For Quick Alerts
  ALLOW NOTIFICATIONS  
  For Daily Alerts

  ಕೆ.ಎಲ್.ರಾಹುಲ್ ಜೊತೆ ಜರ್ಮನಿಗೆ ಹಾರಿದ ಆತಿಯಾ ಶೆಟ್ಟಿ

  |

  ಕ್ರಿಕೆಟ್ ಹಾಗೂ ಬಾಲಿವುಡ್‌ಗೆ ಬಹಳ ನಿಕಟ ಸಂಬಂಧ. ಕ್ರಿಕೆಟ್ ಆಟಗಾರರು ಸಿನಿಮಾ ತಾರೆಯರನ್ನು ಮದುವೆಯಾಗುವ ಸಂಪ್ರದಾಯ ದಶಕಗಳಿಂದಲೂ ಚಾಲ್ತಿಯಲ್ಲಿದೆ.

  ಈಗಲೂ ಅದು ಹಾಗೆಯೇ ಮುಂದುವರೆದಿದೆ. ಹಲವಾರು ಕ್ರಿಕೆಟಿಗರು ಸಿನಿಮಾ ನಾಯಕಿಯರನ್ನು ವಿವಾಹವಾಗಿದ್ದಾರೆ. ಕ್ರಿಕೆಟ್ ಹಾಗೂ ಸಿನಿಮಾ ಉದ್ಯಮವೆರಡು ಭಾರತದ ಶ್ರೀಮಂತ ಹಾಗೂ ಗ್ಲಾಮರಸ್ ಉದ್ಯಮವಾಗಿದ್ದು ಎರಡಕ್ಕೂ ಬಹುದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ.

  ಭಾರತ ಕ್ರಿಕೆಟ್ ತಂಡ ಬೆಂಬಲಿಸಲು ಬಂದ ಕಿಚ್ಚ ಸುದೀಪ್ ಭಾರತ ಕ್ರಿಕೆಟ್ ತಂಡ ಬೆಂಬಲಿಸಲು ಬಂದ ಕಿಚ್ಚ ಸುದೀಪ್

  ಈಗಿನ ಹಲವು ಕ್ರಿಕೆಟಿಗರು ಸಿನಿಮಾ ನಟಿಯರನ್ನು ವಿವಾಹವಾಗಿದ್ದಾರೆ. ಭಾರತದ ತಂಡದ ಪ್ರಮುಖ ಬ್ಯಾಟ್ಸ್‌ಮನ್, ಕನ್ನಡಿಗ ಕೆ.ಎಲ್.ರಾಹುಲ್ ಸಹ ಸಿನಿಮಾ ನಟಿಯ ಪ್ರೀತಿಯಲ್ಲಿ ಬಿದ್ದಿದ್ದು ಆದಷ್ಟು ಶೀಘ್ರದಲ್ಲಿ ಇವರಿಬ್ಬರು ವಿವಾಹವಾಗಲಿದ್ದಾರೆ. ಆದರೆ ಇದೀಗ ಹಠಾತ್ತನೇ ಈ ಜೋಡಿ ಜರ್ಮನಿಗೆ ಹಾರಿದೆ.

  ಜಾಲಿ ಪ್ರವಾಸಕ್ಕೆ ಹೋಗುತ್ತಿಲ್ಲ ರಾಹುಲ್-ಆತಿಯಾ

  ಜಾಲಿ ಪ್ರವಾಸಕ್ಕೆ ಹೋಗುತ್ತಿಲ್ಲ ರಾಹುಲ್-ಆತಿಯಾ

  ಕ್ರಿಕೆಟಿಗ ಕೆ.ಎಲ್.ರಾಹುಲ್ ಹಾಗೂ ಆಥಿಯಾ ಶೆಟ್ಟಿ ಇಬ್ಬರೂ ಮುಂಬೈನ ವಿಮಾನ ನಿಲ್ದಾಣದಲ್ಲಿ ಪಾಪರಾಟ್ಜಿಗಳಿಗೆ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಜರ್ಮನಿಗೆ ಒಟ್ಟಿಗೆ ತೆರಳಿದ್ದಾರೆ. ಆದರೆ ಇದು ಯಾವುದೇ ಮೋಜಿನ ಪ್ರವಾಸ ಅಲ್ಲ ಬದಲಿಗೆ. ಜರ್ಮನಿಯಲ್ಲಿ ಕೆ.ಎಲ್.ರಾಹುಲ್ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ.

