For Quick Alerts
  ALLOW NOTIFICATIONS  
  For Daily Alerts

  ಸೈಫ್ ಅಲಿ ಖಾನ್ ಎಂಬ ಬಾಲಿವುಡ್‌ ಪುಸ್ತಕ ಪ್ರೇಮಿ ಬಗ್ಗೆ ಎಷ್ಟು ಗೊತ್ತು?

  |

  ಬಾಲಿವುಡ್ ಎಂದರೆ ನೆನಪಾಗುವುದು ಮೋಜು ಮಸ್ತಿ. ಸಿನಿಮಾಗಳಲ್ಲಿ ನಟಿಸುವ ಕಲಾವಿದರು, ಬಿಡುವಿನ ವೇಳೆಯಲ್ಲಿ ಮಜಾ ಮಾಡುತ್ತಾರೆ, ವಿದೇಶಗಳಿಗೆ ಸುತ್ತಾಡುತ್ತಾರೆ ಎಂಬುದಷ್ಟೇ ಗೊತ್ತು. ಅನೇಕ ನಟರು ಉತ್ತಮ ಹವ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ಅವರಲ್ಲಿ ಸೈಫ್ ಅಲಿ ಖಾನ್ ಒಬ್ಬರು. ಸೈಫ್ ಅಲಿ ಖಾನ್ ಅವರು ಸಿನಿಮಾ ಕುಟುಂಬದಿಂದಲೇ ಬಂದವರಾದರೂ ಅವರಲ್ಲಿನ ನಟನನ್ನು ರೂಪಿಸಿದ್ದು ಪುಸ್ತಕಗಳು. ಹಾಗೆಂದು ಸ್ವತಃ ಸೈಫ್ ಹೇಳಿಕೊಂಡಿದ್ದಾರೆ.

  ಮಿಸೆಸ್ ಇಂಡಿಯಾ ಆದ್ರಂತೆ ಸನ್ನಿ ಲಿಯೋನ್ | Sunny Leone | TikTok | Filmibeat Kannada

  ಬಾಲಿವುಡ್‌ನಲ್ಲಿ ಸಿನಿಮಾ ಚಿತ್ರೀಕರಣ ಸ್ಥಗಿತಗೊಂಡಿರುವುದರಿಂದ ಸೈಫ್ ಅಲಿ ಖಾನ್ ತಮ್ಮ ಓದುವ ಹವ್ಯಾಸದಲ್ಲಿ ಮಗ್ನರಾಗಿದ್ದಾರೆ. ಅದನ್ನು ಅವರ ಪತ್ನಿ ಕರೀನಾ ಕಪೂರ್ ತಮಾಷೆಯಾಗಿ ಹೇಳಿದ್ದಾರೆ. ಕ್ಯಾಂಡಲ್ ಬೆಳಕಿನಲ್ಲಿ ಸೈಫ್ ಓದುತ್ತಿರುವ ಚಿತ್ರ ಮತ್ತು ತಾವು ಫೋನ್‌ನಲ್ಲಿ ಮುಳುಗಿರುವ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಕರೀನಾ, 'ಒಂದು ವಾರದವರೆಗೆ ಸೈಫ್ 'ಬುಕ್ಡ್' ಆಗಿರುವಂತೆ ಕಾಣಿಸುತ್ತದೆ' ಎಂದು ಹೇಳಿದ್ದಾರೆ.

  ಮನೆಯಲ್ಲಿ ಗ್ರಂಥಾಲಯ

  ಮನೆಯಲ್ಲಿ ಗ್ರಂಥಾಲಯ

  ಸೈಫ್ ಅಲಿ ಖಾನ್ ಪುಸ್ತಕ ಪ್ರೇಮಿ. ಸಮಯ ಸಿಕ್ಕಾಗೆಲ್ಲ ಅವರು ಬೇರೆ ಚಟುವಟಿಕೆಗಳಿಗಿಂತ ತಮ್ಮನ್ನು ಓದಿನಲ್ಲಿ ತೊಡಗಿಸಿಕೊಳ್ಳುತ್ತಾರೆ. ಮುಖ್ಯವಾಗಿ ಓದುವುದಕ್ಕಾಗಿ ಈಗಲೂ ಸಮಯ ಮೀಸಲಿಡುತ್ತಾರಂತೆ. ಅವರ ಮನೆಯಲ್ಲಿ ಆಕರ್ಷಕವಾದ ಗ್ರಂಥಾಲಯವನ್ನೇ ಮಾಡಿಕೊಂಡಿದ್ದಾರೆ. ಅದರಲ್ಲಿ ಹಳೆಯ ತಲೆಮಾರಿನ, ಹೊಸ ತಲೆಮಾರಿನ ಲೇಖಕರ ಪುಸ್ತಕಗಳು, ಮಹಾನ್ ಲೇಖಕರ ಸಹಿಯುಳ್ಳ ಕೃತಿಗಳು ಇವೆಯಂತೆ.

  ಬೊಟ್ಟನ್ನಿಟ್ಟು ಬನಾರಸ್‌ ಬೀದಿಯಲ್ಲಿ ಬಿಂದಾಸ್‌ ಸುತ್ತಾಡಿದ ಬಾಲಿವುಡ್ ಖಾನ್ ಪುತ್ರಿಬೊಟ್ಟನ್ನಿಟ್ಟು ಬನಾರಸ್‌ ಬೀದಿಯಲ್ಲಿ ಬಿಂದಾಸ್‌ ಸುತ್ತಾಡಿದ ಬಾಲಿವುಡ್ ಖಾನ್ ಪುತ್ರಿ

  ವ್ಯಕ್ತಿತ್ವ, ನಟನೆ ರೂಪಿಸಿದ್ದು ಪುಸ್ತಕಗಳು

  ವ್ಯಕ್ತಿತ್ವ, ನಟನೆ ರೂಪಿಸಿದ್ದು ಪುಸ್ತಕಗಳು

  ಸ್ವತಃ ಸೈಫ್ ಹೇಳಿಕೊಳ್ಳುವಂತೆ ಈ ಪುಸ್ತಕಗಳೇ ಇಂದು ಅವರನ್ನು ಐಕಾನಿಕ್ ನಟನನ್ನಾಗಿ ರೂಪಿಸಿವೆಯಂತೆ. ಹೀಗಾಗಿ ಪುಸ್ತಕಗಳನ್ನು ತಮ್ಮ ಹೃದಯಕ್ಕೆ ಯಾವಾಗಲೂ ಹತ್ತಿರವಾಗಿಟ್ಟುಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ. ಆಲ್‌ಫ್ರೆಡ್ ಹಿಚ್‌ಕಾಕ್ ಅವರ 'ದಿ ಥ್ರೀ ಇನ್ವೆಸ್ಟಿಗೇಟರ್ಸ್' ಎಂಬ ಮಕ್ಕಳ ಪುಸ್ತಕ ಅವರ ವ್ಯಕ್ತಿತ್ವವನ್ನು ರೂಪಿಸಿದ್ದಾಗಿ ತಿಳಿಸಿದ್ದಾರೆ.

  ಕಾಪಾಡಿಕೊಳ್ಳಲು ಬಯಸುವ ಕೃತಿಗಳು

  ಕಾಪಾಡಿಕೊಳ್ಳಲು ಬಯಸುವ ಕೃತಿಗಳು

  ಒಂದು ವೇಳೆ ಮನೆಗೆ ಬೆಂಕಿ ಬಿದ್ದರೆ ಮೊದಲು ಕಾಪಾಡಿಕೊಳ್ಳುವ ಪುಸ್ತಕಗಳೆಂದರೆ ಎಡ್ಗರ್ ಅಲ್ಲನ್ ಪೋ ಅವರ ಎಲ್ಲಾ ಪುಸ್ತಕಗಳು, ದಿ ಹೋಲಿ ಬೈಬಲ್‌ನ ಫೋಲಿಯೊ ಎಡಿಷನ್, ಲಿಯೋ ಟಾಲ್ ಸ್ಟಾಯ್ ಅವರ 'ವಾರ್ ಆಂಡ್ ಪೀಸ್' ಮತ್ತು ಸಲ್ಮಾನ್ ರಶ್ದಿ ಅವರ 'ದಿ ಸಟಾನಿಕ್ ವರ್ಸಸ್' ಕೃತಿ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

