»   » ದುಲ್ಕರ್ ಸಲ್ಮಾನ್ ಗೆ ಜೋಡಿಯಾದ ಕೃತಿ ಕರಬಂಧ

ದುಲ್ಕರ್ ಸಲ್ಮಾನ್ ಗೆ ಜೋಡಿಯಾದ ಕೃತಿ ಕರಬಂಧ

Posted By:
Subscribe to Filmibeat Kannada

ಮಲಯಾಳಂ ನಟ ದುಲ್ಕರ್ ಸಲ್ಮಾನ್ ಬಾಲಿವುಡ್ ನಲ್ಲಿ ತಮ್ಮ ಚೊಚ್ಚಲ ಸಿನಿಮಾ ಮಾಡುತ್ತಿದ್ದಾರೆ. ಆಕರ್ಶ ಖುರಾನಾ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ನಟ ಇರ್ಫಾನ್ ಖಾನ್ ಮತ್ತು ದುಲ್ಕರ್ ಸಲ್ಮಾನ್ ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ.

ಮಿಥಾಲಿ ಪಾಲ್ಕರ್ ಈ ಚಿತ್ರದ ನಾಯಕಿಯಾಗಿದ್ದು, ಈಗ ಈ ಚಿತ್ರಕ್ಕೆ ಮತ್ತೋರ್ವ ನಟಿಯ ಎಂಟ್ರಿಯಾಗಿದೆ. ಹೌದು, ಕನ್ನಡದ ನಟಿ ಕೃತಿ ಕರಬಂಧ 'ಕರ್ವಾನ್' ಚಿತ್ರದಲ್ಲಿ ದುಲ್ಕರ್ ಸಲ್ಮಾನ್ ಜೋಡಿಯಾಗಲಿದ್ದಾರಂತೆ.

ಕೃತಿ ಖರಬಂದ ಮದುವೆಗೆ ಬರೋಬ್ಬರಿ 2 ಕೋಟಿ ರೂಪಾಯಿ ಖರ್ಚು.!

Kriti Kharbanda heroine for Dulquer Salmaan

ಮೂಲಗಳ ಪ್ರಕಾರ ಕೃತಿ ಕರಬಂಧ ಅವರದ್ದು ಅತಿಥಿ ಪಾತ್ರವಾಗಿದ್ದು, ದುಲ್ಕರ್ ಲವರ್ ಆಗಿ ಅಭಿನಯಿಸಲಿದ್ದಾರಂತೆ. ಗುರುವಾರದಿಂದ ಕೊಚ್ಚಿಯಲ್ಲಿ ಕೃತಿ ಅವರ ದೃಶ್ಯಗಳ ಚಿತ್ರೀಕರಣ ನಡೆಯಲಿದ್ದು, ಈಗಾಗಲೇ ಕೃತಿ ಚಿತ್ರತಂಡವನ್ನ ಸೇರಿಕೊಂಡಿದ್ದಾರೆ ಎನ್ನಲಾಗಿದೆ.

ಅಂದ್ಹಾಗೆ, ಕೃತಿ ಕರಬಂಧ ಬಾಲಿವುಡ್ ನಲ್ಲಿ ಅಭಿನಯಿಸುತ್ತಿರುವುದು ಇದೇ ಮೊದಲಲ್ಲ. ಇದಕ್ಕು ಮುಂಚೆ 'ರಾಜ್' ಚಿತ್ರದಲ್ಲಿ ಅಭಿನಯಿಸಿದ್ದಾರೆ. ಅದಾದ ನಂತರ 'ಗೆಸ್ಟ್ ಇನ್ ಲಂಡನ್' ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ.

English summary
Kriti Kharbanda to join Irrfan and Dalquer in Ronnie Screwvala’s Karwaan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X