Just In
Don't Miss!
- Education
UAS Dharwad Recruitment 2021: ರಿಸರ್ಚ್ ಅಸೋಸಿಯೇಟ್ ಹುದ್ದೆಗೆ ಜ.28ಕ್ಕೆ ನೇರ ಸಂದರ್ಶನ
- Sports
ಐಪಿಎಲ್ 2021: ತಂಡದಿಂದ ಸ್ಟೀವ್ ಸ್ಮಿತ್ ಕೈಬಿಟ್ಟ ರಾಜಸ್ಥಾನ್ ರಾಯಲ್ಸ್
- News
ಒಂದೇ ವಾರದಲ್ಲಿ ಬೃಹತ್ ಕ್ವಾರೆಂಟೈನ್ ಕೇಂದ್ರ ನಿರ್ಮಿಸಿದ ಚೀನಾ
- Lifestyle
ಜನವರಿ 23 ಪರಾಕ್ರಮ ದಿವಸ್: ಸುಭಾಷ್ ಚಂದ್ರ ಬೋಸ್ ಬಗ್ಗೆ ನಿಮಗೆ ತಿಳಿದಿರದ ಸಂಗತಿಗಳು
- Automobiles
ಸನ್ ಫಿಲ್ಮ್ ತೆರವಿಗೆ ವಿಶೇಷ ಕಾರ್ಯಾಚರಣೆ ಆರಂಭಿಸಿದ ಪೊಲೀಸ್ ಇಲಾಖೆ
- Finance
ಸೆನ್ಸೆಕ್ಸ್, ನಿಫ್ಟಿ ಹೊಸ ದಾಖಲೆ; ಟಾಟಾ ಮೋಟಾರ್ಸ್ 6%ಗೂ ಹೆಚ್ಚು ಗಳಿಕೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೃತಿಕ್ ರೋಷನ್ ಸಿನಿಮಾಕ್ಕೆ ಹೃತಿಕ್ ರೋಷನ್ ವಿಲನ್!?
ಸೂಪರ್ ಮ್ಯಾನ್, ಬ್ಯಾಟ್ ಮ್ಯಾನ್, ಐರನ್ ಮ್ಯಾನ್ ಹೀಗೆ ಹಲವು ಸೂಪರ್ ಹೀರೊಗಳು ಹಾಲಿವುಡ್‌ನಲ್ಲಿದ್ದಾರೆ.
ಭಾರತಕ್ಕೆ ಇರುವುದು ಒಬ್ಬನೇ ಸೂಪರ್ ಹೀರೋ 'ಕ್ರಿಶ್'. ಇನ್ನೂ ಕೆಲವು ಸೂಪರ್ ಹೀರೊಗಳನ್ನು ಸೃಷ್ಟಿಸುವ ಪ್ರಯತ್ನ ಮಾಡಲಾಯಿತಾದರೂ, ಯಾವ ಭಾರತೀಯ ಸೂಪರ್ ಹೀರೋ ಸಿನಿಮಾಗಳೂ ಸಹ ಕ್ರಿಶ್‌ನಷ್ಟು ಯಶಸ್ಸು ಗಳಿಸಲಿಲ್ಲ.
ಕ್ರಿಶ್ ಸರಣಿಯ ಮೂರು ಸಿನಿಮಾಗಳು ಈಗಾಗಲೇ ಬಂದಿವೆ. ಇದೀಗ ಕ್ರಿಶ್ 4 ಯೋಜನೆ ಸಹ ಸಿದ್ಧಪಡಿಸಿದ್ದಾರೆ ಹೃತಿಕ್ ತಂದೆ ರಾಕೇಶ್ ರೋಷನ್. ಆದರೆ ಈ ಸಿನಿಮಾದಲ್ಲಿ ವಿಶೇಷವೊಂದು ಇರಲಿದೆ.
ಕ್ರಿಶ್ 4 ನಲ್ಲಿ ಹೃತಿಕ್ ರೋಷನ್ ಎದುರಿಗೆ ಹೃತಿಕ್ ರೋಷನ್ ಅವರೇ ವಿಲನ್ ಆಗಿರಲಿದ್ದಾರೆ. ಹೌದು, ಕ್ರಿಶ್ 4 ನಲ್ಲಿ ಹೃತಿಕ್ ರೋಷನ್ ದ್ವಿಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