  ಬೆರ್ಟಿ ವೂಸ್ಟರ್ ಪಾತ್ರ ಇಷ್ಟ

  ಬೆರ್ಟಿ ವೂಸ್ಟರ್ ಪಾತ್ರ ಇಷ್ಟ

  ಪಿ.ಜಿ. ವುಡ್‌ಹೌಸ್ ಅವರ ಕೃತಿಗಳಲ್ಲಿನ ಬೆರ್ಟಿ ವೂಸ್ಟರ್ ಪಾತ್ರದೊಂದಿಗೆ ತಮ್ಮನ್ನು ಗುರುತಿಸಿಕೊಳ್ಳಲು ಅವರು ಬಯಸುವುದಾಗಿ ತಿಳಿಸಿದ್ದಾರೆ. ಲಿಯೋ ಟಾಲ್‌ಸ್ಟಾಯ್, ಉಂಬರ್ಟೊ ಎಕೊ ಮತ್ತು ಸಲ್ಮಾನ್ ರಶ್ದಿ ತಮ್ಮ ನೆಚ್ಚಿನ ಲೇಖಕರು, ಷೆರ್ಲಾಕ್ ಹೋಮ್ಸ್ ತಮ್ಮ ನೆಚ್ಚಿನ ಫಿಕ್ಷನ್ ಹೀರೋ ಎಂದು ತಿಳಿಸಿದ್ದಾರೆ.

  ಸಿನಿಮಾ ಮಾಡಲು ಬಯಸಿದ ಪುಸ್ತಕ

  ಸಿನಿಮಾ ಮಾಡಲು ಬಯಸಿದ ಪುಸ್ತಕ

  ಡಾ. ಸೆಯುಸ್ ಅವರ 'ದಿ 500 ಹ್ಯಾಟ್ಸ್ ಆಫ್ ಬಾರ್ಥೋಲೊಮೆವ್ ಕಬ್ಬಿನ್ಸ್' ಓದುತ್ತಾ ಬೆಳೆದಿದ್ದೆ. ರೊನಾಲ್ಡ್ ದಹಿ ಅವರ 'ಮಟಿಲ್ಡಾ'ವನ್ನು ನನ್ನ ಮಕ್ಕಳಿಗೆ ಓದಿ ಹೇಳಿದ್ದೆ, ಅಯಾನ್ ರಾಂಡ್ ಬರೆದ ಅಟ್ಲಾಸ್ ಶ್ರಗ್ಗಡ್ ಪುಸ್ತಕವನ್ನು ನಾನು ಸಿನಿಮಾ ಮಾಡಬೇಕು ಎಂದು ಬಯಸಿದ್ದೇನೆ. ಮೈಗುಲ್ ಡಿ ಸರ್ವೆಂಟಸ್ ಅವರ ಡಾನ್ ಕ್ಯುಕ್ಸೋಟ್ ಪುಸ್ತಕವನ್ನು ಸಂಪೂರ್ಣವಾಗಿ ಓದಲು ಇನ್ನೂ ಆಗಿಲ್ಲ. ಒಂದಕ್ಕಿಂತ ಹೆಚ್ಚು ಬಾರಿ ಓದಿದ ಪುಸ್ತಕವೆಂದರೆ ಉಂಬರ್ಟೋ ಎಕೊ ಅವರ 'ದಿ ಐಲ್ಯಾಂಡ್ ಆಫ್ ದಿ ದೇ' ಎಂದು ವಿವರಿಸಿದ್ದಾರೆ.

