್ಕೆ ಆಗಮಿಸಿದ್ದರು. ಮಾತ್ರವೇ ಅಲ್ಲದೆ ಐಶಾರಾಮಿ ಉಡುಗೊರೆಗಳನ್ನು ಸಹ ನೀಡಿದ್ದಾರೆ.
ಕ್ರಿಕೆಟ್
ತಂಡದಲ್ಲಿ
ದಲಿತರಿಗೆ
ಸ್ಥಾನವೇ
ಇಲ್ಲ,
ಅಲ್ಲಿಯೂ
ಮೀಸಲಾತಿ
ಬೇಕು:
ಚೇತನ್
ಅಹಿಂಸ
ಕೆ.ಎಲ್.ರಾಹುಲ್-ಅಥಿಯಾ ಶೆಟ್ಟಿ ಅವರುಗಳು ಐಶಾರಾಮಿ ಕಾರು, ಭಾರಿ ದುಬಾರಿ ವಾಚ್‌ಗಳು, ಅಪಾರ್ಟ್‌ಮೆಂಟ್‌ಗಳು ಮದುವೆಯ ಉಡುಗೊರೆಯಾಗಿ ಬಂದಿವೆ. ಅದರಲ್ಲಿಯೂ ಅಥಿಯಾ ಶೆಟ್ಟಿಯ ತಂದೆ ಸುನಿಲ್ ಶೆಟ್ಟಿಗೆ ಆಪ್ತ ಗೆಳೆಯರಾಗಿರುವ ಸಲ್ಮಾನ್ ಖಾನ್ ಭಾರಿ ದುಬಾರಿ ಉಡುಗೊರೆಯನ್ನೇ ವಧುವಿಗೆ ನೀಡಿದ್ದಾರೆ.
ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ನಟ ಸಲ್ಮಾನ್ ಖಾನ್, ವಧು ಅಥಿಯಾ ಶೆಟ್ಟಿಗೆ 1.64 ಕೋಟಿ ಬೆಲೆಯ ಆಡಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರಂತೆ. ಇನ್ನು ಕೆ.ಎಲ್.ರಾಹುಲ್‌ನ ಆಪ್ತ ಗೆಳೆಯ ವಿರಾಟ್ ಕೊಹ್ಲಿ, 2.17 ಕೋಟಿ ಬೆಲೆಯ ಬಿಎಂಡಬ್ಲು ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.
ಅಥಿಯಾ ಶೆಟ್ಟಿಯ ಆಪ್ತ ಗೆಳೆಯ ನಟ ಅರ್ಜುನ್ ಕಪೂರ್, ಅಥಿಯಾಗೆ 1.50 ಕೋಟಿ ಬೆಲೆಯ ವಜ್ರದ ಆಭರಣ ನೀಡಿದ್ದಾರೆ. ಇನ್ನು ನಟ ಟೈಗರ್ ಶ್ರಾಫ್ 30 ಲಕ್ಷ ಬೆಲೆಯ ದುಬಾರಿ ಷೋಪರ್ಡ್ ವಾಚ್ ಅನ್ನು ವಧು-ವರರಿಬ್ಬರಿಗೂ ನೀಡಿದ್ದಾರೆ. ಇನ್ನು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 80 ಲಕ್ಷ ಬೆಲೆಯ ಕವಾಸಕಿ ನಿಂಜಾ ಬೈಕ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.
ಇನ್ನು ಅಥಿಯಾ ಶೆಟ್ಟಿಯ ತಂದೆ, ಕೆ.ಎಲ್.ರಾಹುಲ್‌ರ ಮಾವ ಸುನಿಲ್ ಶೆಟ್ಟಿ 50 ಕೋಟಿ ಮೌಲ್ಯದ ಹೊಸ ಅಪಾರ್ಟ್ ಮೆಂಟ್ ಒಂದನ್ನು ಅಳಿಯನಿಗೆ ಉಡುಗೊರೆಯಾಗಿ ನೀಡಿದ್ದಾರೆ.
ಕೆ.ಎಲ್.ರಾಹುಲ್ ಹಾಗೂ ಅಥಿಯಾ ಶೆಟ್ಟಿಯ ಮದುವೆ ಇದೀಗ ಮುಗಿದಿದ್ದು ಕೆಲವೇ ದಿನಗಳಲ್ಲಿ ಮುಂಬೈನ ಐಶಾರಾಮಿ ಹೋಟೆಲ್‌ನಲ್ಲಿ ರಿಸೆಪ್ಷನ್ ನಡೆಯಲಿದೆ. ಆ ಬಳಿಕ ಬೆಂಗಳೂರಿನಲ್ಲಿಯೂ ರಿಸೆಪ್ಷನ್ ನಡೆಯಲಿದೆ.