  ಜರ್ಮನಿಯಲ್ಲಿ ಒಂದು ತಿಂಗಳ ತಂಗಲಿದ್ದಾರೆ

  ಜರ್ಮನಿಯಲ್ಲಿ ಒಂದು ತಿಂಗಳ ತಂಗಲಿದ್ದಾರೆ

  ಕ್ರಿಕೆಟಿಗ ಕೆ.ಎಲ್.ರಾಹುಲ್ ಗಾಯಗೊಂಡಿದ್ದು, ಜರ್ಮನಿಯಲ್ಲಿ ಅವರು ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದಾರೆ. ಸುಮಾರು ಒಂದು ತಿಂಗಳು ಕೆ.ಎಲ್.ರಾಹುಲ್ ಜರ್ಮನಿಯಲ್ಲಿರಲಿದ್ದು, ಆತಿಯಾ ಶೆಟ್ಟಿ ಸಹ ತಮ್ಮ ಪ್ರಿಯಕರನ ಜೊತೆ ಅಲ್ಲಿಯೇ ವಾಸ್ತವ್ಯ ಹೂಡಿ ಕೆ.ಎಲ್.ರಾಹುಲ್ ಅನ್ನು ಉಪಚಾರ ಮಾಡುವವರಿದ್ದಾರೆ.

  ಫ್ಲ್ಯಾಟ್ ಖರೀದಿಸಿರುವ ಆತಿಯಾ ಹಾಗೂ ಕೆ.ಎಲ್.ರಾಹುಲ್

  ಫ್ಲ್ಯಾಟ್ ಖರೀದಿಸಿರುವ ಆತಿಯಾ ಹಾಗೂ ಕೆ.ಎಲ್.ರಾಹುಲ್

  ಕೆ.ಎಲ್.ರಾಹುಲ್ ಹಾಗೂ ಆತಿಯಾ ಶೆಟ್ಟಿ ಕಳೆದೊಂದೆರಡು ವರ್ಷದಿಂದಲೂ ಪ್ರೀತಿಯಲ್ಲಿದ್ದಾರೆ. ಇಬ್ಬರ ಪ್ರೀತಿಗೆ ಆತಿಯಾ ಶೆಟ್ಟಿಯ ತಂದೆ ನಟ, ಸುನಿಲ್ ಶೆಟ್ಟಿ ಗ್ರೀನ್ ಸಿಗ್ನಲ್ ಸಹ ಕೊಟ್ಟಾಗಿದೆ. ಕೆ.ಎಲ್.ರಾಹುಲ್ ಮನೆಯಲ್ಲೂ ಇವರಿಬ್ಬರ ಪ್ರೀತಿಗೆ ಒಪ್ಪಿಗೆ ಇದೆ ಎನ್ನಲಾಗುತ್ತಿದೆ. ಕೆಲವು ತಿಂಗಳ ಹಿಂದಷ್ಟೆ ಕೆ.ಎಲ್.ರಾಹುಲ್ ಮುಂಬೈನಲ್ಲಿ ಐಶಾರಾಮಿ ಫ್ಲ್ಯಾಟ್ ಒಂದನ್ನು ಖರೀದಿಸಿದ್ದು, ಆತಿಯಾ ಹಾಗೂ ಕೆ.ಎಲ್.ರಾಹುಲ್ ಅಲ್ಲಿಯೇ ನೆಲೆಸಲಿದ್ದಾರೆ ಎನ್ನಲಾಗುತ್ತಿದೆ.

  ಸಿನಿಮಾದಲ್ಲಿ ಮಿನುಗದ ಆತಿಯಾ ಶೆಟ್ಟಿ

  ಸಿನಿಮಾದಲ್ಲಿ ಮಿನುಗದ ಆತಿಯಾ ಶೆಟ್ಟಿ

  ಆತಿಯಾ ಶೆಟ್ಟಿ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರಾದರೂ ದೊಡ್ಡ ನಟಿಯಾಗಿ ಗುರುತಿಸಿಕೊಳ್ಳುವಲ್ಲಿ ವಿಫಲವಾಗಿದ್ದಾರೆ. ಸುನಿಲ್ ಶೆಟ್ಟಿ ಮಗಳಾಗಿರುವ ಆತಿಯಾ ಶೆಟ್ಟಿ, 2015 ರಲ್ಲಿಯೇ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಆದರೆ ಈವರೆಗೆ ನಟಿಸಿರುವುದು ಕೇವಲ ಮೂರು ಸಿನಿಮಾಗಳಲ್ಲಿ. 2019 ರಲ್ಲಿ ಬಿಡುಗಡೆ ಆದ 'ಮಿಟ್ಟಿ ಚೋರ್ ಚಕನಾ ಚೂರ್' ಸಿನಿಮಾ ಆತಿಯಾ ನಟಿಸಿರುವ ಕೊನೆಯ ಸಿನಿಮಾ. ಇನ್ನು ಕೆಎಲ್ ರಾಹುಲ್ ಭಾರತ ಕ್ರಿಕೆಟ್ ತಂಡದ ಅವಿಭಾಜ್ಯ ಅಂಗವಾಗಿಬಿಟ್ಟಿದ್ದಾರೆ. ಐಪಿಎಲ್‌ನಲ್ಲಿಯೂ ಸಖತ್ ಆಗಿ ಮಿಂಚುತ್ತಿದ್ದಾರೆ.

  English summary
  Cricketer KL Rahul and Athiya Shetty spotted in Air port. Both traveled together to Germany.
  Sunday, June 26, 2022, 20:12
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X