  ಓದುವುದೇ ಮನರಂಜನೆಯ ಮಾಧ್ಯಮ

  ಓದುವುದೇ ಮನರಂಜನೆಯ ಮಾಧ್ಯಮ

  'ನಾನು ಭೋಪಾಲದ ಹಳೆಯ ಅರಮನೆಯಲ್ಲಿ ಬೆಳೆಯುವಾಗ ಅಲ್ಲಿ ಟಿವಿ ಇರಲಿಲ್ಲ. ಹೀಗಾಗಿ ನನ್ನಲ್ಲಿ ಓದುವ ಹವ್ಯಾಸ ಬೆಳೆಯಿತು. ಅದು ನಮ್ಮ ಮೂಲ ಮನರಂಜನೆಯೂ ಆಗಿತ್ತು. ಇಲ್ಲದಿದ್ದರೆ ಮನೆಯಲ್ಲಿನ ಹಿರಿಯರಿಗೆ ಕಥೆ ಹೇಳುವಂತೆ ಗಂಟು ಬೀಳುತ್ತಿದ್ದೆವು. ಅದರಲ್ಲಿಯೂ ಹಿಂದೂ ಪುರಾಣಗಳ ಕಥೆಯೆಂದರೆ ಅಚ್ಚುಮೆಚ್ಚು. ಈಗ ಕಥೆ ಹೇಳುವ ಕಥೆಯೇ ಬಹುತೇಕ ಹೊರಟುಹೋಗಿದೆ. ಮಕ್ಕಳನ್ನು ಮಲಗಿಸಲು ಕಥೆ ಹೇಳುತ್ತಿದ್ದರು. ನನ್ನನ್ನು ನೋಡಿಕೊಳ್ಳುತ್ತಿದ್ದ ಆಯಾ ಅದನ್ನು ಮಾಡುತ್ತಿದ್ದಳು. ಆದರೆ ಅದೇ ರೀತಿ ನಾನು ಕಥೆ ಹೇಳಬಲ್ಲೆನೇ? ಗೊತ್ತಿಲ್ಲ.

  ಲಾರ್ಡ್ಸ್ ಆಫ್ ದಿ ರಿಂಗ್ಸ್

  ಲಾರ್ಡ್ಸ್ ಆಫ್ ದಿ ರಿಂಗ್ಸ್

  ಅವರು ಕಥೆಯನ್ನು ಹಿಂದಿ ಅಥವಾ ಉರ್ದುವಿನಲ್ಲಿ ಹೇಳುತ್ತಿದ್ದರು. ಅವುಗಳು ಸಾಮಾನ್ಯವಾಗಿ ಕಾಡು ಮತ್ತು ಶಿಕಾರಿಯ ಕುರಿತಾಗಿ ಇರುತ್ತಿತ್ತು. ಮನೆಯ ತುಂಬಾ ನನ್ನ ಅಪ್ಪನ ಪುಸ್ತಕ ಹರಡಿಕೊಂಡಿರುತ್ತಿತ್ತು. ಅವರ ಕಡೆಯ ದಿನಗಳಲ್ಲಿ ಸುಲಭ ಓದಿನ ಪುಸ್ತಕಗಳನ್ನು ಇಷ್ಟಪಡುತ್ತಿದ್ದರು. ಅವುಗಳನ್ನು ಓದುವುದನ್ನು ನಾನೂ ಎಂಜಾಯ್ ಮಾಡುತ್ತಿದ್ದೆ. ಪುಸ್ತಕವೊಂದು ಅದ್ಭುತ ಸಿನಿಮಾವಾಗಿ ಅಳವಡಿಕೆಯಾಗಿದ್ದೆಂದರೆ 'ದಿ ಲಾರ್ಡ್ಸ್ ಆಪ್ ದಿ ರಿಂಗ್ಸ್' ಎಂದು ಸೈಫ್ ತಿಳಿಸಿದ್ದಾರೆ.

  English summary
  Bollywood actor Saif Ali Khan is a passionate reader of all kind of books. He thinks books made him a good actor.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X