'ಜಾದೂ' ಮರಳಿ ಭೂಮಿಗೆ ಬರಲಿದೆ
ಇದೊಂದೆ ಅಲ್ಲ ಇನ್ನೂ ಕೆಲವು ವಿಶೇಷಗಳು ಕ್ರಿಶ್ 4 ನಲ್ಲಿ ಇರಲಿವೆಯಂತೆ. ಕ್ರಿಶ್ ಸಿನಿಮಾ ಸರಣಿಗೆ ಮುನ್ನುಡಿಯಾಗಿದ್ದ 'ಕೋಯಿ ಮಿಲ್ ಗಯಾ' ಸಿನಿಮಾದಲ್ಲಿದ್ದ ಅಂತರಿಕ್ಷ ಜೀವಿ 'ಜಾದೂ' ಕ್ರಿಶ್ 4 ನಲ್ಲಿ ಮರಳಿ ಬರಲಿದೆಯಂತೆ.

ರೋಹಿತ್ ಪಾತ್ರ ಮತ್ತೆ ಬರಲಿದೆ!
ಅಷ್ಟೇ ಅಲ್ಲ ಕ್ರಿಶ್ ನ ತಂದೆ 'ರೋಹಿತ್' ಪಾತ್ರ ಸಹ ಕ್ರಿಶ್ 4 ನಲ್ಲಿರಲಿದೆ. ಕ್ರಿಶ್ ಸರಣಿಯಲ್ಲಿ ರೋಹಿತ್ ಪಾತ್ರ ಈಗಾಗಲೇ ಮೃತವಾಗಿದೆ. ಆದರೆ ಈ ಸಿನಿಮಾದಲ್ಲಿ ರೋಹಿತ್ ಮತ್ತೆ ಜೀವಂತವಾಗುತ್ತಾನೆ ಎನ್ನಲಾಗುತ್ತಿದೆ.

ಕ್ರಿಶ್ ಜೊತೆಗೆ ಒಬ್ಬ ಸೂಪರ್ ವುಮನ್
ಕ್ರಿಶ್ 4 ಸಿನಿಮಾದಲ್ಲಿ ಸೂಪರ್ ಹೀರೊ ಜೊತೆಗೆ ಸೂಪರ್ ವುಮನ್ ಅನ್ನು ಸಹ ಪರಿಚಯಿಸಲಾಗುತ್ತಿದೆ. ಕ್ರಿಶ್ 4 ನ ವಿಲನ್ ಫವರ್ ಫುಲ್ ಆಗಿರಲಿದ್ದು, ವಿಲನ್ ಅನ್ನು ಸೋಲಿಸಲು ಕ್ರಿಶ್ ಗೆ ಸೂಪರ್ ವುಮನ್ ಒಬ್ಬರು ನೆರವಾಗಲಿದ್ದಾರಂತೆ.

ಸಿನಿಮಾದಲ್ಲಿ ಇಬ್ಬರು ನಾಯಕಿಯರು
ಕ್ರಿಶ್ 4 ನಲ್ಲಿ ಸೂಪರ್ ವುಮನ್ ಆಗಿ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ ನಾಯಕಿಯಾಗಿರಲಿದ್ದಾರೆ ಎನ್ನಲಾಗುತ್ತಿದೆ. ಲಾಕ್‌ಡೌನ್ ಅವಧಿಯಲ್ಲಿ ಸ್ಕ್ರಿಪ್ಟ್ ಅನ್ನು ಸಾಕಷ್ಟು ತಿದ್ದು ತೀಡಿದ್ದಾರಂತೆ ರಾಕೇಶ್ ರೋಷನ್, 2021 ರಲ್ಲಿ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಲಿದೆ.