Don't Miss!
- Finance
ಟಾಟಾದ ವಾಹನಗಳಿಗೆ ಬಂಪರ್ ರಿಯಾಯಿತಿ: ಪ್ರತಿ ತಿಂಗಳು ಕಡಿಮೆ ಇಎಂಐ
- Sports
ಅತಿಹೆಚ್ಚು ಬಾರಿ 10 ವಿಕೆಟ್ಗಳ ಗೆಲುವು ಸಾಧಿಸಿರುವ ಐಪಿಎಲ್ ತಂಡ ಯಾವುದು ಗೊತ್ತಾ?
- News
ಕೊರೊನಾ ನೆಗಟಿವ್ ಬಂದಿದ್ದರೂ ಕೂಡ ಈ ಲಕ್ಷಣಗಳಿದ್ದರೆ ನಿರ್ಲಕ್ಷಿಸಬೇಡಿ
- Lifestyle
ಹನುಮ ಜಯಂತಿ 2021 :ಪೂಜಾವಿಧಾನ ಹಾಗೂ ಹನುಮನನ್ನು ಒಲಿಸಿಕೊಳ್ಳುವ ಮಾರ್ಗಗಳು ಇಲ್ಲಿದೆ
- Automobiles
ಹೊಸ ಫೀಚರ್ಸ್ ಒಳಗೊಂಡ ಸೊನೆಟ್ ಹೆಚ್ಟಿಎಕ್ಸ್ ಪರಿಚಯಿಸಲಿದೆ ಕಿಯಾ ಮೋಟಾರ್ಸ್
- Education
English Language Day 2021: ಇಂಗ್ಲೀಷ್ ಭಾಷೆ ಕಲಿಯೋದು ಏಕೆ ಮುಖ್ಯ ? ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸುಶಾಂತ್ ಸಾವಿನ ಕುರಿತು ಮೌನವಹಿಸಿದ್ದು ಏಕೆ ಎಂದು ಬಹಿರಂಗ ಪಡಿಸಿದ ಕೃತಿ ಸನೂನ್
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ವಿಚಾರ ಕಳೆದ ವರ್ಷ ಬಾಲಿವುಡ್‌ನ ಹಾಟ್ ಟಾಪಿಕ್ ಆಗಿತ್ತು. ಸಿನಿಮಾ ಇಂಡಸ್ಟ್ರಿ, ರಾಜಕೀಯ ವಲಯ, ಸಾಮಾಜಿಕ ಜಾಲತಾಣ ಹೀಗೆ ಎಲ್ಲೆಡೆಯೂ ಸುಶಾಂತ್ ಸಾವಿನ ಪ್ರಕರಣ ಬಹಳ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿತ್ತು. ಸುಶಾಂತ್ ಸಾವಿನ ಬಳಿಕ ಬಾಲಿವುಡ್ ಇಂಡಸ್ಟ್ರಿ ಎರಡು ಭಾಗವಾಯಿತು. ನೆಪೋಟಿಸಂ ವಿರುದ್ಧ ಸ್ಟಾರ್ ಕಲಾವಿದರು ತಿರುಗಿಬಿದ್ದರು. ಪ್ರಭಾವಿ ನಿರ್ಮಾಪಕ, ನಟರ ವಿರುದ್ಧ ಟೀಕೆ ವ್ಯಕ್ತವಾಯಿತು.
ಕಂಗನಾ ರಣಾವತ್ ಬಹಿರಂಗವಾಗಿ ನೆಪೋಟಿಸಂ ಬಗ್ಗೆ ಅಸಮಾಧಾನ ಹೊರಹಾಕಿದರು. ಸುಶಾಂತ್ ಸಾವಿಗೆ ಬಾಲಿವುಡ್ ಪ್ರಭಾವಿಗಳು ಕಾರಣ ಎಂದು ಆರೋಪಿಸಿದರು. ಈ ಆರೋಪದಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ಒಳಗೊಳಗೆ ಬೆಂಕಿ ಹೊತ್ತಿ ಉರಿಯಿತು. ಇಂತಹ ಸಮಯದಲ್ಲಿ ನಾವು ಮಾತನಾಡದೆ ಇರುವುದು ಸೂಕ್ತ ಎಂದು ಅನೇಕರು ಮೌನವಹಿಸಿದರು. ಹೀಗೆ, ಸುಶಾಂತ್ ಸಾವಿನ ಬಳಿಕ ಮೌನವಾಗಿದ್ದವರಲ್ಲಿ ನಟಿ ಕೃತಿ ಸನೂನ್ ಸಹ ಒಬ್ಬರು. ಆ ಸಂದರ್ಭದಲ್ಲಿ ತಾನು ಏಕೆ ಮಾತನಾಡಲಿಲ್ಲ ಎಂದು ಇತ್ತೀಚಿನ ಸಂದರ್ಶನವೊಂದರಲ್ಲಿ ನಟಿ ಕೃತಿ ಬಹಿರಂಗಪಡಿಸಿದ್ದಾರೆ. ಮುಂದೆ ಓದಿ...
ಸುಶಾಂತ್ ಸಿಂಗ್ ಕೇಸ್: 33 ಮಂದಿ ವಿರುದ್ಧ 30 ಸಾವಿರ ಪುಟಗಳ ಚಾರ್ಜ್ಶೀಟ್ ಸಲ್ಲಿಕೆ

ಅದರ ಸುತ್ತ ನಕಾರಾತ್ಮಕ ಶಕ್ತಿ ಇತ್ತು
ಖಾಸಗಿ ವೆಬ್‌ಸೈಟ್‌ವೊಂದಕ್ಕೆ ಸುಶಾಂತ್ ಸಾವಿನ ಬಗ್ಗೆ ಪ್ರತಿಕ್ರಿಯಿಸಿರುವ ಕೃತಿ ಸನೂನ್ "ಒಂದು ಹಂತದಲ್ಲಿ ಈ ಘಟನೆ ತುಂಬ ದೊಡ್ಡ ಮಟ್ಟದಲ್ಲಿ ಚರ್ಚೆಯಲ್ಲಿತ್ತು. ಅದರ ಸುತ್ತಲೂ ಹೆಚ್ಚು ನಕಾರಾತ್ಮಕ ಶಕ್ತಿ ಆವರಿಸಿತ್ತು. ನಾನು ಅದರ ಭಾಗವಾಗಲು ಇಷ್ಟಪಡಲಿಲ್ಲ. ಹಾಗಾಗಿ, ನಾನು ಅದರಿಂದ ದೂರವೇ ಉಳಿದೆ'' ಎಂದು ಕೃತಿ ಹೇಳಿಕೊಂಡಿದ್ದಾರೆ.

ಗಟ್ಟಿಯಾಗಿ ಮಾತನಾಡುವ ಅಗತ್ಯವಿರಲಿಲ್ಲ
''ಆ ಪರಿಸ್ಥಿತಿ ಬಗ್ಗೆ ನನಗೆ ಅನಿಸಿದ್ದು ನನ್ನಲ್ಲೇ ಇರಿಸಲು ನಿರ್ಧರಿಸಿದೆ. ನಾನು ಭಾವಿಸಿದರ ಕುರಿತು ಯಾರೊಂದಿಗೂ ಚರ್ಚಿಸುವ ಅಥವಾ ಮಾತನಾಡುವ ಅಗತ್ಯವಿಲ್ಲ ಎನಿಸಿತು. ನಿಮಗೆ ಏನು ಅನಿಸುತ್ತದೆ ಅದನ್ನು ಈಗ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸಬಹುದು. ಗಟ್ಟಿಯಾಗಿ ಹೊರಗಡೆ ಮಾತನಾಡುವುದನ್ನು ಬಿಟ್ಟು ಬರವಣಿಗೆ ಮೂಲಕ ಅದನ್ನು ಹೊರ ಜಗತ್ತಿಗೆ ತಿಳಿಸುವುದೇ ಒಳ್ಳೆಯದು ಅಲ್ಲವೇ'' ಎಂದಿದ್ದಾರೆ.
ಸುಶಾಂತ್ ಸಾವು: ಸಿಬಿಐ ವರದಿ ಬಗ್ಗೆ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್

2020 ಬಹಳ ಕೆಟ್ಟ ವರ್ಷ
2020 ಬಹಳ ಕೆಟ್ಟ ವರ್ಷ ಎಂದು ಕೃತಿ ಸನೂನ್ ಅಭಿಪ್ರಾಯ ಪಟ್ಟಿದ್ದಾರೆ. ''2020 ತನ್ನ ಜೀವನದ ಅತ್ಯಂತ ಕೆಟ್ಟ ವರ್ಷ, ನನ್ನಿಂದ ಸಾಧ್ಯವಾದರೆ ಈ ವರ್ಷವನ್ನು ಅಳಿಸಿ ಹಾಕಿಬಿಡುತ್ತೇನೆ'' ಎಂದು ಬೇಸರ ಹೊರಹಾಕಿದ್ದಾರೆ.

ರಾಬ್ತಾ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು
2017ರಲ್ಲಿ ಬಿಡುಗಡೆಯಾಗಿದ್ದ ರಾಬ್ತಾ ಚಿತ್ರದಲ್ಲಿ ಕೃತಿ ಸನೂನ್ ಮತ್ತು ಸುಶಾಂತ್ ಸಿಂಗ್ ಒಟ್ಟಿಗೆ ನಟಿಸಿದ್ದರು. ದಿನೇಶ್ ವಿಜನ್ ನಿರ್ದೇಶಿಸಿದ್ದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಹಿನ್ನಡೆ ಅನುಭವಿಸಿತ್ತು. ಇನ್ನು 2020ರ ಜೂನ್ 14 ರಂದು ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣವನ್ನು ಸಿಬಿಐ ಕೈಗೆತ್ತಿಕೊಂಡಿದ್ದು, ಇನ್ನು ಅಂತಿಮ ವರದಿ ಸಲ್ಲಿಕೆ ಮಾಡಿಲ್ಲ.